Home ದಾವಣಗೆರೆ ಎನ್. ಶಾಂತಮ್ಮ ನೀಲಕಂಠಪ್ಪ ವಿಧಿವಶ: ಪತ್ರಕರ್ತ ನಿಂಗರಾಜುಗೆ ಮಾತೃ ವಿಯೋಗ
ದಾವಣಗೆರೆನವದೆಹಲಿಬೆಂಗಳೂರು

ಎನ್. ಶಾಂತಮ್ಮ ನೀಲಕಂಠಪ್ಪ ವಿಧಿವಶ: ಪತ್ರಕರ್ತ ನಿಂಗರಾಜುಗೆ ಮಾತೃ ವಿಯೋಗ

Share
ವಿಧಿವಶ
Share

ದಾವಣಗೆರೆ: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್. ಶಾಂತಮ್ಮ ನೀಲಕಂಠಪ್ಪ ಅವರು ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.

ದಾವಣಗೆರೆ ಪತ್ರಕರ್ತ ಎನ್. ನಿಂಗರಾಜು ಅವರ ತಾಯಿ ಎನ್.ಶಾಂತಮ್ಮ ನೀಲಕಂಠಪ್ಪ ಅವರಿಗೆ 70 ವರ್ಷ ವಯಸ್ಸಾಗಿತ್ತು.

ನಗರದ ವಿನೋಬ ನಗರದ ಜೊಳ್ಳಿ ಕಾಂಪೌಂಡ್ ವಾಸಿಯಾಗಿದ್ದ ಮೃತ ಶಾಂತಮ್ಮ ಅವರು ಯುವ ಪತ್ರಕರ್ತ ಎನ್.ನಿಂಗರಾಜು, ಮಂಜುನಾಥ, ಜ್ಯೋತಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು-ಬಳಗ ಅಗಲಿದ್ದಾರೆ.

ನಾಳೆ ಅಂತ್ಯಕ್ರಿಯೆ: 

ಮೃತರ ಅಂತ್ಯಕ್ರಿಯೆಯು ಜೂ.1ರಂದು ಸೋಮವಾರ ಮಧ್ಯಾಹ್ನ 3.30ಕ್ಕೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಲಿದೆ.

Share

Leave a comment

Leave a Reply

Your email address will not be published. Required fields are marked *