ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪೊಲೀಸ್‌ ಇಲಾಖೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ: ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ

On: August 23, 2024 4:05 PM
Follow Us:
---Advertisement---

ಇತ್ತೀಚೆಗೆ ನಕಲಿ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಇದೀಗ ಪೊಲೀಸರ ಹೆಸರಿನಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಹೌದು, ಮಹಿಳೆಯರಿಗೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಖುದ್ದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಸ್ಪಷ್ಟನೆಯಲ್ಲಿ ಏನಿದೆ? ವೈರಲ್ ಆಗುತ್ತಿರುವ ಮೆಸೇಜ್ ನ ಸತ್ಯಾಸತ್ಯತೆ ಏನು…? ಎಂಬುದರ ಕುರಿತು ಇಲ್ಲಿದೆ.

ವೈರಲ್ ಆಗಿರುವ ಮೆಸೇಜ್ ನಲ್ಲಿ ಏನಿದೆ?
ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ.

ಜೊತೆಗೆ ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಸಹಾಯವಾಣಿ ಸಂಖ್ಯೆ 1091 ಅಥವಾ 7837018555 ಗೆ ಕರೆ ಮಾಡಿ. ಪೊಲೀಸರು ಮನೆಗೆ ಬಿಟ್ಟು ಬರ್ತಾರೆ ಎಂಬ ಮೆಸೇಜ್ ಸಖತ್ ವೈರಲ್ ಆಗಿತ್ತು. ಜೊತೆಗೆ ಈ ಮೆಸೇಜ್‌ನ್ನು ಎಲ್ಲಾ ಮಹಿಳೆಯರಿಗೆ ಫಾರ್ವರ್ಡ್ ಮಾಡಿ ಎಂದೂ ಸಹ ಆ ಸಂದೇಶದಲ್ಲಿ ಹೇಳಲಾಗಿತ್ತು.

ರಾಜ್ಯ ಪೊಲೀಸ್ ಇಲಾಖೆಯ ಟ್ವೀಟ್ ಏನಿದೆ?;
ಗಮನಿಸಿ !!
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ ಎಂದು ರಾಜ್ಯ ಪೊಲೀಸ್ ಇಲಾಖೆಯ ಟ್ವೀಟ್ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಸಂಪೂರ್ಣ ಸುಳ್ಳಾಗಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

Leave a Comment