ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಲಿಪಿಕ ಸಿಬ್ಬಂದಿಯ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

On: June 27, 2025 6:18 PM
Follow Us:
---Advertisement---
SUDDIKSHANA KANNADA NEWS/ DAVANAGERE/ DATE-27-06-2025
ಶಿವಮೊಗ್ಗ: ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಓರ್ವ ಲಿಪಿಕ ಸಿಬ್ಬಂದಿಯನ್ನು ಲಿಖಿತ ಪರೀಕ್ಷೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆರ್ಹರಿಂದ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು, 60 ವರ್ಷಗಳ ವಯೋಮಿತಿ ಮೀರದ ಮಾಜಿ ಸೈನಿಕರಿಗೆ ಮೀಸಲಾಗಿರುತ್ತದೆ. ಈ ನೇಮಕಾತಿಯು ಸರ್ಕಾರದ ಖಾಯಂ ಹುದ್ದೆಗೆ ಸಮನಾಗಿರುವುದಿಲ್ಲ ಮತ್ತು ಸೇವಾ ಖಾಯಮಾತಿಗೆ ಅವಕಾಶವಿರುವುದಿಲ್ಲ.
ಕೇಂದ್ರ ಸಶಸ್ತ್ರ ಸೇನಾಪಡೆಗಳ ಯಾವುದಾದರೂ ಒಂದು ವಿಭಾಗದಲ್ಲಿ ಲಿಪಿಕ ನೌಕರರಾಗಿ ಸೇವೆ ಸಲ್ಲಿಸಿದ್ದು, ಸೇನಾಸೇವೆಯ ನಿವೃತ್ತಿ ನಂತರ ಕೇಂದ್ರ / ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಲಿಪಿಕ ನೌಕರರಾಗಿ ಖಾಯಂ / ಹಂಗಾಮಿಯಾಗಿ ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದವರಿಗೆ, ಆದ್ಯತೆ ನೀಡಲಾಗುತ್ತದೆ. ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಸಂವಹನವು (ಬರೆಯಲು / ಓದಲು /ಮಾತನಾಡಲು) ಮತ್ತು ಗಣಕ ಯಂತ್ರದಲ್ಲಿ ಕನ್ನಡ / ಇಂಗ್ಲೀಷ್ ಬೆರಳಚ್ಚು ಪ್ರಾವೀಣ್ಯತೆಯು ಅತ್ಯಗತ್ಯವಾಗಿರುತ್ತದೆ.
ಆಸಕ್ತರು ದಿನಾಂಕ.07.07.2025 ರೊಳಗಾಗಿ ಅರ್ಜಿಯನ್ನು ತಮ್ಮ ಸ್ವಹಸ್ತಾಕ್ಷರದಲ್ಲಿ ಪೂರ್ಣ ಸ್ವವಿವರಗಳೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08182220925/ಸಂಪರ್ಕಿಸುವುದು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment