ಬೇಕಾಗುವ ಪದಾರ್ಥಗಳು…
ಬೆಂಡೆಕಾಯಿ-ಅರ್ಧ ಕೆಜಿ
ಹಸಿ ಮೆಣಸಿನಕಾಯಿ- 7-8
ಕೊತ್ತಂಬರಿ ಸೊಪ್ಪು- ಸ್ವಲ್ಪ
ಬೆಳ್ಳುಳ್ಳಿ-4-5 ಎಸಳು
ಹುಣಸೆಹಣ್ಣು- ಬೆಲ್ಲ ಗಾತ್ರದಷ್ಟು
ಜೀರಿಗೆ- 1 ಚಮಚ
ಸಾಸಿವೆ- ಕಾಲು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ….
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ಆರಲು ಬಿಡಬೇಕು. ನಂತರ ಬೆಂಡೆಕಾಯಿಯನ್ನು ಪಲ್ಯಕ್ಕೆ ಹೆಚ್ಚಿಕೊಳ್ಳುವಂತೆ ಹೆಚ್ಚಿಕೊಳ್ಳಬೇಕು. ಬಾಣಲಿಯಲ್ಲಿ 1 ಸ್ಪೂನ್ ಎಣ್ಣೆ ಹಾಕಿಕೊಂಡು ಲೋಳೆ ಹೋಗುವ ತನಕ ಚೆನ್ನಾಗಿ ಹುರಿಯಿರಿ,
ಅದೇ ಬಾಣಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಸ್ವಲ್ಪ ಹೊತ್ತು ಬಾಡಿಸಿಕೊಳ್ಳಬೇಕು. ಹುರಿದುಕೊಂಡ ಪದಾರ್ಥಗಳು ತಣ್ಣಗಾದ ಮೇಲೆ, ಹುಣಸೆಹಣ್ಣಿನೊಂದಿಗೆ ಮಿಕ್ಸಿ ಜಾರ್’ಗೆ ಹಾಕಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.
ರುಬ್ಬಿಕೊಂಡ ಮಿಶ್ರಣವನ್ನು ಮತ್ತೊಮ್ಮೆ ಬಾಣಲಿಗೆ ಹಾಕಿಕೊಳ್ಳಿ. ನಂತರ ಒಂದು ಪ್ಯಾನ್’ಗೆ 7-8 ಚಮಚ ಎಣ್ಣೆ ಹಾಕಿ ಸಾಸಿವೆ ಹಾಗೂ ಸ್ವಲ್ಪ ಜೀರಿಗೆ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಚೆನ್ನಾಗಿ ಬಾಡಿಸಿದರೆ, ರುಚಿಕರವಾದ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧ.