SUDDKSHANA KANNADA NEWS
DAVANAGERE
DATE: 29-03-2023
ಕರುನಾಡ ಮಹಾಕದನಕ್ಕೆ ಡೇಟ್ ಫಿಕ್ಸ್: ಮೇ 10ಕ್ಕೆ ಚುನಾವಣೆ: ಚುನಾವಣಾ ಆಯೋಗ ಘೋಷಣೆ KARNATAKA ELECTION DATE FIX
ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ
ಒಂದೇ ಹಂತದಲ್ಲಿ ಚುನಾವಣೆ
ನವದೆಹಲಿ: ಕೇಂದ್ರ ಚುನಾವಣೆ ಆಯೋಗವು (ELECTION COMMISSION OF INDIA) 2023 ರ ಕರ್ನಾಟಕ (KARNATAKA) ವಿಧಾನಸಭಾ ಚುನಾವಣೆ (ELECTION)ಯ ದಿನಾಂಕ (DATE)ಪ್ರಕಟಿಸಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಮೇ 10ಕ್ಕೆ ಚುನಾವಣೆ ನಡೆಯಲಿದೆ. ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಲಿದ್ದು,
ಕುರುಕ್ಷೇತ್ರದ ಸ್ಪೆಷಾಲಿಟಿ:
58,282 ಮತಗಟ್ಟೆಗಳಿದ್ದು, ಒಂದೊಂದು ಮತಗಟ್ಟೆಯಲ್ಲಿ 883 ಮಂದಿ ಹಕ್ಕು ಚಲಾಯಿಸಬಹುದು.9 ಲಕ್ಷದ 17 ಸಾವಿರ 18ರಿಂದ 19 ವರ್ಷದೊಳಗಿನವರು ಮತದಾನ ಮಾಡಲಿದ್ದಾರೆ. ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳಿವೆ. 1320 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಮತಗಟ್ಟೆಗಳು. 34219 ಗ್ರಾಮೀಣ ಪ್ರದೇಶದಲ್ಳಿ ಮತಗಟ್ಟೆಗಳಿವೆ. 224 ಕ್ಷೇತ್ರಗಳಲ್ಲಿ ತಲಾ ಒಂದೊಂದು ಯುವ ಮತಗಟ್ಟೆ ಸ್ಥಾಪಿಸಲಾಗಿದೆ. ಅಭ್ಯರ್ಥಿಗಳ ಮಾಹಿತಿ, ಪ್ರಮಾಣಪತ್ರ ವೆಬ್ ಸೈಟ್ ನಲ್ಲಿ ಲಭ್ಯ ಇರುತ್ತದೆ.
ರಾಜ್ಯದಲ್ಲಿ 240 ಮಾದರಿ ಮತಗಟ್ಟೆಗಳ ಸ್ಥಾಪನೆ ಮಾಡಲಾಗುವುದು. ಮತದಾನ ಹೆಚ್ಚಳಕ್ಕೆ ಈ ಬಾರಿ ವಿಶೇಷ ಕ್ರಮ ವಹಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ಸ್ 2016, ಚುನಾವಣೆ ಕೆಲಸಕ್ಕಾಗಿ 2400 ವೀಕ್ಷಕರ ನೇಮಕ, 19 ಜಿಲ್ಲೆಯಲ್ಲಿ 171 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಬ್ಯಾಂಕ್ ವ್ಯವಹಾರಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ನಿಗಾ ವಹಿಸಲಾಗಿದೆ.
ಕಳೆದ ಬಾರಿ ಬೆಂಗಳೂರಿನಲ್ಲಿ ಕಡಿಮೆ ಮತದಾನ ಆಗಿತ್ತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಮತದಾರರನ್ನು ಮೆಚ್ಚಿಸಲು ಪ್ರಯತ್ನ ಮಾಡಲಾಗುವುದು.
ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮೇ.24ಕ್ಕೆ 15ನೇ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ.ಅದಕ್ಕೂ ಮುನ್ನ ಚುನಾವಣೆ ಆಗಬೇಕು. ವಿದ್ಯುನ್ಮಾನ ಯಂತ್ರಗಳು ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸರ್ವಸನ್ನದ್ಧವಾಗಿದೆ.80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಮೊದಲ ಬಾರಿಗೆ ಕಲ್ಪಿಸಲಾಗಿದೆ. ವಿಕಲಚೇತನರೂ ಮನೆಯಿಂದಲೇ ಹಕ್ಕು ಚಲಾಯಿಸಬಹುದು.
ಕರ್ನಾಟಕ ವಿಧಾನಸಭೆಯಲ್ಲಿ 224 ಸ್ಥಾನಗಳಿಗೆ ಚುನಾವಣೆ (ELECTION) ನಡೆಯಲಿದೆ. 2.59 ಕೋಟಿ ಮಹಿಳಾ ಮತದಾರರು, 2 ಕೋಟಿ 65 ಲಕ್ಷ ಪುರುಷ ಮತದಾರರು ಸೇರಿದಂತೆ 5.21 ಕೋಟಿ ಮತದಾರರಿದ್ದಾರೆ. ಈ ಸಂಖ್ಯೆಯಲ್ಲಿ 16,976 ಶತಾಯುಷಿಗಳು, 4,699 ತೃತೀಯಲಿಂಗಿಗಳು ಮತ್ತು 9.17 ಲಕ್ಷ ಮೊದಲ ಬಾರಿಗೆ ಮತದಾರರು ಸೇರಿದ್ದಾರೆ.
ಒಂದೇ ಹಂತದಲ್ಲಿ ವಿಧಾನಸಭೆಗೆ ಚುನಾವಣೆ (ELECTION) ನಡೆಯುತ್ತದೆಯೋ ಎರಡು ಹಂತದಲ್ಲಿ ನಡೆಯುತ್ತದೆಯೋ ಎಂಬ ಗೊಂದಲಕ್ಕೆ ಚುನಾವಣಾ ಆಯೋಗ ತೆರೆ ಎಳೆದಿರುವ ಆಯೋಗವು ಒಂದೇ ಹಂತದಲ್ಲಿ ವಿಧಾನಸಭೆಗೆ ಎಲೆಕ್ಷನ್ ನಡೆಯಲಿದ ಕಟ್ಟುನಿಟ್ಟಿನ ಪಾರದರ್ಶಕ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಕೇಂದ್ರ ಚುನಾವಣೆ ಆಯೋಗದ (ELECTION COMMISSION OF INDIA) ಆಯುಕ್ತ ರಾಜೀವ್ ಕುಮಾರ್ (RAJEEV KUMAR) ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಂದು ರಾತ್ರಿಯಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದೆ.
ಕಳೆದ ವಾರ ಕಾಂಗ್ರೆಸ್ (CONGRESS) ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರೆ, ಕರ್ನಾಟಕ (KARNATAKA) ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸಲಿದೆ ಎಂದು ಹೇಳಿದ್ದಾರೆ.
ಚುನಾವಣೆ (ELECTION) ಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಸುಧಾರಿಸುವ ಪ್ರಯತ್ನದಲ್ಲಿ, ಭಾರತೀಯ ಚುನಾವಣಾ ಆಯೋಗವು ತನ್ನ ನೋಂದಣಿ ಅಭಿಯಾನದ ಭಾಗವಾಗಿ ಕಳೆದ ಐದು ತಿಂಗಳಲ್ಲಿ 18. 8 ಲಕ್ಷ ಅರ್ಹ ಮತದಾರರನ್ನು ಸೇರಿಸಿದೆ. ಅಲ್ಲದೆ, ಈ ವರ್ಷ ಜನವರಿ 2 ರಿಂದ ಏಪ್ರಿಲ್ 1 ರ ನಡುವೆ 18 ವರ್ಷ ತುಂಬಿದ 1. 3 ಲಕ್ಷ ಯುವಕರು ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪರಿಶೀಲನೆಯ ನಂತರ ಅವುಗಳನ್ನು ಏಪ್ರಿಲ್ 10 ರೊಳಗೆ ಅನುಮೋದಿಸಲಾಗುವುದು.
