ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Karnataka Gruha Lakshmi Scheme ಹಲವು ಫಲಾನುಭವಿಗಳ ಹೆಸರಿಗೆ ಒಂದೇ ಖಾತೆಗೆ ಹಣ ಜಮಾ ಆಗುವಂತೆ ಹ್ಯಾಕ್: ಆಘಾತಕಾರಿ ಮಾಹಿತಿ ಬಹಿರಂಗ…!

On: August 28, 2023 5:40 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-08-2023

ದಾವಣಗೆರೆ: ಸರ್ಕಾರದ ಯೋಜನೆಗಳನ್ನು ಬಳಸಿ ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ನೊಂದಣಿಯನ್ನು ಮಾಡಿಸಿ ಹಣ ದುರುಪಯೋಗ ಮಾಡಲಾಗುತ್ತದೆ ಎಂದು ಮಹಾಲೇಖಪಾಲಕರ ವರದಿ ಇದೆ. ಕರ್ನಾಟಕ ಲಕ್ಷ್ಮಿ ಯೋಜನೆ (Karnataka Gruha Lakshmi Scheme)ಯ ಹಲವು ಫಲಾನುಭವಿಗಳ ಹೆಸರಿಗೆ ಒಂದೇ ಖಾತೆಗೆ ಹಣ ಜಮಾ ಆಗುವಂತೆ ಹ್ಯಾಕ್ ಮಾಡಲಾಗುತ್ತದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿಯ ಬದಲಾಗಿ ನಗದು ನೀಡಲಾಗುತ್ತಿದ್ದು ಈ ವೇಳೆ ದುರುಪಯೋಗ ಆಗುವ ಸಂಭವವಿರುತ್ತದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: 

BPL CARDಗೆ ಮಾನದಂಡವೇನು ಗೊತ್ತಾ…? ಎಷ್ಟು ಮಂದಿಗೆ ಬಂದಿಲ್ಲ ಅಕ್ಕಿ ದುಡ್ಡು…?

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ವಿವಿಧ
ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಪ್ರತಿಯೊಂದು ಖಾತೆಯನ್ನು ಪರಿಶೀಲನೆ ನಡೆಸಿ ದುರುಪಯೋಗವಾಗದಂತೆ ಅರ್ಹರಿಗೆ
ತಲುಪಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.


ಗೃಹಲಕ್ಷ್ಮಿ (Karnataka Gruha Lakshmi Scheme):

ಮನೆಯ ಒಡತಿ ಯಜಮಾನಿಗೆ ಮಾಸಿಕ ಎರಡು ಸಾವಿರ ನೀಡುವ ಯೋಜನೆ ಇದಾಗಿದ್ದು ಇದನ್ನು ಪಡೆಯಲು ರೇಷನ್ ಕಾರ್ಡ್, ಆಧಾರ್, ಬ್ಯಾಂಕ್ ಖಾತೆಯ ವಿವರ ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ 386716 ಗುರಿ ಇದ್ದು ಈಗಾಗಲೇ 324046
ಮಹಿಳೆಯರು ನೊಂದಣಿ ಮಾಡಿದ್ದು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆಗಸ್ಟ್ 30 ರಂದು ನೊಂದಣಿಯಾದ ಫಲಾನುಭವಿಗಳಿಗೆ ತಲಾ 2 ಸಾವಿರ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಎಂದು ಹೇಳಿದರು.

ಶಕ್ತಿ ಯೋಜನೆ:

ಮಹಿಳೆಯರು ಸಾರಿಗೆ ನಿಗಮದ ಬಸ್‍ಗಳಲ್ಲಿ ಉಚಿತ ಪ್ರಯಾಣ ಯೋಜನೆಯಡಿ ದಾವಣಗೆರೆ ವಿಭಾಗದಿಂದ ಜೂನ್, ಜುಲೈ, ಆಗಸ್ಟ್ 24 ರ ವರೆಗೆ ಒಟ್ಟು 78,15,550 ಪ್ರಯಾಣಿಕರು ಸಂಚರಿಸಿದ್ದು 19.43 ಕೋಟಿ ನಿಗಮಕ್ಕೆ ಆದಾಯ ಬಂದಿರುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗಾಧಿಕಾರಿ ತಿಳಿಸಿದರು.

