SUDDIKSHANA KANNADA NEWS/ DAVANAGERE/DATE:14_08_2025
ದಾವಣಗೆರೆ: ಆಗಸ್ಟ್ 17 ರಿಂದ ಪ್ರತಿ ಭಾನುವಾರ, ರಜಾದಿನಗಳಂದು ದಾವಣಗೆರೆಯಿಂದ ಜೋಗ-ಸಿಗಂದೂರು ಮತ್ತು ಅಂಜನಾದ್ರಿಬೆಟ್ಟ-ಹಂಪಿ-ತುಂಗಾಭದ್ರಾ ಡ್ಯಾಂ ಹಾಗೂ ಇಂಡಗುಂಜಿ-ಅಪ್ಸರಕೊಂಡ ವಾಟರ್ ಫಾಲ್ಸ್-ಇಕೋಬೀಚ್‍ಗೆ ದಾವಣಗೆರೆ ಕೆಎಸ್ಆರ್ಟಿಸಿ ಯಿಂದ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಪ್ರಾರಂಭಿಸಲಾಗಿದೆ.
READ ALSO THIS STORY: BIG BREAKING: ರೇಣುಕಾಸ್ವಾಮಿ ಹತ್ಯೆ ಪ್ರಕರಣ: A1 ಪವಿತ್ರಾ ಗೌಡ, ಪ್ರದೋಶ್ 2ನೇ ಬಾರಿಗೆ ಜೈಲಿಗೆ!
ದಾವಣಗೆರೆ, ಸಿಂಗದೂರು, ಇಕ್ಕೇರಿಕೋಟೆ, ವರದಮೂಲ, ಜೋಗಫಾಲ್ಸ್,ಗೆ 2 ಬದಿ ಸೇರಿ ರೂ.600, ಮಕ್ಕಳಿಗೆ ರೂ.460, ಇರುತ್ತದೆ. ದಾವಣಗೆರೆ, ಅಂಜನಾದ್ರಿಬೆಟ್ಟ, ಹಂಪಿ, ತುಂಗಾಭದ್ರಾ ಡ್ಯಾಂಗೆ 2 ಬದಿ ಸೇರಿ ರೂ.500, ಮಕ್ಕಳಿಗೆ ರೂ.475 ಇರುತ್ತದೆ. ದಾವಣಗೆರೆಯಿಂದ ಹೊರಟು ಇಡಗುಂಜಿ, ಅಪ್ಸರಕೊಂಡ ವಾಟರ್ ಫಾಲ್ಸ್, ಇಕೋಬೀಚ್, ಬ್ಯಾಕ್ ವಾಟರ್ ಬೋಟಿಂಗ್‍ಗೆ 2 ಬದಿ ಸೇರಿ ರೂ.685, ಮಕ್ಕಳಿಗೆ ರೂ.515 ಇರುತ್ತದೆ.
ಮುಂಗಡ ಬುಕ್ಕಿಂಗ್ ಕೌಂಟರ್ ಗಳಲ್ಲಿ ಬುಕ್ಕಿಂಗ್ ಮಾಡಲು ksrtc.karnataka.gov.in ಸೌಲಭ್ಯ ಪಡೆಯಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್.ಎಫ್ ಬಸಾಪುರ ತಿಳಿಸಿದ್ದಾರೆ.