ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತಾಯಿ ಕಳೆದುಕೊಂಡ ಕಿಚ್ಚ: ಬೊಮ್ಮಾಯಿ ತಬ್ಬಿಕೊಂಡು ಗಳಗಳನೇ ಅತ್ತ ನಟ ಸುದೀಪ್

On: October 20, 2024 3:45 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-10-2024

ಬೆಂಗಳೂರು: ತಾಯಿ ಸರೋಜ ಸಂಜೀವ ನಿಧನದ ಬಳಿಕ ಕಿಚ್ಚ ಹಾಗೂ ಖ್ಯಾತ ನಟ ಕಿಚ್ಚ ಸುದೀಪ್ ಕಣ್ಣೀರ ಕಟ್ಟೆ ಒಡೆದಿದೆ. ತಾಯಿ ಕಳೆದುಕೊಂಡ ದುಃಖದಲ್ಲಿರುವ ಸುದೀಪ್ ಅವರ ಗೋಳಾಟ ನೋಡುತ್ತಿದ್ದರೆ ಕರುಳು ಚುರುಕ್ ಎನಿಸುವಂತಿದೆ. ತೆರೆ ಮೇಲೆ ಅಬ್ಬರಿಸಿ ಬೊಬ್ಬಿರಿಯುವ ಸುದೀಪ್ ಗೆ ತಾಯಿ ಅಂದರೆ ಪಂಚಪ್ರಾಣ. ತಾಯಿ ಮಾತು ಮೀರುತ್ತಿರಲಿಲ್ಲ. ತಾಯಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸುದೀಪ್ ಸಂತೈಸುವುದೇ ಮನೆಯವರಿಗೆ ಕಷ್ಟವಾಗಿದೆ.

ಸುದೀಪ್ ತಾಯಿ ಸರೋಜ ನಿಧನಕ್ಕೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ ಅವರನ್ನು ಪ್ರೀತಿಯಿಂದ ಮಾಮ ಎಂದು ಕರೆಯುವ ಸುದೀಪ್ ಅವರನ್ನು ಸಂತೈಸುತ್ತಿದ್ದ ಫೋಟೋ ಈಗ ವೈರಲ್ ಆಗುತ್ತಿದೆ. ಬೊಮ್ಮಾಯಿ ಅವರು ಸರೋಜಾ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಬರುತ್ತಿದ್ದಂತೆ ಸುದೀಪ್ ಅವರ ದುಃಖದ ಕಟ್ಟೆ ಒಡೆದು ಹೋಯಿತು. ಒಂದೇ ಸಮನೇ ಅಳುತ್ತಿದ್ದ ಸುದೀಪ್ ಅವರನ್ನು ಬಸವರಾಜ್ ಬೊಮ್ಮಾಯಿ ಮಗುವಿನಂತೆ ಸಂತೈಸಿದರು. ಧೈರ್ಯ ತುಂಬಿದರು.

ಸರೋಜಕ್ಕ ಸಾಕ್ಷಾತ್ ಅನ್ನಪೂರ್ಣೇಶ್ವರಿ:

ಬಳಿಕ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ಖ್ಯಾತ ನಟ ಸುದೀಪ್ ಅವರ ತಾಯಿ, ಹಾಗೂ ನನ್ನ ಆತ್ಮೀಯ ಸ್ನೇಹಿತ ಸಂಜೀವ್ ಸರೋವರ ಅವರ ಪತ್ನಿ ಸರೋಜಕ್ಕ ನಿಧನ ಹೊಂದಿರುವುದು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಅತ್ಯಂತ ದುಖ ತಂದಿದೆ ಎಂದು ತಿಳಿಸಿದರು.

ನಟ ಸುದೀಪ್ ತಾಯಿ ಸರೋಜಕ್ಕ ಅವರು ತೀರಿಕೊಂಡಿದ್ದಾರೆ, ತಾಯಿಯ ಮಮತೆಯ ಸ್ವರೂಪಿಣಿ ಅವರು, ಮನೆಗೆ ಬರುವರಿಗೆಲ್ಲ ಆದರತೆ ತೋರುತ್ತಿದ್ದರು. ಅವರು ಸಾಕ್ಷಾತ್ ಅನ್ನಪೂರ್ಣೆ ಹಲವು ವರ್ಷಗಳ ಕಾಲ ಅವರು ಮನೆಗೆ ಹೋದಾಗೆಲ್ಲ ಊಟ, ಉಪಚಾರ, ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ನೋವು ತಂದಿದೆ. ಈಗ ನಾನು ಅವರ ಮನೆಗೆ ಹೋಗಿ, ಅಂತಿಮ ದರ್ಶನ ಪಡೆದಿದ್ದೇನೆ. ಸುದೀಪ್ ಹಾಗೂ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಂತಾಪದಲ್ಲಿ ತಿಳಿಸಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment