SUDDIKSHANA KANNADA NEWS/ DAVANAGERE/ DATE:23-02-2024
ಬೆಂಗಳೂರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಇಂಥವರಿಗೆ ಉದ್ಯೋಗಾವಕಾಶ ಇದೆ.
ಹುದ್ದೆಯ ಮಾಹಿತಿ:
ಕನ್ಸಲ್ಟೆಂಟ್ (ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ)-3
ಕನ್ಸಲ್ಟೆಂಟ್ (ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ)-2
ಕನ್ಸಲ್ಟೆಂಟ್ (ಟೆಕ್ನಿಕಲ್ ಆಫೀಸರ್)- 8
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ,
ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 21, 2024ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
- ಕನ್ಸಲ್ಟೆಂಟ್ (ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ)- ಮಾಸಿಕ ₹ 75,000
- ಕನ್ಸಲ್ಟೆಂಟ್ (ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ)- ಮಾಸಿಕ ₹ 60,000
- ಕನ್ಸಲ್ಟೆಂಟ್ (ಟೆಕ್ನಿಕಲ್ ಆಫೀಸರ್)- ಮಾಸಿಕ ₹ 50,000
ಉದ್ಯೋಗದ ಸ್ಥಳ:
- ದೆಹಲಿ
- ಬೆಂಗಳೂರು
- ಮನೇಸರ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), 4 ನೇ ಮಹಡಿ, ಬಾಂಗ್ಲಾ ಸಾಹಿಬ್ ರಸ್ತೆ, ಕಾಳಿ ಮಂದಿರದ ಹಿಂದೆ ಗೋಲ್ ಮಾರ್ಕೆಟ್, ನವದೆಹಲಿ-110001