ಚುನಾವಣಾ (ELECTION) ಸಮಿತಿಯು ನವೆಂಬರ್ 9, 2022 ಮತ್ತು ಮಾರ್ಚ್ 23, 2023 ರ ನಡುವೆ ತಾಜಾ ಮತದಾರರಿಂದ 23. 3 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ 18. 8 ಲಕ್ಷ ಅರ್ಜಿಗಳು ಕ್ರಮದಲ್ಲಿವೆ. “ಹೊಸ ಮತದಾರರು ಮತದಾರರ ನೋಂದಣಿಗಾಗಿ ನಮೂನೆ 6 ರೊಂದಿಗೆ ಅರ್ಜಿ ಸಲ್ಲಿಸಬೇಕು. ನಮ್ಮ ಅಧಿಕಾರಿಗಳು ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುವಕರನ್ನು ತಲುಪಿದ್ದರು. ಈ ಸಾಧನೆಯನ್ನು 4-5 ತಿಂಗಳುಗಳಲ್ಲಿ ಸಾಧಿಸಲಾಗಿದೆ ಎಂದು ಇಸಿಐನ ಕರ್ನಾಟಕ ಘಟಕದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಅಕ್ರಮಕ್ಕೆ ಬ್ರೇಕ್:
ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳು ಸೀರೆ, ಕುಕ್ಕರ್, ಹಣ ಹಂಚುವುದಕ್ಕೆ ಬ್ರೇಕ್ ಹಾಕಲು ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜೊತೆಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲು ಕ್ರಮ ಜರುಗಿಸಿದೆ. ಮತದಾರರ ಓಲೈಕೆ ಮಾಡಲು ಹಣ ಹಂಚುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗಿಫ್ಟ್ (GIFT) ಹಂಚಿದರೆ ಕಾನೂನು ಕ್ರಮ ಜರುಗಿಸಲಿದೆ.
ಸಿಎಂ ಕಾರ್ಯಕ್ರಮ ರದ್ದು:
ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (BASAVARAJ BOMMAI) ಕೊಪ್ಪಳ, ಹಾವೇರಿ (HAVERI) ಪ್ರವಾಸ ರದ್ದಾಗಿದೆ. ಇಂದೇ ಚುನಾವಣೆ (ELECTION) ಘೋಷಣೆಯಾಗುತ್ತಿದೆ. ಹಾಗಾಗಿ ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ.
ಈಗಾಗಲೇ ಪಕ್ಷದ ವತಿಯಿಂದ ಸರ್ವೇ ಕಾರ್ಯ ನಡೆದಿದೆ. ಬಿಜೆಪಿ ಸಂಸದೀಯ ಕಾರ್ಯಕಾರಿಣಿ ಮಂಡಳಿಯಲ್ಲಿ ಟಿಕೆಟ್ ಯಾವ ಅಭ್ಯರ್ಥಿಗೆ ನೀಡಬೇಕು ಎಂಬ ಕುರಿತಂತೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಲಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಟಿಕೆಟ್ ಘೋಷಿಸಲಾಗುವುದು ಎಂದರು.
ಮುಂದೆಯೂ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಡಳಿತ ಪಕ್ಷ ದುರುಪಯೋಗ, ಹಣ ಹಂಚುವ ಸಾಧ್ಯತೆ ಇದ್ದು, ಆಯೋಗವು ತೀವ್ರ ನಿಗಾ ವಹಿಸಬೇಕು. ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಯಾವುದೇ ಪಕ್ಷದವರು ಮತದಾರರ ಸೆಳೆಯಲು ಆಮೀಷವೊಡ್ಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ವಾಹನ ಸೇರಿದಂತೆ ಇತರೆ ಸವಲತ್ತುಗಳನ್ನು ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಬಳಸುವಂತಿಲ್ಲ.