ಬೆಂಗಳೂರು: ಕರ್ನಾಟಕ ಸರ್ಕಾರಿ ಸೇವೆಯ ಉನ್ನತ ಹುದ್ದೆಗಳನ್ನು ಸೇರ ಬಯಸುವ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಸಿಹಿ ಸುದ್ದಿ ನೀಡಿದೆ. 2026-27ನೇ ಸಾಲಿನ ಒಟ್ಟು 319 KAS ಗ್ರೂಪ್-ಎ ಮತ್ತು ಗ್ರೂಪ್-ಬಿ (ಗೆಜೆಟೆಡ್ ಪ್ರೊಬೇಷನರ್ಸ್) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ಹುದ್ದೆಯ ಹೆಸರು: KAS ಗ್ರೂಪ್ ‘ಎ’ ಮತ್ತು ‘ಬಿ’ ಗೆಜೆಟೆಡ್ ಪ್ರೊಬೇಷನರ್ಸ್
ಒಟ್ಟು ಹುದ್ದೆಗಳು: 319
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ವಿದ್ಯಾರ್ಹತೆ ಮತ್ತು ವಯೋಮಿತಿ
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree), ಸ್ನಾತಕೋತ್ತರ ಪದವಿ (Post Graduation) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ:
ಕನಿಷ್ಠ ವಯಸ್ಸು: 21 ವರ್ಷಗಳು
ಗರಿಷ್ಠ ವಯಸ್ಸು: 40 ವರ್ಷಗಳು
ವಯೋಸಹಡಿ ಸಡಿಲಿಕೆ:
2A, 2B, 3A, 3B ಅಭ್ಯರ್ಥಿಗಳಿಗೆ: 03 ವರ್ಷಗಳು
SC/ST ಅಭ್ಯರ್ಥಿಗಳಿಗೆ: 05 ವರ್ಷಗಳು
ಅರ್ಜಿ ಶುಲ್ಕದ ವಿವರ
ಸಾಮಾನ್ಯ ಅಭ್ಯರ್ಥಿಗಳು (General): ₹600/-
ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು: ₹300/-
ಮಾಜಿ ಸೈನಿಕರು / ವಿಕಲಚೇತನರು: ₹50/-
SC/ST ಅಭ್ಯರ್ಥಿಗಳು: ಉಚಿತ (ಶುಲ್ಕ ವಿನಾಯಿತಿ ನೀಡಲಾಗಿದೆ)
ಪಾವತಿ ವಿಧಾನ: ಆನ್‌ಲೈನ್ (Online Payment)
ಪ್ರಮುಖ ದಿನಾಂಕಗಳು (Timeline)
| ಹಂತ / ಕಾರ್ಯಕ್ರಮ | ದಿನಾಂಕ |
| ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ | ಆಗಸ್ಟ್ 1, 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಆಗಸ್ಟ್ 31, 2026 |
| ಪೂರ್ವಭಾವಿ ಪರೀಕ್ಷೆ (Prelims Exam) | ನವೆಂಬರ್ 15, 2026 |
| ಪೂರ್ವಭಾವಿ ಪರೀಕ್ಷೆಯ ಫಲಿತಾಂಶ | ಡಿಸೆಂಬರ್ 15, 2026 |
| ಮುಖ್ಯ ಪರೀಕ್ಷೆ (Mains Exam) | ಫೆಬ್ರವರಿ 12 – 18, 2027 |
| ಮುಖ್ಯ ಪರೀಕ್ಷೆಯ ಫಲಿತಾಂಶ | ಏಪ್ರಿಲ್ 27, 2027 |
| ಸಂದರ್ಶನ / ವ್ಯಕ್ತಿತ್ವ ಪರೀಕ್ಷೆ | ಮೇ 10 – 31, 2027 |
| ತಾತ್ಕಾಲಿಕ ಆಯ್ಕೆ ಪಟ್ಟಿ (Provisional List) | ಜೂನ್ 5, 2027 |
ಆಯ್ಕೆ ಪ್ರಕ್ರಿಯೆ
ಪೂರ್ವಭಾವಿ ಪರೀಕ್ಷೆ (Prelims Examination)
ಮುಖ್ಯ ಪರೀಕ್ಷೆ (Mains Examination)
ಸಂದರ್ಶನ / ವ್ಯಕ್ತಿತ್ವ ಪರೀಕ್ಷೆ (Interview / Personality Test)
ಅರ್ಜಿ ಸಲ್ಲಿಸುವುದು ಹೇಗೆ?
ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್ kpsc.kar.nic.in ಗೆ ಭೇಟಿ ನೀಡಿ.
‘KAS Group-A & B Gazetted Probationers 2026-27’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ವಿವರಗಳನ್ನು ನಮೂದಿಸಿ, ಅಗತ್ಯ ದಾಖಲೆಗಳು ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ.
ಅರ್ಜಿ ನಮೂದೆಯನ್ನು ಪರಿಶೀಲಿಸಿ ‘Submit’ ಬಟನ್ ಕ್ಲಿಕ್ ಮಾಡಿ, ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದಿರಿಸಿಕೊಳ್ಳಿ.
- 319 ಕೆಎಎಸ್ ಹುದ್ದೆಗಳು
- Karnataka Gazetted Probationers Notification
- Karnataka government jobs 2026
- KAS Application Form 2026
- KAS Exam Dates 2026
- KAS Group A B Vacancy 2026
- KAS Salary and Age Limit
- KPSC KAS Recruitment 2026
- KPSC Notification 2026
- KPSC Official Website
- ಕರ್ನಾಟಕ ಸರ್ಕಾರಿ ಉದ್ಯೋಗಗಳು
- ಕೆಎಎಸ್ ಅಧಿಸೂಚನೆ 2026
- ಕೆಎಎಸ್ ಪರೀಕ್ಷಾ ದಿನಾಂಕ 2026
- ಕೆಪಿಎಸ್‌ಸಿ ಆನ್‌ಲೈನ್ ಅರ್ಜಿ
- ಕೆಪಿಎಸ್‌ಸಿ ಕೆಎಎಸ್ ನೇಮಕಾತಿ 2026
- ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳು





Leave a comment