SUDDIKSHANA KANNADA NEWS/ DAVANAGERE/ DATE-05-04-2023
ಬೆಂಗಳೂರು: ನಾನು ಚುನಾವಣೆ(ELECTION)ಗೆ ನಿಲ್ಲಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ (BASAVARAJ BOMMAI) ಪರವಾಗಿ ಪ್ರಚಾರ ನಡೆಸುತ್ತೇನೆ. ನಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದು ಕೆಲವೇ ಕೆಲವರು. ಈ ಪೈಕಿ ಬೊಮ್ಮಾಯಿ ಅವರೂ ಒಬ್ಬರು. ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (KICCHA SUDEEP) ಘೋಷಿಸುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಚಿಕ್ಕ ವಯಸ್ಸಿನಿಂದಲೂ ಬಸವರಾಜ್ ಬೊಮ್ಮಾಯಿ ಅಂಕಲ್ (UNCUL) ನೋಡಿದ್ದೇನೆ. ಸಿಎಂ ಹೇಳಿದಂತೆ ಪ್ರಚಾರ ನಡೆಸುತ್ತೇನೆ. ಸಿಎಂ (CM) ಬೊಮ್ಮಾಯಿ
ಅವರಿಗೆ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ನಾನು ಇನ್ನು ಮಾಡಬೇಕಾದ ಹಲವು ಕೆಲಸಗಳಿವೆ. ಬಿಜೆಪಿಗೆ ಬೆಂಬಲ ಅಷ್ಟೇ. ನಾನು ಚುನಾವಣೆಗೆ ನಿಲ್ಲುವುದಾದರೆ ನಿಮಗೆ ತಿಳಿಸುತ್ತೇನೆ. ಊಹಾಪೋಹ ಸುದ್ದಿ ಬೇಡ. ಯಾಕೆಂದರೆ ಬಸವರಾಜ್ ಬೊಮ್ಮಾಯಿ ಅವರ ಜೊತೆ ನನ್ನ ಒಡನಾಟ, ಸಂಬಂಧ ಉತ್ತಮವಾಗಿದೆ. ಅಂಕಲ್ ಎಂದೇ ಅವರನ್ನು ಕರೆಯುತ್ತೇನೆ. ಚುನಾವಣೆಗೆ ನಿಲ್ಲುವ ಆಲೋಚನೆ ಇಲ್ಲ. ಪಕ್ಷಕ್ಕೆ ಸೇರದೇ ಇದ್ದರೂ ಪರವಾಗಿಲ್ಲ. ನನ್ನ ಪರವಾಗಿ ಪ್ರಚಾರ ನಡೆಸು ಎಂದು ಕೇಳಿಕೊಂಡರು. ನಾನು ಒಪ್ಪಿಕೊಂಡೆ ಎಂದರು.
ಐಟಿ ರೈಡ್ (IT RAID) ಆಯ್ತು. ಏನೂ ಸಿಕ್ಕಿಲ್ಲ. ನನಗ್ಯಾಕೆ ಈ ಭಯ. ಹೆದರುವ ವ್ಯಕ್ತಿಯೇ ನಾನು. ನನಗೆ ಯಾರೂ ಬ್ಲಾಕ್ ಮೇಲ್ ಮಾಡಿಲ್ಲ. ಅಂಕಲ್ ಹೇಳಿದ ಕಡೆ ಹೋಗಿ ಪ್ರಚಾರ ನಡೆಸುತ್ತೇನೆ. ಬ್ಲ್ಯೂ ಪ್ರಿಂಟ್ ಆಗಿಲ್ಲ. ಯಾವ ಕ್ಷೇತ್ರಕ್ಕೆ ಹೋಗುತ್ತೇನೆ ಎಂದೂ ಇನ್ನೂ ಹೇಳಿಲ್ಲ. ಯಾವುದೇ ಪಕ್ಷವಾದರೂ ಅವರ ಪ್ರಚಾರ ನಡೆಸುತ್ತೇನೆ. ಸಿಎಂ ಅವರು ಯಾವ ಕ್ಷೇತ್ರಕ್ಕೆ ಹೋಗಿ ಪ್ರಚಾರ ನಡೆಸಿ ಎನ್ನುತ್ತಾರೋ ಅಲ್ಲಿಗೆ ಹೋಗಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಪಕ್ಷ (PARTY) ನೋಡುತ್ತಿಲ್ಲ, ಸಿಎಂ ಅವರನ್ನಷ್ಟೇ ನೋಡುತ್ತೇನೆ. ನಾನು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ. ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಅಭಿಮಾನಿಗಳು ಪ್ರೀತಿ. ವಿಶ್ವಾಸ ತೋರಿಸುತ್ತಾರೆ. ತೋರಿಸುತ್ತಲೂ ಇದ್ದಾರೆ. ಮುಂದೆಯೂ ತೋರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ ಸುದೀಪ್ ಅವರ ಈ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸುದೀಪ್ ತಂದೆ ಸಂಜೀವಣ್ಣ ಹಾಗೂ ಅವರ ತಾಯಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸುದೀಪ್ ಪ್ರಚಾರ ಮಾಡಲು ಬರುತ್ತಾರೆ ಎಂದ ಕೂಡಲೇ ಸಂಚಲನ ಆಗಿದೆ. ಎಲ್ಲಾ ಭಾಗಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುದೀಪ್ ಬರುವುದರಿಂದ ದೊಡ್ಡ ಶಕ್ತಿ ಬಂದಂತಾಗುತ್ತದೆ. ಬರುವ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.