ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೊಸಹಳ್ಳಿ ಕ್ರಾಸ್-ಲೋಕಿಕೆರೆ ರಾಜ್ಯ ಹೆದ್ದಾರಿ ಕಾಮಗಾರಿ ಕಳಪೆ: ಆಡಳಿತ ಪಕ್ಷದ ಶಾಸಕ ಕೆ.ಎಸ್.ಬಸವಂತಪ್ಪ ಗರಂ!

On: August 7, 2025 6:40 PM
Follow Us:
K. S. BASAVANTHAPPA
---Advertisement---

SUDDIKSHANA KANNADA NEWS/ DAVANAGERE/DATE:07_08_2025

ದಾವಣಗೆರೆ: ನೀವು ಮಾಡುತ್ತಿರುವ ಕಾಮಗಾರಿ ನೋಡಿದರೆ, ರಸ್ತೆ ಕಾಮಗಾರಿ ನಡೆಸಿದ ಕೆಲವೇ ತಿಂಗಳಲ್ಲಿ ಡಾಂಬರ್ ಕಿತ್ತುಹೋಗಿ, ತಗ್ಗು–ಗುಂಡಿಗಳು ಬಿದ್ದು ಮತ್ತೆ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

READ ALSO THIS STORY: ಭುಗಿಲೆದ್ದ ಕುಂದುವಾಡ ಜನರ ಆಕ್ರೋಶ: ರಸ್ತೆ ನಿರ್ಮಿಸದಿದ್ದರೆ ರಿಂಗ್ ರಸ್ತೆ ಬಂದ್ ಮಾಡಿ ಪಾಲಿಕೆಗೆ ಮುತ್ತಿಗೆ ಹಾಕುವ ಎಚ್ಚರಿಕೆ!

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೊಸಹಳ್ಳಿ ಕ್ರಾಸ್‌ನಿಂದ ಲೋಕಿಕೆರೆಯವರೆಗೆ 6 ಕೋಟಿ ರೂ. ವೆಚ್ಚದ ರಾಜ್ಯ ಹೆದ್ದಾರಿ ರಸ್ತೆ ಡಾಂಬರೀಕರಣ ಕಾಮಗಾರಿ ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ವಾರದ ಹಿಂದೆ ಕಾಮಗಾರಿ ಆರಂಭವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ರಸ್ತೆ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದಾರೆ.

ಶಾಸಕ ಕೆ.ಎಸ್.ಬಸವಂತಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಳಪೆ ರಸ್ತೆ ಕಾಮಗಾರಿ ಕಂಡು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗರಂ ಆದರು.

ಕೂಡಲೇ ದೂರವಾಣಿ ಮೂಲಕ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಅವರನ್ನು ಸಂಪರ್ಕ ಮಾಡಿ ಇಲ್ಲಿನ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದರು. ರಸ್ತೆ ಕಾಮಗಾರಿ ಆರಂಭಗೊಂಡು ಇನ್ನೂ ಮುಕ್ತಾಯವೇ ಆಗಿಲ್ಲ, ಆಗಲೇ ಮಾಡಿದ ರಸ್ತೆ ಕಿತ್ತುಕೊಂಡು ಹೋಗುವಂತಿದೆ. ಮಳೆ ಬರುವಾಗ ಡಾಂಬರ್ ಹಾಕಿದರೆ ರಸ್ತೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇಲ್ಲಿ ಕೆಲಸಗಾರರನ್ನು ಬಿಟ್ಟರೆ ಸಂಬಂಧಪಟ್ಟ ಇಂಜಿನಿಯರ್, ಗುತ್ತಿಗೆದಾರ ಇಲ್ಲ. ಕೆಲಸಗಾರರು ಅವರ ಮನಸ್ಸಿಗೆ ತೋಚಿದಂತೆ ಡಾಂಬರ್ ಹಾಕುತ್ತಿದ್ದಾರೆ. ಈ ರೀತಿ ಕೆಲಸ ಮಾಡಿದರೆ ಮೂರು ದಿನ ಉಳಿಯೋದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಹಳೆಯ ಡಾಂಬರ್ ರಸ್ತೆ ಕಿತ್ತು ಹೊಸ ಕಾಮಗಾರಿ ನಡೆಸಬೇಕು. ಇಲ್ಲಿ ನೋಡಿದರೆ ಆ ರಸ್ತೆಯ ಮೇಲೆ ಡಾಂಬರೀಕರಣ ಮಾಡಲಾಗುತ್ತಿದೆ. 6.50 ಎಂಎಂ ಡಾಂಬರ್ ಹಾಕಬೇಕು. ಪರೀಕ್ಷೆ ಮಾಡಿದರೆ 6 ಎಂಎಂ ಡಾಂಬರ್ ಹಾಕಿದ್ದಾರೆ. ಇದಕ್ಕೆ ಯಾರು ಹೊಣೆ? ಕೂಡಲೇ ಕಳಪೆ ಕಾಮಗಾರಿ ನಿಲ್ಲಿಸಿ ಗುಣಮಟ್ಟ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.

ಮೊದಲೇ ಜನಪ್ರತಿನಿಧಿಗಳು ಕಾಮಗಾರಿಗಳ ಭೂಮಿಪೂಜೆ ವೇಳೆ ಗುತ್ತಿಗೆದಾರರಿಗೆ ದೀರ್ಘಕಾಲ ಹಾಗೂ ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಾಣ ಮಾಡಿ ಎಂದು ಸೂಚನೆ ನೀಡಿದರೂ, ಅವೈಜ್ಞಾನಿಕ ಕಾಮಗಾರಿಗಳ ಹಾವಳಿ ತಪ್ಪಿಲ್ಲ. ಸರ್ಕಾರದ ಅನುದಾನ ಕಳಪೆ ಕಾಮಗಾರಿಯಲ್ಲಿ ಕೊಚ್ಚಿ ಹೋಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಅದನ್ನು ನೀವು ಸಾಬೀತು ಮಾಡುತ್ತಿದ್ದೀರಿ. ಇದಕ್ಕೆ ಅಸ್ಪದ ಕೊಡದಂತೆ ಗುಣಮಟ್ಟ ಕಾಮಗಾರಿ ನಡೆಸಬೇಕೆಂದು ಇಂಜಿನಿಯರ್‌ಗೆ ತಾಕೀತು ಮಾಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment