ಮಥುರಾ: ಉತ್ತರ ಪ್ರದೇಶದ ಮಥುರಾದ ವಸಂತ ವಿಹಾರ ಕಾಲೋನಿಯಲ್ಲಿ ಕರ್ವಾ ಚೌತ್ ಹಬ್ಬದ ದಿನದಂದೇ ಮಹಾ ಡ್ರಾಮಾವೊಂದು ನಡೆದಿದೆ. ಪತಿ ಮನೋಜ್ ತಮ್ಮ ಪತ್ನಿ ಅಂಜು ಪ್ರಿಯಕರ ಸಂಜಯ್ ಅಲಿಯಾಸ್ ಗೀತಮ್ ಜೊತೆ ಖಾಸಗಿಯಾಗಿ ಭೇಟಿಯಾಗಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ಘಟನೆ ಕುಟುಂಬಗಳ ನಡುವಿನ ತೀವ್ರ ಮಾರಾಮಾರಿಗೆ ಕಾರಣವಾಗಿದೆ. ರಸ್ತೆಯಲ್ಲೇ ಮಹಿಳೆಯರು ಒಬ್ಬರಿಗೊಬ್ಬರು ಜಗಳವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮನೋಜ್ ಅವರಿಗೆ ತಮ್ಮ ಪತ್ನಿ ಅಂಜು ಸಂಜಯ್ ಎಂಬಾತನನ್ನು ಭೇಟಿಯಾಗಲು ತೆರಳಿದ್ದ ಮಾಹಿತಿ ಸಿಕ್ಕ ತಕ್ಷಣ, ಕುಟುಂಬದ ಕೆಲ ಸದಸ್ಯರೊಂದಿಗೆ ಸ್ಥಳಕ್ಕೆ ದೌಡಾಯಿಸಿ ಇಬ್ಬರನ್ನೂ ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಇರುಪಕ್ಷಗಳ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಮನೋಜ್ ಅವರಾದ ನಾದಿನಿ ಹಾಗೂ ಪತ್ನಿ ಅಂಜು ಪರಸ್ಪರ ನೆಲಕ್ಕೆ ತಳ್ಳಿ, ಕೂದಲು ಎಳೆದಾಡಿಕೊಳ್ಳುತ್ತಾ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ.
15 ವರ್ಷಗಳ ದಾಂಪತ್ಯ: ಮನೋಜ್ ಮತ್ತು ಅಂಜು ಮದುವೆಯಾಗಿ ೧೫ ವರ್ಷಗಳಾಗಿದ್ದು, ನಾಲ್ಕು ಮಕ್ಕಳಿದ್ದಾರೆ.
ಮಕ್ಕಳನ್ನು ತೊರೆದ ಆರೋಪ: ಹೆಂಡತಿ ನಾಲ್ಕು ಮಕ್ಕಳನ್ನು ಮನೆಯಲ್ಲೇ ಏಕಾಂಗಿಯಾಗಿ ಬಿಟ್ಟು ಪ್ರಿಯಕರನನ್ನು ಭೇಟಿಯಾಗಲು ಹೋಗಿದ್ದಾಳೆ ಎಂದು ಮನೋಜ್ ಆರೋಪಿಸಿದ್ದಾರೆ.
ವಿಚ್ಛೇದನ ಮತ್ತು ಆಸ್ತಿ ವ್ಯಾಜ್ಯ: ಇಬ್ಬರ ನಡುವೆ ಈಗಾಗಲೇ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದು, ಪತ್ನಿ ಅರ್ಧ ಆಸ್ತಿಯನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮಧ್ಯಪ್ರವೇಶ: ರಸ್ತೆಯಲ್ಲಿ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕಮಂದಿಸಿದ ಪೊಲೀಸರು ಮನೋಜ್ ಹಾಗೂ ಅಂಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಕರ ಸಂಜಯ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಕರಣದ ಕುರಿತು ಪೊಲೀಸರು ಸುದೀರ್ಘ ತನಿಖೆ ನಡೆಸುತ್ತಿದ್ದು, ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.





Leave a comment