ಈ ವೇಳೆ ಉಸ್ತುವಾರಿ ಕಾರ್ಯದರ್ಶಿಯವರು ಪ್ರಯಾಣಿಸುವಾಗ ಯಾವ ದಾಖಲೆಗಳನ್ನು ಪರಿಗಣಿಸಲಾಗುತ್ತದೆ ಎಂದಾಗ ಶಕ್ತಿ ಪ್ರಯಾಣ ರಾಜ್ಯದ ನಿವಾಸಿಗಳಿಗೆ ಮಾತ್ರ ಇದ್ದು ವಿಳಾಸದ ದೃಢೀಕರಣಕ್ಕಾಗಿ ಮಾತ್ರ ಆಧಾರ್ ಮತ್ತು ಇತರೆ
ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ ಎಂದರು.

ಬಸ್ಸೇ ಬರಲ್ವಂತೆ…!

ಈ ವೇಳೆ ಜಿಲ್ಲಾಧಿಕಾರಿಯವರು ಜಗಳೂರಿಗೆ ಸಂಜೆ ಸಮಯದಲ್ಲಿ ಬಸ್‍ಗಳು ಇರುವುದಿಲ್ಲ ಎಂಬ ದೂರುಗಳಿವೆ ಎಂದಾಗ ಜಗಳೂರಿಗೆ ಸಂಜೆ 7.30 ರ ವರೆಗೆ ಬಸ್‍ಗಳಿದ್ದು ಮುಂದಿನ ತಿಂಗಳು ನಿಗಮಕ್ಕೆ ಹೊಸ ಬಸ್‍ಗಳು ಬರಲಿದ್ದು ಎಲ್ಲೆಲ್ಲಿ ಕೊರತೆ ಇದೆ, ಅಂತಹ ಕಡೆ ಹೊಸ ಬಸ್‍ಗಳನ್ನು ಕಲ್ಪಿಸಲಾಗುತ್ತದೆ ಎಂದರು.

ಗೃಹಜ್ಯೋತಿ:

ದಾವಣಗೆರೆ ಜಿಲ್ಲೆಯಲ್ಲಿ 589364 ಬೆಸ್ಕಾಂ ಗ್ರಾಹಕರಿದ್ದು ಇದರಲ್ಲಿ ಈ ಯೋಜನೆಗೆ 405559 ಗ್ರಾಹಕರು ನೊಂದಾಯಿಸಿದ್ದಾರೆ. ಆಗಸ್ಟ್ 15 ರ ವರೆಗೆ 352131 ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗಿದೆ. ಗೃಹಜ್ಯೋತಿಗೆ ನೊಂದಾಯಿಸಲು ಅವರ ಆಧಾರ್
ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಆನ್‍ಲೈನ್ ಮೂಲಕ ಯೋಜನೆಗೆ ನೊಂದಾಯಿಸಬಹುದು. ಇದಕ್ಕೆ ಯಾವುದೇ ಆದಾಯಮಿತಿ ಇರುವುದಿಲ್ಲ ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಸಂತ್ರಸ್ಥರ ಮಕ್ಕಳಿಗೆ ಅವಕಾಶ:

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಮ್ಯಾನ್ಯುಯಲ್ ಸ್ಯ್ಕಾವೆಂಜಿಂಗ್ ಸಂತ್ರಸ್ಥರ ಪಟ್ಟಿಯಲ್ಲಿನ ಮಕ್ಕಳಿಗೆ ಮತ್ತು ರೈತರ ಆತ್ಮಹತ್ಯೆಯಾದ ಮಕ್ಕಳಿಗೆ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ನಿಯಮವಿದ್ದು
ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದಾಗ ಸಮಾಜ ಕಲ್ಯಾಣಾಧಿಕಾರಿಯವರು ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಂತ್ರಸ್ಥರು 288 ಜನರು ಇದ್ದು ಇವರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದಾಗ ಕಾರ್ಯದರ್ಶಿಯವರು ಪರಿಶೀಲನೆ ನಡೆಸಿ ಅವಕಾಶ ಇರುವವರಿಗೆ ಯೋಜನೆ ಕಲ್ಪಿಸಲು ಸೂಚನೆ ನೀಡಿದರು.

