Home ಕ್ರೈಂ ನ್ಯೂಸ್ ರೈಲು ಪ್ರಯಾಣಿಕರೇ ಎಚ್ಚರ! ಕುಟುಂಬದಂತೆ ನಟಿಸಿ ನಗದು, ಆಭರಣ ಕದಿಯುತ್ತಿದ್ದ ಒಂದೇ ಕುಟುಂಬದ 7 ಕಿಲಾಡಿಗಳ ಬಂಧನ
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ರೈಲು ಪ್ರಯಾಣಿಕರೇ ಎಚ್ಚರ! ಕುಟುಂಬದಂತೆ ನಟಿಸಿ ನಗದು, ಆಭರಣ ಕದಿಯುತ್ತಿದ್ದ ಒಂದೇ ಕುಟುಂಬದ 7 ಕಿಲಾಡಿಗಳ ಬಂಧನ

Share
ರೈಲು
Share

ಝಾನ್ಸಿ (ಉತ್ತರ ಪ್ರದೇಶ): ರೈಲುಗಳಲ್ಲಿ ಕುಟುಂಬದಂತೆ ಪ್ರಯಾಣಿಸುತ್ತಾ, ಸಹಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚುತ್ತಿದ್ದ ಒಂದೇ ಕುಟುಂಬದ ಏಳು ಮಂದಿ ಖದೀಮರನ್ನು ಝಾನ್ಸಿ ರೈಲ್ವೇ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಗುಜರಾತ್‌ನ ಭಾವನಗರ ಜಿಲ್ಲೆಯ ನಿವಾಸಿಗಳಾದ ಈ ಆರೋಪಿಗಳು, ಅನುಮಾನ ಬಾರದಂತೆ ಗಂಡ-ಹೆಂಡತಿ ಹಾಗೂ ಸಂಬಂಧಿಕರಂತೆ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರು ನಿದ್ರೆಗೆ ಜಾರಿದಾಗ ಅಥವಾ ಬ್ಯಾಗ್ ಇಟ್ಟು ಪಕ್ಕಕ್ಕೆ ತೆರಳಿದಾಗ, ಅವರ ಬೆಲೆಬಾಳುವ ವಸ್ತುಗಳನ್ನು ಕದಿಯುವುದು ಇವರ ಕಾಯಕವಾಗಿತ್ತು. ವಿಶೇಷವಾಗಿ ಮಹಿಳಾ ಪ್ರಯಾಣಿಕರ ಬ್ಯಾಗ್‌ಗಳನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು.

ಸಖತ್ ಸ್ಕೆಚ್ ಹಾಕಿ ಝಾನ್ಸಿ ರೈಲ್ವೇ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ಕು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ಏಳೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಚಿನ್ನದ ಬಳೆಗಳು, ಮಂಗಳಸೂತ್ರ, ಉಂಗುರ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles