ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕಾಲೇಜುಗಳಲ್ಲಿ ವಿವಿಧ ಶಿಕ್ಷಕರ, ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

On: May 13, 2025 2:11 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-13-05-2025

ಶಿವಮೊಗ್ಗ: ಶಿವಮೊಗ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ ಕಾಲೇಜುಗಳಿಗೆ ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ವಿವರ; ಕನ್ನಡ ಭಾಷಾ ಶಿಕ್ಷಕರು-7, ಇಂಗ್ಲೀಷ್ ಭಾಷಾ ಶಿಕ್ಷಕರು-9, ಹಿಂದಿ ಭಾಷಾ ಶಿಕ್ಷಕರು-4, ಉರ್ದು ಭಾಷಾ ಶಿಕ್ಷಕರು-2, ಗಣಿತ ಶಿಕ್ಷಕರು-4, ಸಾಮಾನ್ಯ ವಿಜ್ಞಾನ ಶಿಕ್ಷಕರು-4, ಸಮಾಜ ವಿಜ್ಞಾನ ಶಿಕ್ಷಕರು-8, ಗಣಕಯಂತ್ರ ಶಿಕ್ಷಕರು-2, ದೈಹಿಕ ಶಿಕ್ಷಣ ಶಿಕ್ಷಕರು-2 ಒಟ್ಟು-42 ಅತಿಥಿ ಶಿಕ್ಷಕರು.

ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ವಿವರ; ಕನ್ನಡ ಭಾಷಾ ಶಿಕ್ಷಕರು-3, ಇಂಗ್ಲೀಷ್ ಭಾಷಾ ಶಿಕ್ಷಕರು-3, ಉರ್ದು ಭಾಷಾ ಶಿಕ್ಷಕರು-3, ಗಣಿತ ಶಿಕ್ಷಕರು-3, ಭೌತಶಾಸ್ತ್ರ ಉಪನ್ಯಾಸಕರು-3, ರಸಾಯನಶಾಸ್ತ್ರ ಉಪನ್ಯಾಸಕರು-3, ಜೀವಶಾಸ್ತ್ರ ಉಪನ್ಯಾಸಕರು-3, ವ್ಯವಹಾರ ಅಧ್ಯಯನ ಉಪನ್ಯಾಸಕರು-1, ಲೆಕ್ಕಶಾಸ್ತ್ರ ಉಪನ್ಯಾಸಕರು -2, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು-1, ಅರ್ಥಶಾಸ್ತ್ರ ಉಪನ್ಯಾಸಕರು-1, ಇತಿಹಾಸ ಉಪನ್ಯಾಸಕರು-1 ಒಟ್ಟು 27 ಉಪನ್ಯಾಸಕರು.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್‌ಸೈಟ್ https://dom.karnataka.gov.in ರಿಂದ ಪಡೆದು, ಮೇ 19 ರೊಳಗಾಗಿ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಶಿವಮೊಗ್ಗ -7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಗಳನ್ನು ಸಂಪರ್ಕಿಸುವುದು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಮಂಗಳವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2025: ಈ ರಾಶಿಯವರಿಗೆ ಧನ ಲಾಭ 

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

ದಾವಣಗೆರೆ

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

ದಾವಣಗೆರೆ

ದಾವಣಗೆರೆ ವಿವಿ ಅಂತರಕಾಲೇಜು ಭಾರ ಎತ್ತುವ ಸ್ಪರ್ಧೆ: ಹೊನ್ನೂರು ಗೊಲ್ಲರಹಟ್ಟಿ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

ಪ್ರಭಾ ಮಲ್ಲಿಕಾರ್ಜುನ್

ಅರಣ್ಯ ಇಲಾಖೆ ಹುದ್ದೆಗಳ ನೇರ ನೇಮಕಾತಿಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ವಿದ್ಯಾರ್ಥಿಗಳ ಮನವಿ

ಆರ್ ಎಸ್ ಎಸ್

ಆರ್ ಎಸ್ ಎಸ್ ಬ್ಯಾನ್ ವಿಚಾರಕ್ಕೆ ಕೇಸರಿ ಪಡೆ ನಿಗಿನಿಗಿ, ತಾಕತ್ತೇನೆಂದು ತೋರಿಸ್ತೇವೆ: ಬಿಜೆಪಿ ನಾಯಕರ ಸವಾಲ್!

Leave a Comment