ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆಲ್ ದ ಬೆಸ್ಟ್ ಸಿದ್ದರಾಮಯ್ಯ ಜೀ ಎಂದ ರಾಹುಲ್ ಗಾಂಧಿ: ಎರಡನೇ ಬಾರಿ ಸಿಎಂ ಆಗಿ ಸಿದ್ದರಾಮಯ್ಯ

On: May 17, 2023 7:42 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:17-05-2023

ನವದೆಹಲಿ(NEWDELHI): ಆಲ್ ದ ಬೆಸ್ಟ್ (ALL THA BEST) ಸಿದ್ದರಾಮಯ್ಯ (SIDDARAMAI)ಜೀ. ಸಿಎಂ ಸ್ಥಾನ ಸರಿಯಾಗಿ ನಿಭಾಯಿಸಿ. ಸಿದ್ದರಾಮಯ್ಯ ಜೀ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ನೀವು ಒಳ್ಳೆಯ ಆಡಳಿತ ನೀಡಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನಿಸಿ. ಉಳಿದ ಸಮಸ್ಯೆ ನಾವು ನೋಡಿಕೊಳ್ಳುತ್ತೇವೆ. ಜನರಿಗಾಗಿ ಕೆಲಸ ಮಾಡಿ. ಕೊಟ್ಟ ಗ್ಯಾರಂಟಿಗಳನ್ನು ಆದಷ್ಟು ಬೇಗ ಈಡೇರಿಸುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಸೂಚಿಸಿದರು.

ನವದೆಹಲಿಯಲ್ಲಿ ಸೋನಿಯಾ ಗಾಂಧಿ (SONIA GANDHI) ನಿವಾಸದಲ್ಲಿ ಸಿದ್ದರಾಮಯ್ಯ (SIDDARAMAIರ ಜೊತೆ ಮಾತುಕತೆ ಮುಗಿದು ಹೊರಡುವ ಮುನ್ನ ರಾಹುಲ್ ಗಾಂಧಿ (RAHUL GANDHI)ಅವರು ಸಿದ್ದರಾಮಯ್ಯರಿಗೆ ಹೇಳಿದ ಮಾತು. ಜೊತೆಗೆ ಮನೆ ಬಾಗಿಲಿನವರೆಗೂ ಬಂದು ಆಲ್ ದ ಬೆಸ್ಟ್ ಸಿದ್ದರಾಮಯ್ಯ ಜೀ ಎಂದು ಹೇಳುವ ಮೂಲಕ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಖಚಿತತೆ ಅಂತೂ ಆಗಿದೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರ ಹೆಸರು ಘೋಷಣೆಯಾಗಿದೆ. ಈ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

135 ಸ್ಥಾನಗಳ ಭರ್ಜರಿ ಜಯದೊಂದಿಗೆ ಗೆಲುವಿನ ಕೇಕೆ ಹಾಕಿದ್ದ ಕಾಂಗ್ರೆಸ್ ಪಡೆಯಲ್ಲಿ ಇನ್ನೇನಿದ್ದರೂ ಹುಲಿಯಾ ಹವಾ. ಕುರುಬ ಸಮುದಾಯದ, ಅಹಿಂದ ನಾಯಕ ಎಂದೇ ಖ್ಯಾತರಾಗಿದ್ದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಹಿಡಿದ ಕಾರಣಕ್ಕೆ ಆಯ್ಕೆ ಜಟಿಲವಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಅಧಿನಾಯಕಿ ಸೋನಿಯಾ ಗಾಂಧಿ ಅವರ ಭೇಟಿ ಬಳಿಕ ಸಿದ್ದರಾಮಯ್ಯರ ಹೆಸರು ಅಂತಿಮವಾಗಿದೆ.