ಶಿಶು, ತಾಯಂದಿರ ಮರಣ ಪ್ರಮಾಣ ತಗ್ಗಿಸಿ:

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಯಿ, ಮಗುವಿನ ಆರೋಗ್ಯವನ್ನು ಕಾಪಾಡುವ ಮೂಲಕ ಸಾಂಸ್ಥಿಕ ಹೆರಿಗೆ ಮೂಲಕ ನವಜಾತ ಶಿಶು ಮತ್ತು ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸಬೇಕಾಗಿದೆ. ಆದರೆ ಜುಲೈನಲ್ಲಿ 8 ತಾಯಂದಿರ ಮರಣವಾಗಿದ್ದು ಇದಕ್ಕೆ ಏನು ಕಾರಣ ಎಂದು ಅಧ್ಯಯನ ಮಾಡಬೇಕೆಂದು ಜಿಲ್ಲಾಧಿಕಾರಿಯವರು ಪ್ರಸ್ತಾಪಿಸಿದಾಗ ಜಿಲ್ಲಾ ಆರೋಗ್ಯಾಧಿಕಾರಿ ಬೇರೆ ಜಿಲ್ಲೆಗಳಿಂದ ರೆಫರೆಲ್ ಆಗಿ ಬಂದಂತಹ ಪ್ರಕರಣಗಳು ಇದಾಗಿವೆ ಎಂದಾಗ ಕಾರ್ಯದರ್ಶಿಯವರು ಪ್ರತಿಯೊಂದು ಪ್ರಕರಣಗಳು ಆಡಿಟ್ ಆಗಬೇಕೆಂದು ಸೂಚನೆ ನೀಡಿದರು.

ಮನೆ ಬಾಗಿಲಿಗೆ ಪಹಣಿ ತಿದ್ದುಪಡಿ, ಪ್ರಶಂಸೆ:

ಆಗಸ್ಟ್ 23 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಪಹಣಿ ತಿದ್ದುಪಡಿ ಆಂದೋಲನ ಏರ್ಪಡಿಸುವ ಮೂಲಕ ಸುಮಾರು 3 ಸಾವಿರ ತಿದ್ದುಪಡಿ ಮಾಡಿ ಸರಿಪಡಿಸಿದ ಪಹಣಿ ಅರ್ಜಿದಾರರಿಗೆ ತಲುಪಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಸ್ತಾಪಿಸಿದಾಗ ಇಂತಹ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಮೀಣ ಇ.ಸ್ವತ್ತಿಗೆ ಕ್ರಮ:

ಗ್ರಾಮೀಣ ಭಾಗದಲ್ಲಿ ಇ.ಸ್ವತ್ತಿಗೆ ಸಮಸ್ಯೆಯಾಗುತ್ತಿದೆ ಎಂದಾಗ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಂದ ಮೋಜಣಿ ತತ್ರಾಂಶಕ್ಕೆ ಕಳುಹಿಸಲಾಗುತ್ತಿಲ್ಲ ಎಂದಾಗ ದಾಖಲಾತಿ ಸಮಸ್ಯೆಯಿಂದ ಈ ರೀತಿಯಾಗುತ್ತಿದ್ದು ಸರಿಪಡಿಸಿ ಕ್ರಮ ಕೈಗೊಂಡು ವಿಳಂಬವಾಗದಂತೆ ಮೋಜಿಣಿಗೆ ಕಳುಹಿಸಲು ಸೂಚನೆ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು. ಕಾರ್ಯದರ್ಶಿಯವರು ಮಾತನಾಡಿ ಭೂ ಮಾಪನಾ ಇಲಾಖೆಯಲ್ಲಿ 16918 ಅರ್ಜಿಗಳು ಬಾಕಿ ಇದ್ದು ಜನರೇ ಸರ್ವೆ ಮಾಡಿಕೊಳ್ಳುವ ಸ್ವಾವಲಂಭಿ ಆಫ್ ಬಗ್ಗೆ ಹೆಚ್ಚು ಪ್ರಚಾರ ನೀಡಲು ಸೂಚನೆ ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment