SUDDIKSHANA KANNADA NEWS/ DAVANAGERE/ DATE:17-08-2023
ದಾವಣಗೆರೆ: ಇಲ್ಲಿನ ವಿದ್ಯಾನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಕನ್ನಡ ಭವನದಲ್ಲಿ ಆ. 19ರಂದು ಬೆಳಿಗ್ಗೆ 11ಕ್ಕೆ ಜಾನಪದ ಕಲಾ ಉತ್ಸವ ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ, ಮತ್ತು ಶ್ರೀಅನುದಾನಮ್ ಚಾರಿಟೆಬಲ್ ಟ್ರಸ್ಟ್ ದಾವಣಗೆರೆ, ಮತ್ತು ನಿಹಾರಿಕ ಸಾಂಸ್ಕೃತಿಕ ಪ್ರತಿಷ್ಠಾನ, ದಾವಣಗೆರೆ, ಹಾಗೂ ಭವಾನಿ ಫೌಂಡೇಶನ್, ಗೋಕುಲಹಟ್ಟಿ, ಜಗಳೂರು ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಈ ಉತ್ಸವ ನಡೆಯಲಿದೆ ಎಂದು ಶ್ರೀಅನುದಾನಮ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕುಬೇರ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಸ್.ಎಸ್.ಕೇರ್ ಟ್ರಸ್ಟಿನ ಲೈಫ್ ಟ್ರಸ್ಟಿ ಡಾ.ಪ್ರಭ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಎಲ್. ಕುಬೇರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ. ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಕೃಷ್ಣ ನಾಯ್ಕ, ರವಿಚಂದ್ರ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎನ್.ಜಯದೇವ ನಾಯ್ಕ, ಮಹಾನಗರ ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಸವಿತಾ ಹುಲ್ಲುಮನಿ ಗಣೇಶ್, ಮೀನಾಕ್ಷಿ ಜಗದೀಶ್, ಕಾಂಗ್ರೆಸ್ ಮುಖಂಡ ಎಸ್. ನಂಜಾ ಜಾಯ್ಕ, ಗೋವಿಂದ ನಾಯ್ಜ ಇತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿದ್ದು, ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ನಂಜಾನಾಯ್ಕ, ತಿಮ್ಮೇಶ್ ನಾಯ್ಕ, ರಮೇಶ್ ನಾಯ್ಕ, ಬೆಂಡಿಗೆರೆ ರಾಜಶೇಖರ ಮತ್ತಿತರರು ಹಾಜರಿದ್ದರು.