ಭಾರತೀಯ ರಕ್ಷಣಾ ಪಡೆಗಳ ಅಡಿಯಲ್ಲಿ ಬರುವ ಭಾರತೀಯ ವಾಯುಪಡೆಯಲ್ಲಿ ಹಲವು ಅಗ್ನಿವೀರ ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳಿಗೆ ನೇಮಕಾತಿ(Indian Air Force Jobs for 12th pass) ಮಾಡಿಕೊಳ್ಳಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
12ನೇ ತರಗತಿ ಪಾಸಾದವರಿಗೆ ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಈ ನೇಮಕಾತಿಯಲ್ಲಿ ಅವಕಾಶವಿದ್ದು, ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಇತರೆ ಅರ್ಹತೆಗಳೇನು? ಆಯ್ಕೆಯಾದವರಿಗೆ ಸಿಗುವ ಸಂಬಳವೇಷ್ಟು? ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಇತ್ಯಾದಿ ನೇಮಕಾತಿಯ ಉಪಯುಕ್ತ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.
IAF Recruitment 2024 – ಹುದ್ದೆಗಳ ನೇಮಕಾತಿ ವಿವರ
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಕ್ರೀಡಾ ಕೋಟಾ ಅಡಿಯಲ್ಲಿ ಖಾಲಿ ಇರುವಂತಹ ಅಗ್ನಿವೀರ್ ವಾಯು ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದೆ. ಕ್ರಿಕೆಟ್ ಸೇರಿದಂತೆ 20ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ವಾಯುಪಡೆಯಲ್ಲಿ ನೇರ ನೇಮಕಾತಿಗೆ ಉದ್ಯೋಗವಕಾಶವಿದೆ.
Indian Air Force Education Qualification- ಅರ್ಹತೆಗಳು:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅವಿವಾಹಿತ ಪುರುಷನಾಗಿದ್ದು, 17 ರಿಂದ 20 ವರ್ಷದ ವಯೋಮಿತಿಯಲ್ಲಿರಬೇಕು. ಅಂದರೆ ಅರ್ಜಿ ಸಲ್ಲಿಸುವವರು ಜನವರಿ 2, 2004 ರಿಂದ ಜುಲೈ 2, 2007ರ ಅವಧಿಯಲ್ಲಿ ಜನಿಸಿರಬೇಕು.
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇಕಡ 50ರಷ್ಟು ಕನಿಷ್ಠ ಅಂಕಗಳೊಂದಿಗೆ ಪಾಸಾಗಿರಬೇಕು. ಅದೇ ರೀತಿ ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಪದವಿ ಮುಗಿಸಿದವರಿಗು ಕೂಡ ಅವಕಾಶವಿದೆ. ಹುದ್ದೆಗಳಿಗೆ ಅನುಗುಣವಾಗಿ ಸಂಪೂರ್ಣ ಶೈಕ್ಷಣಿಕ ಅರ್ಹತೆಗಳ ವಿವರಕ್ಕಾಗಿ ಅಧಿಸೂಚನೆಯನ್ನು ಪರಿಶೀಲಿಸಿ.
Indian Air Force salary-ಮಾಸಿಕ ವೇತನ :
ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ನಾಲ್ಕು ವರ್ಷದ ಅವಧಿಗೆ 30,000ರೂ. ಯಿಂದ 40,000ರೂ. ವರೆಗೆ ನೀಡಲಾಗುತ್ತದೆ.
selection process- ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುವುದು?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ಸ್ಪೋರ್ಟ್ಸ್ ಸ್ಕಿಲ್ ಟ್ರಯಲ್ಸ್ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ದಾಖಲೆ ಪರಿಶೀಲನೆ ಮಾಡುವುದರ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Application fee-ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ :
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ 100ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ಈ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ, ಆನ್ಲೈನ್ ಮೂಲಕವೇ ಪಾವತಿಸಬೇಕು.
ast date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29 ಆಗಸ್ಟ್ 2024
Indian Air Force online application link-ನೇಮಕಾತಿಯ ಪ್ರಮುಖ ಲಿಂಕುಗಳು :
• ಅರ್ಜಿ ಸಲ್ಲಿಕೆ ಲಿಂಕ್ – Apply Now
• ಅಧಿಸೂಚನೆ – Download Now