SUDDIKSHANA KANNADA NEWS/ DAVANAGERE/ DATE:27_07_2025
ದಾವಣಗೆರೆ: ಮುಂಗಾರು ಮಳೆ ಆರಂಭವಾದರೆ ಸಾಕು ಜೋಗ ವೈಭವ ಕಾಣ್ತುಂಬಿಕೊಳ್ಳಬೇಕೆನಿಸುತ್ತದೆ. ಇಂಥ ಜಗದ್ವಿವಿಖ್ಯಾತ ಜಲಧಾರೆ ನೋಡುವ ಅವಕಾಶವನ್ನು ದಾವಣಗೆರೆ ಕೆಎಸ್ಆರ್ ಟಿಸಿ ರಾಜಹಂಸ ಬಸ್ ವ್ಯವಸ್ಥೆ ಮಾಡಿದೆ.
ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ಪ್ರವಾಸದ ವ್ಯವಸ್ಥೆಯನ್ನು ಕಲ್ಪಿಸಿದೆ. ಬೆಳಗ್ಗೆ 7.15 ಕ್ಕೆ ದಾವಣಗೆರೆ ಯಿಂದ ಹೊರಡುವ ಬಸ್ ಹರಿಹರ ನಗರ ಕ್ಕೆ 7.45 ಕ್ಕೆ ಅಲ್ಲಿಂದ ಪ್ರಯಾಣಿಕರನ್ನು ಕರೆದುಕೊಂಡು ಬೆಳಗ್ಗೆ
10.30 ಕ್ಕೆ ಶಿರಸಿ ತಲುಪಿ ಶಕ್ತಿ ದೇವತೆ ಮಾರಿಕಾಂಬಾ ದೇವರ ದರ್ಶನ ಮಾಡಿಕೊಂಡು ಬಳಿಕ ಮಧ್ಯಾಹ್ನ 1 ಗಂಟೆಗೆ ಜೋಗ ತಲುಪುತ್ತದೆ.
ಜೋಗ ದಿಂದ ಮತ್ತೆ 4.30 ಕ್ಕೆ ಹೊರಟು ರಾತ್ರಿ 8.30 ಕ್ಕೆ ದಾವಣಗೆರೆಗೆ ಬರುತ್ತದೆ. ಎರಡು ಕಡೆಯಿಂದ ಓರ್ವ ವ್ಯಕ್ತಿಗೆ 650 ರೂ, ಮಕ್ಕಳಿಗೆ 500 ರೂ ಪ್ರಯಾಣ ದರ ನಿಗದಿ ಮಾಡಲಾಗಿದೆ. ಮಾಧ್ಯಮ ವರ್ಗ ಹಾಗೂ ಪುಟ್ಟ ಕುಟುಂಬದವರು ಒಂದು ದಿನದ ಪಿಕ್ ನಿಕ್ ಮೂಲಕ ಅದ್ಭುತ ಪ್ರವಾಸ ಮಾಡಬಹುದು.
ಬಸ್ ಗೆ ಚಾಲನೆ ನೀಡಿ ಮಾತನಾಡಿದ ಕೆ ಎಸ್ ಆರ್ ಟಿ ಸಿ ನಿವೃತ್ತ ನಿಲ್ದಾಣಾಧಿಕಾರಿ ಎ. ಕೆ. ಗಣೇಶ್ ವೀಕೆಂಡ್ ನಲ್ಲಿ ಒಂದು ದಿನದ ಪ್ರವಾಸ ಮಾಡಿ ಜೋಗ ಜಲಪಾತ ಸೌಂದರ್ಯ ಸವಿಯಬಹುದು, ದಾವಣಗೆರೆ ಜನರಿಗೆ ಅನುಕೂಲವಾಗಲೆಂದು ಈ ಸಾರಿಗೆ ಸಂಸ್ಥೆ ಈ ಅನುಕೂಲ ಮಾಡಿದೆ. ಈ ಅವಕಾಶ ಸದುಪಯೋಗ ಮಾಡಿಕೊಂಡು ಪ್ರವಾಸ ಮಾಡಿ, ಕುಟುಂಬದವರ ಜೊತೆ ಸಂತಸದ ಕ್ಷಣ ಕಳೆಯಿರಿ ಎಂದು ತಿಳಿಸಿದರು.
ಸಂಚಾರ ನಿಯಂತ್ರಣಾ ಧಿಕಾರಿ ಪುಷ್ಪಾ ಬಜಂತ್ರಿ ಮಾತನಾಡಿ ಕಡಿಮೆ ಖರ್ಚಿನಲ್ಲಿ ನಾವು ಜೋಗ ನೋಡಲು ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ಸಹ ಪ್ರವಾಸ ಮಾಡಬಹುದು ಎಂದು ತಿಳಿಸಿದರು.
ಜೋಗ ಪ್ರವಾಸ ಕೈಗೊಂಡ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ದಾವಣಗೆರೆ ವಿಭಾಗದ ಜಿಲ್ಲಾ ಸಂಚಾರ ನಿಯಂತ್ರಣಾಧಿಕಾರಿಗಳಾದ ಗಿರೀಶ್ ಅವರು ಸುಖಕರ ಪ್ರಯಾಣವಾಗಲಿ ಎಂದು ಶುಭ ಹಾರೈಸಿದರು. ಈ ವೇಳೆ
ಸಂಚಾರ ನಿರೀಕ್ಷಕ ಅಧಿಕಾರಿ ಕೊಟ್ರೇಶ್ ಪುಂಡಿ, ಬಸ್ ನಿಲ್ದಾಣದ ಪೊಲೀಸ್ ಕೊಟ್ರೇಶ್ ಕುಂಬಾರ ಹಾಗೂ ಚಾಲಕರಾದ ಕೃಷ್ಣ ಮೂರ್ತಿ, ಪ್ರವಾಸಿಗರು ಉಪಸ್ಥಿತರಿದ್ದರು.