SUDDIKSHANA KANNADA NEWS/ DAVANAGERE/ DATE:15_07_2025
ಬೆಂಗಳೂರು: ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಅವರ ಭವಿಷ್ಯಗಳು ಸುಳ್ಳಾಗುವುದೇ ಕಡಿಮೆ. ಯಾವಾಗಲೂ ಕೋಡಿಮಠದ ಶ್ರೀಗಳು ಹೇಳುವ ಭವಿಷ್ಯವಾಣಿ ನಿಜವಾಗುತ್ತಲೇ ಇವೆ. ಹಾಗಾಗಿ, ಈಗ ಮತ್ತೊಮ್ಮೆ ಭಯಾನಕ ಭವಿಷ್ಯವನ್ನು ಕೋಡಿಮಠದ ಶ್ರೀಗಳು ಹೇಳಿದ್ದು, ಸಂಚಲನ ಮೂಡಿಸಿದೆ. ಭಾರತದಲ್ಲಿ ದೊಡ್ಡ ಆಘಾತಕಾರಿ ಘಟನೆ ಸಂಭವಿಸಲಿದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
READ ALSO THIS STORY: ಸೌಂದರ್ಯವೇ ಶಾಪವಾಯ್ತು: ಕೂದಲು ಕಟ್, ಚಿತ್ರಹಿಂಸೆ, ನರಕ.. ಗಂಡ, ಮಾವನ ಕಾಟಕ್ಕೆ ಶಾರ್ಜಾದಲ್ಲಿ ಮಗು ಕೊಂದು ಮಹಿಳೆ ಆತ್ಮಹತ್ಯೆ!
ಆಪತ್ತನ್ನೂ ಹೇಳಿದ್ದಾರೆ, ಅದೇ ರೀತಿಯಲ್ಲಿ ಪರಿಹಾರವನ್ನೂ ಸೂಚಿಸಿದ್ದಾರೆ. ಯಾವಾಗಲೂ ಆಪತ್ತು, ವಿಪತ್ತು, ರಾಜಕೀಯ ವಿಪ್ಲವಗಳ ಬಗ್ಗೆ ಹೆಚ್ಚಾಗಿ ಭವಿಷ್ಯವಾಣಿ ನಿಜವಾಗಿವೆ. ಅವು ಸಂಭವಿಸಿವೆ. ಅದೇ ರೀತಿಯಲ್ಲಿ ಕೋಡಿಮಠದ ಶ್ರೀಗಳ ಭವಿಷ್ಯವೂ ಅಷ್ಟೇ ಪವರ್ ಫುಲ್ ಆಗಿರುತ್ತದೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕೋಡಿಮಠದ ಶ್ರೀಗಳು, ರಾಜ್ಯ ರಾಜಕಾರಣದ ಗೊಂದಲ, ಕೇಂದ್ರ ಸರ್ಕಾರದ ಬೆಳವಣಿಗೆ ಬಗ್ಗೆಯೂ ಮಾತನಾಡಿದ್ದಾರೆ. ಅದೇ ರೀತಿಯಲ್ಲಿ ಮತ್ತೊಂದು ಸ್ಫೋಟಕ ಭವಿಷ್ಯವಾಣಿ ನುಡಿದಿದ್ದಾರೆ. ಅದೆಂದರೆ ಭಾರತ ದೇಶಕ್ಕೆ ಸಂಭವಿಸಿರುವ ಆಘಾತದ ಬಗ್ಗೆ.
ಅರಸನ ಮನೆಗೆ ಕಾರ್ಮೋಡ ಕವಿದೀತು ಎಂಬ ನುಡಿ ವಾಕ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಮಾತ್ರವಲ್ಲ, ಸೂಕ್ತ ಪರಿಹಾರ ಮೊದಲೇ ಕಂಡುಕೊಂಡರೆ ಎಲ್ಲವೂ ಸರಿಯಾಗಲಿದೆ. ದೇಶಕ್ಕೆ ದೊಡ್ಡ ಆಘಾತ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.
ಭಾರತವನ್ನು ಇಡೀ ವಿಶ್ವ ತಿರುಗಿ ನೋಡುವಂತ ಒಂದು ಆಘಾತ ಆಗಲಿದೆ. ಆದ್ರೆ, ಏನೂ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ನೀಡದ ಕೋಡಿಮಠದ ಶ್ರೀಗಳು, ಆರ್ಥಿಕ, ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ್ದು ಆಗಿರಬಹುದಾ ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ.
ದೇಶದ ಭವಿಷ್ಯಕ್ಕೆ ಸಂಕ್ರಾಂತಿ, ಯುಗಾದಿ ಸಂದರ್ಭಗಳನ್ನು ಪ್ರಸ್ತಾಪಿಸಿ ರಾಜ್ಯ ಮತ್ತು ದೇಶದ ಭವಿಷ್ಯಕ್ಕೆ ನಿರ್ಣಾಯಕ ಆಗಲಿವೆ. ಸಂಕ್ರಾಂತಿ ಹೊತ್ತಿಗೆ ರಾಜಕೀಯ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ನಿರ್ಧಾರಗಳು ಹೊರಬೀಳಲಿವೆ. ಮಳೆ, ಬೆಳೆ, ಮತ್ತು ಕೃಷಿಗೆ ಸಂಬಂಧಿಸಿದಂತೆ ಪರಿಹಾರಗಳು ದೊರೆಯಬಹುದು ಎಂದು ಹೇಳಿದ್ದಾರೆ.
ಮನಸ್ಸು ಕಟ್ಟುವ ಕೆಲಸ ಆಗಬೇಕು. ಆಗ ಮಾತ್ರ ಯುದ್ಧ ನಿಲ್ಲಲಿದೆ. ಕದನ ವಿರಾಮ ಘೋಷಣೆ ಆಗಿದ್ದರೂ ಯುದ್ದ ಮಾತ್ರ ಇನ್ನೂ ನಿಂತಿಲ್ಲ. ಇದು ಜಾಗತಿಕ ಶಾಂತಿಯ ಕಡೆಗಿನ ಒಂದು ಆಧ್ಯಾತ್ಮಿಕ ಕರೆಯಾಗಿದೆ, ಇದರಲ್ಲಿ ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಕಡಿಮೆ ಮಾಡಲು ಸಾಮರಸ್ಯ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.