ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಜು. 20 ರಿಂದ ಸೆ. 6 ರವರೆಗೆ ಜಲಸಿರಿ ಯೋಜನೆ ಕಾಮಗಾರಿ: ಈ ಏರಿಯಾ ಜನರು ನೋಡ್ಲೇಬೇಕು ಈ ನ್ಯೂಸ್

On: July 17, 2023 11:55 AM
Follow Us:
Davanagere Palike
---Advertisement---

SUDDIKSHANA KANNADA NEWS/ DAVANAGERE/ DATE:17-07-2023

ದಾವಣಗೆರೆ (Davanagere): ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜುಲೈ 20 ರಿಂದ ಸೆಪ್ಟೆಂಬರ್ 6 ವರೆಗೆ ನಗರದ ಅರಳಿಮರ ಸರ್ಕಲ್‍ನಿಂದ ಅಶೋಕ ಚಿತ್ರಮಂದಿರದ ಕೆ.ಆರ್. ರಸ್ತೆವರೆಗೆ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿ ನಿರ್ವಹಿಸಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.

ಏಷಿಯನ್ ಅಭಿವೃದ್ಧಿ ಬ್ಯಾಂಕ್‍ನ ನೆರವು ಹಾಗೂ ಅಮೃತ್ ಯೋಜನೆಯಡಿ ಮಹಾನಗರ ಪಾಲಿಕೆ ಹಾಗೂ ಕೆ. ಯು. ಐ. ಡಿ. ಎಫ್.ಸಿ., ಇಲಾಖೆಯ ವತಿಯಿಂದ ಕೈಗೊಂಡಿರುವ 24×7 ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ (ಜಲಸಿರಿ ಯೋಜನೆ) ಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: 

School: ಶಾಲೆಯೊಳಗೆ ಕುಳಿತರೆ ಮೇಲ್ಛಾವಣಿ ಬೀಳುವ ಭಯ… ಹೊರಗಡೆ ಹೋದರೆ ಕರೆಂಟ್ ಶಾಕ್ ಆತಂಕ… ಮಕ್ಕಳಿಗೇನಾದರೂ ಆದ್ರೆ ಯಾರು ಹೊಣೆ…?

 

ನಿಗಧಿತ ಮಾರ್ಗಗಳ ರಸ್ತೆಯ ಎರಡೂ ಬದಿಗಳಲ್ಲಿ ನೆಲ ಅಗೆತ ಹಾಗೂ ಯೋಜನೆಯ ಅವಶ್ಯಕತೆಗನುಗುಣವಾಗಿ ರಸ್ತೆಯನ್ನು ಕತ್ತರಿಸಿ ಪೈಪುಗಳನ್ನು ಅಳವಡಿಸಲಾಗುವುದು. ಜಲಸಿರಿ ಕಾಮಗಾರಿಯನ್ನು ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರ ಮನೆಗಳು, ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಛೇರಿಗಳು, ನಗರದ ಮಾರುಕಟ್ಟೆ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು, ಖಾಸಗಿ ಬಸ್ ನಿಲ್ದಾಣಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪೈಪುಗಳನ್ನು ಅಳವಡಿಸಲು ನೆಲ ಅಗೆತ ಮಾಡಿರುವ ಸ್ಥಳಗಳಲ್ಲಿ ಬ್ಯಾರಿಕೇಡ್, ಸಂಚಾರ ಸೂಚನಾ ಫಲಕಗಳು ಹಾಗೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು.

ಆದ್ದರಿಂದ ವಿವಿಧ ಅಂಗಡಿ ಮುಂಗಟ್ಟು ಮಾಲೀಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ಬೇರೆ ಸ್ಥಳದಲ್ಲಿ ನಿಲ್ಲಿಸಬೇಕು ಮತ್ತು ಕಾಮಗಾರಿ ನಡೆಸುವ ಮಾರ್ಗಗಳಲ್ಲಿ ಸಂಚರಿಸುವ ಸಾರ್ವಜನಿಕರು, ಹಿರಿಯ ನಾಗರೀಕರು ಶಾಲೆಗಳಿಗೆ ತೆರಳುವ ಮಕ್ಕಳು ಹಾಗೂ ವಾಹನ ಸವಾರರು ನಾಮ ಫಲಕದಲ್ಲಿ ಸೂಚಿಸಿದ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವರು ತಿಳಿಸಿದ್ದಾರೆ.

Davanagere News, Davanagere News Updates, Davanagere, Davanagere City, Davanagere Jalasiri 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರಂತೆ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ

ಸಿದ್ದರಾಮಯ್ಯರ ದುರಂಹಕಾರಿ ವರ್ತನೆಗೆ ಸ್ವಾಭಿಮಾನಿ ಅಧಿಕಾರಿ ಸ್ವಯಂನಿವೃತ್ತಿಗೆ ನಿರ್ಧಾರವಂತೆ!

ಕಾನೂನು

ತಕ್ಷಣ ಭೂಸ್ವಾಧೀನ ಕಾನೂನು ಹಿಂಪಡೆಯಿರಿ: ಸಿಎಂಗೆ ಪಂಡಿತಾರಾಧ್ಯ ಶ್ರೀಗಳ ಬಹಿರಂಗ ಮನವಿ

ಜುಲೈ 5ಕ್ಕೆ ಸಿದ್ಧಣ್ಣ ಜನುಮದಿನ: ಸರ್ವ ಜನಾಂಗದ ಪ್ರೀತಿಯ ಸರದಾರ.. ಬಿಜೆಪಿ ಕಟ್ಟಾಳು, ನಿಷ್ಠಾವಂತ ಡಾ. ಜಿ.ಎಂ. ಸಿದ್ದೇಶ್ವರ: ಬಾಡದ ಆನಂದರಾಜ್

ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ, ಈ ರಾಶಿಯ ದಂಪತಿಗಳಿಗೆ ಎಲ್ಲಾ ಇದ್ದರೂ ಮನಶಾಂತಿ ಇಲ್ಲ

Leave a Comment