ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಸತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : ರಾಜ್ಯದ ಬಡ ಕುಟುಂಬಗಳಿಗೆ 38,000 ಮನೆಗಳ ಹಂಚಿಕೆ

On: July 3, 2024 10:34 AM
Follow Us:
---Advertisement---

(House) ರಾಜ್ಯ ಸರ್ಕಾರವು ವಸತಿ ರಹಿತ ಬಡ ಜನತೆಗೆ ಸಿಹಿಸುದ್ದಿ ನೀಡಿದ್ದು, ಶೀಘ್ರವೇ 38,000 ಹಂಚಿಕೆಗೆ ಸಿದ್ಧತೆ ನಡೆಸಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿದ್ದಾರೆ.

ಸೋಮವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗೆ ಎರಡನೇ ಹಂತದಲ್ಲಿ 38,000 ಮನೆಗಳನ್ನು ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಹಂಚಿಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1,80,253 ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ 36,789 ಮನೆಗಳನ್ನು ಸಿಎಂ ಸಿದ್ದರಾಮಯ್ಯ ಹಂಚಿಕೆ ಮಾಡಿದ್ದರು, ಇದೀಗ ಎರಡನೇ ಹಂತದಲ್ಲಿ 38,000 ಮನೆ ಮುಖ್ಯಮಂತ್ರಿಯವರಿಂದಲೇ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ವಸತಿ ಯೋಜನೆಗೆ ಆಯ್ಕೆಯಾಗಿದ್ದ ಬಡ ಕುಟುಂಬದವರು ಫಲಾನುಭವಿಗಳ ವಂತಿಗೆ ಪಾವತಿಸಲು ಸಾಧ್ಯವಾಗದೆ ಬ್ಯಾಂಕುಗಳಿಂದಲೂ ಸಾಲ ಸಿಗದೇ ಸಂಕಷ್ಟ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಅವರು ಫಲಾನುಭವಿಗಳ ವಂತಿಗೆಯನ್ನು ಸರ್ಕಾರವೇ ಭರಿಸುವ ದಿಟ್ಟ ತೀರ್ಮಾನ ಕೈಗೊಂಡು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದರು. ಅದರಂತೆ ಹಂತ ಹಂತವಾಗಿ ಹಣಕಾಸು ಇಲಾಖೆಯಿಂದ ಅಗತ್ಯ ಹಣ ಬಿಡುಗಡೆ ಮಾಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

 

Join WhatsApp

Join Now

Join Telegram

Join Now

Leave a Comment