ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಉಳ್ಳಾಲ: ಕುತ್ತಾರು ಕೊರಗಜ್ಜನ ಕ್ಷೇತ್ರದ ಹೆಸರಿನಲ್ಲಿ ನಕಲಿ ಫೇಸ್‌ಬುಕ್ – ದೇಣಿಗೆ ಕೊಡುವಂತೆ ಮನವಿ

On: June 13, 2024 5:36 PM
Follow Us:
---Advertisement---

ಉಳ್ಳಾಲ: ಇಲ್ಲಿನ ಕುತ್ತಾರುವಿನಲ್ಲಿರುವ ಪ್ರಸಿದ್ಧ ಕೊರಗಜ್ಜನ ಕ್ಷೇತ್ರದ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ತೆರೆದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿರುವ ಬಗ್ಗೆ ಸೈಬ‌ರ್ ಠಾಣೆಯಲ್ಲಿ ದೂರು ದಾಖಲಾಗಿದೆ.

“ಡಿವೋಟೀಸ್ ಆಫ್ ಕುತ್ತಾರು ಕೊರಗಜ್ಜ” ಎಂಬ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಪೇಜ್ ತೆರೆಯಲಾಗಿದೆ. ಈ ಪೇಜ್ ನಲ್ಲಿ ನಾವು ಕಷ್ಟದಲ್ಲಿದ್ದೇವೆ. ಕೊರಗಜ್ಜನ ಭಕ್ತರು ಹಣದ ಸಹಾಯ ಮಾಡಿ. ಪವಾಡಗಳಿಗೆ ನಂಬಿಕೆಯ ಕೀಲಿಕೈ ಎಂದು ಬರೆದುಕೊಳ್ಳಲಾಗಿದೆ. ಜೊತೆಗೆ ಕೊರಗಜ್ಜನ ಫೋಟೋ ಹಾಕಿ ಶೈಕ್ಷಣಿಕ ಉದ್ದೇಶಗಳಿಗೆ ದಯವಿಟ್ಟು 200 ರೂ. ಸಹಾಯ ಮಾಡಿ ಎಂದು ಪೋಸ್ಟ್ ಹಾಕಲಾಗಿದೆ. ಇದೇ ಪೋಸ್ಟ್ ಅನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಕೆನರಾ ಬ್ಯಾಂಕ್ ಐಎಫ್‌ಎಸ್ ಸಿ ಕೋಡ್ ಸಹಿತ ಬ್ಯಾಂಕ್ ಖಾತೆಯನ್ನೂ ನೀಡಲಾಗಿದೆ.

“ದೇವರು ನಮ್ಮನ್ನು ನೋಡುತ್ತಿದ್ದಾನೆ” ಎಂಬ ತಲೆಬರಹದಲ್ಲಿ ಮತ್ತೊಂದು ಪೋಸ್ಟ್ ಹಾಕಲಾಗಿದ್ದು, ದೇವರು ನಮ್ಮನ್ನು ನೋಡುತ್ತಿದ್ದಾನೆ. ಆತನ ಮಾರ್ಗದರ್ಶನ ಯಾವಾಗಲೂ ನಮ್ಮೊಂದಿಗಿದೆ. ಹಣದ ಸಹಾಯಕ್ಕಾಗಿ ಬೇಡಿಕೊಳ್ಳುತ್ತೇನೆ ಎಂದು ಬರೆಯಲಾಗಿದೆ. ಎಲ್ಲಾ ಪೋಸ್ಟ್‌ಗಳ ಕೆಳಗಡೆ ಕೀರ್ತಿ ಮೆಹ್ರಾ ಎಂಬ ಹೆಸರು ಬರೆದು ಬ್ಯಾಂಕ್ ಖಾತೆ ಸಂಖ್ಯೆ ಹಾಕಲಾಗಿದೆ. ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಹಣಕಾಸಿನ ಸಹಾಯಕ್ಕಾಗಿ ಧನ್ಯವಾದಗಳು ಎಂಬ ಕಮೆಂಟ್ ಬಂದಿದೆ. ಸದ್ಯ ಖಾತೆಗೆ ಸಾರ್ವಜನಿಕರು, ಕೊರಗಜ್ಜನ ಭಕ್ತರು ಹಣ ಹಾಕಿದಂತಿದೆ.

ಈ ಬಗ್ಗೆ ಕುತ್ತಾರಿನ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗ ತನಿಯ ಸೇವಾ ಟ್ರಸ್ಟ್ ನವರು ಪೊಲೀಸರಿಗೆ ದೂರು ನೀಡಿದ್ದು, ನಕಲಿ ಖಾತೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕುತ್ತಾರು ಕೊರಗಜ್ಜನ ಆದಿಸ್ಥಳದ ಆಡಳಿತ ಮಂಡಳಿಯ ಯಾವುದೇ ಉದ್ದೇಶಕ್ಕಾಗಿ ಆನ್ಲೈನ್ ಮೂಲಕ ದೇಣಿಗೆ ಸಂಗ್ರಹಿಸುವುದಿಲ್ಲ. ಶ್ರೀಕ್ಷೇತ್ರದಲ್ಲಿ ಆನ್ಲೈ‌‌ನ್ ಸೇವೆಯಾಗಲೀ, ದೇಣಿಗೆ ಸಂಗ್ರಹವಾಗಲೀ ಇರುವುದಿಲ್ಲ. ಕ್ಷೇತ್ರದ ಹೆಸರಲ್ಲಿ ಯಾವುದೇ ರೀತಿಯ ಪ್ರಕಟಣೆಗಳು ಬಂದಲ್ಲಿ ಅಂತಹ ಮನವಿಗೆ ಸ್ಪಂದಿಸಬಾರದಾಗಿ ವಿನಂತಿಸುತ್ತೇವೆ. ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೃತ್ಯ ಇದಾಗಿದ್ದು ಜಾಲತಾಣದಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಕ್ಷೇತ್ರದಲ್ಲಿ ನಡೆಯುವ ಎಲ್ಲ ಸೇವೆಗಳಿಗೂ ಕಡ್ಡಾಯವಾಗಿ ರಸೀದಿ ನೀಡಲಾಗುತ್ತದೆ. ಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಮಾಹಿತಿಯನ್ನು ನಂಬದಂತೆ ಆಡಳಿತ ಮಂಡಳಿ ಕೇಳಿಕೊಂಡಿದೆ.

Join WhatsApp

Join Now

Join Telegram

Join Now

Leave a Comment