SUDDIKSHANA KANNADA NEWS/ DAVANAGERE/ DATE:11-04-2023
ಶಿವಮೊಗ್ಗ: ಶಿವಮೊಗ್ಗ (SHIVAMOGGA) ಬಿಜೆಪಿ ಶಾಸಕ ಕೆ. ಎಸ್. ಈಶ್ವರಪ್ಪ (K. S. ESHWARAPPA)ರ ಚುನಾವಣಾ ರಾಜಕಾರಣದ ಯುಗಾಂತ್ಯವಾಗಿದೆ. ಬಿಜೆಪಿಯಲ್ಲಿ ಕಳೆದ ನಾಲ್ಕು ದಶಕಗಳ ಕಾಲ ಗುರುತಿಸಿಕೊಂಡಿದ್ದ ಈಶ್ವರಪ್ಪ ತಾನು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ (BJP) ಬೂತ್ ಮಟ್ಟದಿಂದ ಹಿಡಿದು ಡಿಸಿಎಂ ಆಗುವವರೆಗೆ ಬಿಜೆಪಿ ಪಕ್ಷವು ಹಲವು ಉನ್ನತ ಹುದ್ದೆಗಳನ್ನು ನೀಡಿದೆ. ನನ್ನ ಜೊತೆಗೆ ನಿಂತ ಬಿಜೆಪಿ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಹಿರಿಯರಿಗೆ ಆಭಾರಿಯಾಗಿರುವೆ ಎಂದು
ಹೇಳಿದ್ದಾರೆ.
ಕುಟುಂಬಕ್ಕೆ ಒಂದೇ ಟಿಕೆಟ್ (TICKET) ಎಂಬ ಬಿಜೆಪಿ ಹೈಕಮಾಂಡ್ ಫರ್ಮಾನು ಹಿನ್ನೆಲೆಯಲ್ಲಿ ತನ್ನ ಪುತ್ರನ ರಾಜಕೀಯ ಭವಿಷ್ಯ ರೂಪಿಸುವ ಸಲುವಾಗಿ ಈಶ್ವರಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆ. ಎಸ್. ಈಶ್ವರಪ್ಪ (K. S. ESHWARAPPA) ಜಲಸಂಪನ್ಮೂಲ ಸಚಿವರಾಗಿ, ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಸಚಿವರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಬಿಜೆಪಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಜೊತೆ ಸೇರಿ ಪಕ್ಷ ಸಂಘಟನೆಗೆ ದುಡಿದಿದ್ದ ಈಶ್ವರಪ್ಪ ಕುರುಬ ಸಮುದಾಯದ ಬಿಜೆಪಿ ನಾಯಕರಾಗಿದ್ದರು. ಮಾತ್ರವಲ್ಲ, ಕೇವಲ ಜಾತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಈಗ ಚುನಾವಣೆಗೆ ಸ್ಪರ್ಧೆ ಮಾಡದಿರಲು ನಿರ್ಧರಿಸಿರುವುದರ ಹಿಂದೆ ಹೈಕಮಾಂಡ್ ಸ್ಪಷ್ಟ ಸೂಚನೆ ಇತ್ತು ಎಂದು ಈಶ್ವರಪ್ಪ (ESHWARAPPA) ರ ಆಪ್ತ ಮೂಲಗಳು ಮಾಹಿತಿ ನೀಡಿವೆ.