Home ಉದ್ಯೋಗ ವಾರ್ತೆ 10th, PUC ಪಾಸಾದವರಿಗೆ ಸಿಹಿ ಸುದ್ದಿ: ಜಿಲ್ಲಾ ನ್ಯಾಯಾಲಯದಲ್ಲಿದೆ 39 ಹುದ್ದೆಗಳ ಅವಕಾಶ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

10th, PUC ಪಾಸಾದವರಿಗೆ ಸಿಹಿ ಸುದ್ದಿ: ಜಿಲ್ಲಾ ನ್ಯಾಯಾಲಯದಲ್ಲಿದೆ 39 ಹುದ್ದೆಗಳ ಅವಕಾಶ!

Share
ನ್ಯಾಯಾಲಯ
Share

ಕೊಡಗು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವೊಂದು ಒದಗಿಬಂದಿದೆ. ಕೊಡಗು-ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ ಬೆರಳಚ್ಚುಗಾರ (Typist), ಚಾಲಕ (Driver), ಆದೇಶಿಕ ಜಾರಿಕಾರ (Process Server) ಹಾಗೂ ಜವಾನ/ಸೇವಕ (Peon/Office Attender) ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 39 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ:

ಬೆರಳಚ್ಚುಗಾರರು (Typist): 08 ಹುದ್ದೆಗಳು – (ವೇತನ: ₹34,100 – ₹67,600/-)

ಚಾಲಕರು (Driver): 02 ಹುದ್ದೆಗಳು – (ವೇತನ: ₹34,100 – ₹67,600/-)

ಆದೇಶಿಕ ಜಾರಿಕಾರರು (Process Server): 06 ಹುದ್ದೆಗಳು – (ವೇತನ: ₹31,775 – ₹61,300/-)

ಜವಾನ/ಸೇವಕ (Peon/Office Attender): 23 ಹುದ್ದೆಗಳು – (ವೇತನ: ₹27,000 – ₹46,675/-)

ಶೈಕ್ಷಣಿಕ ಅರ್ಹತೆ:

ಬೆರಳಚ್ಚುಗಾರರು: ದ್ವಿತೀಯ PUC ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಪಾಸಾಗಿರಬೇಕು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ಶ್ರೇಣಿ (Senior Grade) ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಚಾಲಕರು: SSLC/10ನೇ ತರಗತಿ ಪಾಸಾಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಭಾರಿ ವಾಹನ ಚಾಲನಾ ಪರವಾನಗಿ (Heavy Vehicle DL) ಹೊಂದಿರಬೇಕು.

ಆದೇಶಿಕ ಜಾರಿಕಾರರು: SSLC ಪಾಸಾಗಿರಬೇಕು (ವಾಹನ ಚಾಲನಾ ಪರವಾನಗಿ ಹೊಂದಿದವರಿಗೆ ಆದ್ಯತೆ).

ಜವಾನ/ಸೇವಕ: SSLC/10ನೇ ತರಗತಿ ಪಾಸಾಗಿರಬೇಕು ಮತ್ತು ಕನ್ನಡ ಓದಲು ಹಾಗೂ ಬರೆಯಲು ತಿಳಿದಿರಬೇಕು.

ವಯೋಮಿತಿ (03-10-2026 ಕ್ಕೆ ಅನ್ವಯಿಸುವಂತೆ):

ಕನಿಷ್ಠ ವಯಸ್ಸು: 18 ವರ್ಷ

ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ

ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 43 ವರ್ಷ

ಪ.ಜಾ/ಪ.ಪಂ/ಪ್ರವರ್ಗ-1: ಗರಿಷ್ಠ 45 ವರ್ಷ

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ₹300

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ₹150

SC/ST/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 03-09-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-10-2026 (ರಾತ್ರಿ 11:59 ರವರೆಗೆ)

ಅರ್ಹ ಅಭ್ಯರ್ಥಿಗಳು ಕೊಡಗು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ kodagu.dcourts.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಹುದ್ದೆಗಳಿಗೆ ತಕ್ಷಣವೇ ಅರ್ಜಿ ಸಲ್ಲಿಸಿ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles