ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

karnataka President: ಮಲ್ಲಿಕಾರ್ಜುನ್ ಕಬ್ಬೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ

On: July 12, 2023 5:01 PM
Follow Us:
Mallikarjun kabburu
---Advertisement---

SUDDIKSHANA KANNADA NEWS/ DAVANAGERE/ DATE:12-07-2023

 

ಬೆಂಗಳೂರು: ಕರ್ನಾಟಕ (karnataka) ರಾಜ್ಯ ಹಿಂದುಳಿದ ವರ್ಗಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾಗಿ ಹಿರಿಯ ಪತ್ರಕರ್ತರೂ ಆದ ದಾವಣಗೆರೆಯ ಕನ್ನಡ ಭಾರತಿ ಪ್ರಾದೇಶಿಕ ಪತ್ರಿಕೆ ಸಂಪಾದಕ ಮಲ್ಲಿಕಾರ್ಜುನ್ ಕಬ್ಬೂರು (Mallikarjun Kabburu) ಹಾಗೂ ಕಾರ್ಯಾಧ್ಯಕ್ಷರಾಗಿ ಬೆಳಗಾವಿಯ ರಾಜು ನದಾಫ್ ಅವಿರೋಧ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ ಸಂಪಾದಕರ ಸಭೆ(Meeting) ಯಲ್ಲಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಮನಗರದ ಮತ್ತಿಕೆರೆ ಜಯರಾಮ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಡ್ಯದ ಶಿವಪ್ರಕಾಶ್ ಎಂ.ಎಸ್. ಆಯ್ಕೆಯಾಗಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ಕಬ್ಬೂರು (Mallikarjun Kabburu) ಮಾತನಾಡಿ, ಅಧ್ಯಕ್ಷ ಹುದ್ದೆ ಪದವಿಯಲ್ಲ, ಇದೊಂದು ಜವಾಬ್ದಾರಿ. ಹಿಂದುಳಿದ ವರ್ಗದ ಪತ್ರಿಕೆಗಳ ಏಳಿಗೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಕ್ಕಾಗಿ ಸಂಘ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ಮತ್ತಿಕೆರೆ ಜಯರಾಮ್ ಮಾತನಾಡಿ, ಮುದ್ರಣ ಮಾಧ್ಯಮ ಸಂಕಷ್ಟ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಹಿಂದುಳಿದ ವರ್ಗದ ಸಂಪಾದಕರು ಒಂದಾಗಿ ಧ್ವನಿ ಎತ್ತಿದಾಗ ಮಾತ್ರ ಸರ್ಕಾರದ ಸಹಕಾರ ದೊರೆಯುತ್ತದೆ ಎಂದರು.

ಕಲಬುರುಗಿಯ ಸಿದ್ದಣ್ಣ ಮಾಲಗಾರ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಶಿವಮೊಗ್ಗದಿಂದ ಪದ್ಮನಾಭ, ರೋಹಿತ್ ಎಸ್.ಆರ್., ಮಂಜುನಾಥ್, ಬಾಗಲಕೋಟೆ ಮುರುಗೇಶ್ ಅಳಗವಾಡಿ, ವಿಜಯಪುರದ ಅವಿನಾಶ ಬಿದರಿ, ರಾಮನಗರದ ಡಿ.ಎಂ. ಮಂಜುನಾಥ್, ಮಂಡ್ಯದ ಕೆ.ಸಿ. ಮಂಜುನಾಥ್, ಎ.ಸಿ. ಶೇಖರ್, ಕೆ.ಎನ್. ನವೀನ್ ಕುಮಾರ್, ಎ.ಎಲ್. ಬಸವೇಗೌಡ, ಬೆಳಗಾವಿ ಸುರೇಶ್ ನೇರ್ಲಿ ಇತರರು ಇದ್ದರು.

ಈ ಸುದ್ದಿಯನ್ನೂ ಓದಿ: 

S. A. Ravindranath: ಮಾರ್ಚ್ ನಲ್ಲೇ 966 ನಿವೇಶನಗಳ ಹಕ್ಕುಪತ್ರಗಳು ರೆಡಿ, ಸಚಿವರು, ಅಧಿಕಾರಿಗಳಿಗೆ ಫಲಾನುಭವಿಗಳಿಗೆ ಪತ್ರ ಕೊಡಲು ಮನವಿ ಮಾಡಿದ್ದೇನೆ: ಎಸ್. ಎ. ರವೀಂದ್ರನಾಥ್

ಒಬಿಸಿ ಜಾಹೀರಾತು ನೀಡಲು ಕೆ.ವಿ. ಪ್ರಭಾಕರ್ ಸೂಚನೆ:

 

ಒಬಿಸಿ ಸಂಪಾದಕರ ಸಂಘದಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಒಬಿಸಿ ಪತ್ರಿಕೆಗಳಿಗೆ ಜುಲೈ ತಿಂಗಳಿಂದ ಪ್ರೋತ್ಸಾಹ ಎರಡು ಪುಟ ಜಾಹೀರಾತು ನೀಡುವಂತೆ ವಾರ್ತಾ ಇಲಾಖೆ ಕಾರ್ಯರ್ಶಿ ಎನ್. ಜಯರಾಮ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿ ಸೂಚಿಸಿದರು. ಕಾಂಗ್ರೆಸ್ ಸರ್ಕಾರ ಸಣ್ಣ ಪತ್ರಿಕೆಗಳ ಹಿತ ಕಾಯಲಿದೆ ಎಂದು ಭರವಸೆ ನೀಡಿದರು.

 

Davanagere News, Davanagere Updates, Davanagere Suddi, Davanagere

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment