SUDDIKSHANA KANNADA NEWS/ DAVANAGERE/ DATE:09-12-2023
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಹಕಾರ ಭಾರತಿ ಬೆಂಬಲಿತ ಸುರೇಶ್ ಓಡಬಾಯಿ,ಉಪಾಧ್ಯಕ್ಷರಾಗಿ ಚಂದ್ರಯ್ಯ ಆಚಾರ್ಯ ಅಬೀರ ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡರು. ನೂತನ ನಿರ್ದೇಶಕರಾಗಿ ಮುರಳೀಧರ ಪುಣ್ಚತ್ತಾರು, ಸುಂದರ ಬೆದ್ರಾಜೆ,ರಾಜೇಶ್ ಮೀಜೆ,ಸದಾನಂದ ಗೌಡ ನಾವೂರು,ಚೆನ್ನಕೇಶವ ಬೇಂಗಡ್ಕ, ರಾಜೇಶ್ ಮುಂಡಾಳ, ಭರತ್ ಅಗಳಿ, ಹೇಮಾವತಿ ಮುಗರಂಜ, ಸೌಮ್ಯಾ ಪೈಕ, ಗಿರಿಜಾ ಅಂಕಜಾಲು, ನೀಲಮ್ಮ ಬೇಂಗಡ್ಕ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಆಯ್ಕೆಯಾದ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಸಹಕಾರ ಭಾರತಿಯ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಹಾಲಿ ಅಧ್ಯಕ್ಷ ರಾಮಣ್ಣ ಗೌಡ ಮೂಡಾಯಿಮಜಲು, ಕಾಣಿಯೂರು ಗ್ರಾ.ಪಂ.ಸದಸ್ಯ ಗಣೇಶ್ ಉದನಡ್ಕ,ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ,ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ನಿರ್ದೇಶಕ ಪುಟ್ಟಣ್ಣ ಗೌಡ ಮುಗರಂಜ, ಪ್ರಮುಖರಾದ ಪರಮೇಶ್ವರ ಅನಿಲ,ಯಶವಂತ ಕೇಪುಳಗುಡ್ಡೆ,ಹರೀಶ್ ಪೈಕ ಉಪಸ್ಥಿತರಿದ್ದರು.