ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜನವರಿಗೆ ಅಗ್ಗದ ದರದಲ್ಲಿ ಕನ್ನಡದ ಓಟಿಟಿ ಪ್ಲಾಟ್ ಫಾರ್ಮ್: ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷ

On: November 1, 2025 7:10 PM
Follow Us:
ಕನ್ನಡ
---Advertisement---

SUDDIKSHANA KANNADA NEWS/DAVANAGERE/DATE:01_11_2025

ದಾವಣಗೆರೆ: ಕನ್ನಡದ ಸಿನೆಮಾ, ಕಿರುತೆರೆ ಧಾರವಾಹಿ, ಪ್ರಾದೇಶಿಕ ವಿಭಿನ್ನ ಜಾನಪದ, ಕಲೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣ ಮಾಡಲು ಹೊಸವರ್ಷಕ್ಕೆ ಜನರ ಕೈಗೆಟುಕುವ ದರದಲ್ಲಿ ಕನ್ನಡದ ಓಟಿಟಿ ಪ್ಲಾಟ್‌ಫಾರ್ಮ್ ಸೃಜಿಸಲಾಗುವುದು ಎಂದು ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷ ತಿಳಿಸಿದರು.

READ ALSO THIS STORY: ಕೇಂದ್ರ ಸರ್ಕಾರದ ದ್ರೋಹದಿಂದ 1 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ ನಷ್ಟ: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ!

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾದೇಶಿಕತೆಗೆ ತಕ್ಕಂತೆ ಗ್ರಾಮೀಣ ಸೊಗಡಿನ ಕಲೆ, ಪ್ರತಿಭೆಗಳನ್ನು ಹೊಂದಿದೆ. ಇಂತಹ ಕಲೆ, ಪ್ರತಿಭೆಗಳನ್ನು ದೇಶ, ವಿಶ್ವವ್ಯಾಪಿ ಪರಿಚಯಿಸಲು ಆನ್‌ಲೈನ್ ಓಟಿಟಿ ವೇದಿಕೆ ಸಹಕಾರಿಯಾಗಲಿದೆ. ಈ ಯೋಜನೆ ಕುರಿತು ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಘೋಷಣೆಯಾಗಿ ಸಿದ್ಧತೆಗೆ ಹಲವು ಉನ್ನತ ಮಟ್ಟದ ಸಭೆಗೂ ನಡೆದಿದ್ದು, ಈಗಾಗಲೇ ಅಗತ್ಯ ತಾಂತ್ರಿಕ ಸಿದ್ದತಾ ಕ್ರಮಗಳೂ ಸಹ ನಡೆಯುತ್ತಿವೆ. ಈ ವೇದಿಕೆ ನಿರ್ಮಾಣದ ಮೂಲಕ ಕನ್ನಡ ಭಾಷೆ, ನೆಲ-ಜಲ ಪ್ರಾಮುಖ್ಯತೆ ತಿಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೇ ಗುರುತರವಾದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಸಿದಂತಾಗುತ್ತದೆ. ಜತೆಗೆ ಹೆಚ್ಚಿನ ಅವಕಾಶ ಸಿಗಲಿವೆ. ಓಟಿಟಿಯೂ ಪ್ರಸ್ತುತ ಹೆಚ್ಚಿನ ಪ್ರಚಲಿತದಲ್ಲಿದ್ದು, ಗುಣಮಟ್ಟದಲ್ಲಿ ಜನರ ಕೈಗೆಟುಕುವ ದರದಲ್ಲಿ ಸೃಜಿಸಲಾಗುವುದು ಎಂದು ತಿಳಿಸಿದರು.

ಇದರಿಂದ ಸಿನೆಮಾ, ಕಿರುತೆರೆ ಸಿನೆಮಾ, ಧಾರವಾಹಿ, ಭೌಗೋಳಿಕ ಭಿನ್ನತೆ ಇರುವ ಜಾನಪದ ಕಲೆಯ ದೃಶ್ಯಗಳನ್ನು ಕುಳಿತಲ್ಲಿಯೇ ವೀಕ್ಷಿಸಬಹುದಾಗಿದೆ. ಆದರೆ ಕನ್ನಡದ ಓಟಿಟಿ ಮೂಲಕ ಸಿನೆಮಾ ನೋಡ ಬಯಸುವವರು ನಿಗದಿತ ಹಣ ಸಂದಾಯ ಮಾಡುವ ಮುಖೇನ ಚಂದಾರರಾಗಬೇಕಿದೆ ಎಂದರು. ಇಂತಹ ವೇದಿಕೆ ನಿರ್ಮಾಣ ಮಾಡುವುದುರಿಂದ ನವ-ನವೀನ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಲಿದ್ದು, ನಿರ್ಮಾಪಕ, ನಿರ್ದೇಶಕರಿಗೆ ಹಾಗೂ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ರಾಜ್ಯದಲ್ಲಿ 4 ಸಾವಿರ ಚಿತ್ರಮಂದಿರಗಳಿದ್ದವು ಆದರೆ ಚಿತ್ರಮಂದಿರಗಳಿಗೆ ತೆರೆಳಿ ಸಿನೆಮಾ ನೋಡುಗರಿಲ್ಲದೇ ಇಂದು 300 ರಿಂದ 400 ಕ್ಕೆ ಕುಸಿದಿವೆ. ಕಾರಣ ತೆರೆಯ ಮೇಲೆ ಬಿಡುಗಡೆಯಾಗಬೇಕಿದ್ದ 4 ಸಾವಿರ ಸಿನೆಮಾಗಳು ತೆರೆ ಕಂಡಿಲ್ಲ. ಓಟಿಟಿ ನಿರ್ಮಾಣದಿಂದ ಸಂಕಷ್ಟದಲ್ಲಿರುವ ನಿರ್ಮಾಕರಿಗೆ, ನಿರ್ದೇಶಕರಿಗೆ, ನಟರಿಗೆ ತುಂಬಾ ಉಪಯುಕ್ತವಾಗಲಿದೆ. ಆದ್ದರಿಂದ ಇದನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಸರ್ಕಾರವು ಸಹ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು
ಮಾಹಿತಿ ನೀಡಿದರು.

ಈಗಾಗಲೇ ಕೇರಳ ಸರ್ಕಾರ, ಕೇಂದ್ರ ಸರ್ಕಾರ ಓಟಿಟಿ ವೇದಿಕೆ ಸೃಜಿಸಿದ್ದು ಕನ್ನಡದ ಮೊದಲ ಓಟಿಟಿಯನ್ನು ನೆಟ್ ಪ್ಲೆಕ್ಸ್, ಅಮೇಜಾನ್ ಗಿಂತಲೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಲಾಗುತ್ತಿದೆ. ಕನ್ನಡಿಗರು ನಮ್ಮ ನಾಡಿನ ಓಟಿಟಿಗೆ ಹೆಚ್ಚಿನ ಚಂದಾದಾರರಾಗುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಗಾಂಜಾ

ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲೇ ಅಕ್ರಮ ಗಾಂಜಾ ಸೊಪ್ಪು ಸಾಗಾಟ: ಐವರು ಆರೋಪಿಗಳ ಬಂಧನ!

ದತ್ತಾತ್ರೇಯ ಹೊಸಬಾಳೆ

ಜನಸಂಖ್ಯಾ ಅಸಮತೋಲನ ಸಮಸ್ಯೆ ಪರಿಹಾರಕ್ಕೆ ಜನಸಂಖ್ಯಾ ನೀತಿ ಅಗತ್ಯ: ದತ್ತಾತ್ರೇಯ ಹೊಸಬಾಳೆ!

ಮಲ್ಲಿಕಾರ್ಜುನ ಖರ್ಗೆ

ಸಮಾಜ ಒಪ್ಪಿಕೊಂಡಿರುವ ಆರ್ ಎಸ್ ಎಸ್ ರಾಜಕೀಯ ಉದ್ದೇಶಕ್ಕೆ ನಿಷೇಧ ಸಾಧ್ಯವೇ ಇಲ್ಲ: ಮಲ್ಲಿಕಾರ್ಜುನ್ ಖರ್ಗೆಗೆ ದತ್ತಾತ್ರೇಯ ಹೊಸಬಾಳೆ ತಿರುಗೇಟು!

ಎಸ್. ಎಸ್. ಮಲ್ಲಿಕಾರ್ಜುನ್

“ಎಲ್ಲೆಲ್ಲಿ ಆಸ್ತಿ ಮಾಡಿದ್ದೇನೆಂದು ನನಗೆೇ ಗೊತ್ತಿಲ್ಲ, ಕಾರ್ ಕೊಡ್ತೇನೆ ಹೋಗಿ ನೋಡ್ಕಂಡು ಬರಲಿ”: ಬಿ. ಪಿ. ಹರೀಶ್ ಗೆ ಎಸ್. ಎಸ್. ಮಲ್ಲಿಕಾರ್ಜುನ್ ಸವಾಲ್!

ಎಸ್. ಎಸ್. ಮಲ್ಲಿಕಾರ್ಜುನ್

ಸಿದ್ದರಾಮಯ್ಯರ CM ಖುರ್ಚಿ ಗಟ್ಟಿ ಇದೆ, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ: ಎಸ್. ಎಸ್. ಮಲ್ಲಿಕಾರ್ಜುನ್

ಎಸ್. ಎಸ್. ಮಲ್ಲಿಕಾರ್ಜುನ್

ಕೈ ಹಚ್ಚಿದರೆ ಮೇಲೇಳಲು ಆಗಬಾರದು ಹಾಗೆ ಕೈ ಹಚ್ಚುತ್ತೀನಿ: ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಕೆಂಡಾಮಂಡಲ!

Leave a Comment