ಇಂದು ಸಹ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿ ಮಾಡಿದ ಡಿ. ಕೆ. ಶಿವಕುಮಾರ್ ತನ್ನ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿ ಪಕ್ಷದ ಸಾರಥಿಯಾದ ಶಿವಕುಮಾರ್ ಎದುರಿಸಿರುವ ಸಂಕಷ್ಟಗಳು ಒಂದೆರಡಲ್ಲ. ಯಾಕೆಂದರೆ ಬಿಜೆಪಿಯವರು ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದರು. ಐಟಿ, ಇಡಿ, ಸಿಬಿಐ ಮೂಲಕ ಹೆದರಿಸುವ, ಬಲ ಕಡಿಮೆ ಮಾಡುವ ಹುನ್ನಾರ ನಡೆಸಿಕೊಂಡೇ ಬರುತಿತ್ತು. ಇದಕ್ಕಾವುದಕ್ಕೂ ಜಗ್ಗದ ಡಿ. ಕೆ. ಶಿ. ಎಲ್ಲವನ್ನೂ ಎದುರಿಸಿದ್ದರು. ಮಾತ್ರವಲ್ಲ, 34 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷವು 135 ಸ್ಥಾನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಹುಮತ ಬರುತ್ತಿದ್ದಂತೆ ದೆಹಲಿಗೆ ಹಾರಿದ್ದ ಸಿದ್ದರಾಮಯ್ಯ ತನ್ನ ಬೆಂಬಲಿಗರ ಜೊತೆ ಅಲ್ಲಿಯೇ ಠಿಕಾಣಿ ಹೂಡಿದ್ದರು. ಕ್ಷಣ ಕ್ಷಣಕ್ಕೂ ಮುಖಂಡರು, ಶಾಸಕರು, ಹಿರಿಯ ನಾಯಕರ ಸಂಪರ್ಕದಲ್ಲಿದ್ದರು. ಜೊತೆಗೆ ತನ್ನ ಪರಮಾಪ್ತರ ಜೊತೆ ಸಭೆ ಮೇಲೆ ಸಭೆ ನಡೆಸಿದರು. ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಡಿ. ಕೆ. ಶಿವಕುಮಾರ್ ಸಂಕಷ್ಟದ ಸಮಯದಲ್ಲಿ, ವೈಯಕ್ತಿಕವಾಗಿ ಎದುರಿಸಿದ ತೊಂದರೆ, ಹೈಕಮಾಂಡ್ ಕೊಟ್ಟ ಟಾಸ್ಕ್ ಸಹ ಪೂರೈಸಿದ ಛಾತಿ ಅವರದ್ದು.

ಹಾಗಾಗಿ, ಡಿ. ಕೆ. ಶಿವಕುಮಾರ್ ಸಿಎಂ ಮಾಡಲು ಒಲವು ಹೊಂದಿದ್ದರು. ರಾಹುಲ್ ಗಾಂಧಿ ಮಾತ್ರ ಪಟ್ಟು ಹಿಡಿದು ಸಿದ್ದರಾಮಯ್ಯರನ್ನು ಮೊದಲ ಅವಧಿಗೆ ಸಿಎಂ ಆಗಿ ಘೋಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಸಿದ್ದರಾಮಯ್ಯರಿಗೆ ಕೊಟ್ಟ ಮಾತು ಉಳಿಸಿಕೊಂಡರು. ಸಿದ್ದರಾಮಯ್ಯರು ಮಾಜಿ ಸಿಎಂ ದೇವರಾಜ ಅರಸು ಬಳಿಕ ಐದು ವರ್ಷ ಪೂರೈಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅದೇ ರೀತಿಯಲ್ಲಿ ದೇವರಾಜ ಅರಸು ಅವರ ರೀತಿಯಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ. ಈ ಮೂಲಕ ಇತಿಹಾಸ ಬರೆಯಲಿದ್ದಾರೆ.

ಇನ್ನು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು, ಸಿದ್ದರಾಮಯ್ಯ ಅವರ ಹೆಸರು ಫೈನಲ್, ಫೈನಲ್, ಫೈನಲ್ ಎಂದು ಹೇಳುವ ಮೂಲಕ ಮತ್ತೆ ಸಿದ್ದು ಅವರದ್ದೇ ಸರ್ಕಾರ ಎಂದರು. ನಾವೆಲ್ಲರೂ ಸಿದ್ದರಾಮಯ್ಯರಿಗೆ ಶುಭಾಷಯ ಕೋರಿದ್ದೇವೆ. ಸಿದ್ದರಾಮಯ್ಯರು ಖುಷಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment