SUDDIKSHANA KANNADA NEWS/ DAVANAGERE/ DATE:10-07-2023
ದಾವಣಗೆರೆ: ಜೈನ(Jain)ಮುನಿ ಕಾಮಕುಮಾರ ನಂದಿ ಮಹಾರಾಜ ಜೈನಮುನಿ ಕೊಲೆಗೈದ ಹಂತಕರಿಗೆ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜೈನ (Jain) ಸಮುದಾಯದವರು ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೈನ ಸಮುದಾಯದ ಮುಖಂಡ ಗೌತಮ್ ಜೈನ್, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ದಿಗಂಬರ ಜೈನ ಮುನಿಗಳಾದ ಪರಮಪೂಜ್ಯ ಆಚಾರ್ಯ ಶ್ರೀ 108 ಕಾಮ
ಕುಮಾರನಂದಿ ಮಹಾರಾಜರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಹತ್ಯೆ ಮಾಡಿರುವುದು ಖಂಡನೀಯ. ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ನೋವಿನ ಸಂಗತಿ. ಈ ಕೃತ್ಯವನ್ನು ಸಕಲ ಸಮಾಜವು ಖಂಡಿಸುತ್ತದೆ ಎಂದರು.
ಘಟನೆ ಕುರಿತಂತೆ ಬೆಳಗಾವಿಯ ಉನ್ನತ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿ ಹಂತಕರನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಹಲವಾರು ಜಾಗರೂಕತೆಯನ್ನು ಕಾಪಾಡಿಕೊಂಡು
ತನಿಖೆಯ ಕಾರ್ಯಾಚರಣೆ ಮುಂದುವರಿಸಿಕೊಂಡು ಬಂದಿರುವುದು ಉತ್ತಮ. ಆದರೆ ಹಂತಕರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ:
S. S. Mallikarjun: ಮಾವ- ಅಳಿಯ ವಿಚಾರ ನನಗೆ ಗೊತ್ತಿಲ್ಲ, ಜಿ. ಎಂ. ಸಿದ್ದೇಶ್ವರ ಸೋಲಿಸುವುದೇ ನಮ್ಮ ಗುರಿ: ಎಸ್. ಎಸ್. ಮಲ್ಲಿಕಾರ್ಜುನ್
ಜೈನ ಧರ್ಮದ ಮುನಿ, ಸಾಧು, ಸಂತರ ಮೇಲೆ ನಡೆಯುವ ಅಹಿತಕರ ಘಟನೆಗಳನ್ನು ತಡೆಯಬೇಕು. ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಜೈನಮುನಿಗಳಿಗೆ ಸೂಕ್ತ ರೀತಿಯಲ್ಲಿ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಬಿ. ಎಸ್. ಸುನಿಲ್ ಕುಮಾರ್, ಸುದರ್ಶನ್ ಕುಮಾರ್, ಜಿನದತ್ತ ಎಸ್.ಟಿ., ಟಾಕಪ್ಪ ಎಸ್.ಕೆ., ದೇವೆಂದ್ರಪ್ಪ, ಧನ್ಯಕುಮಾರ್, ಆದಿನಾಥ್, ಸುರೇಶ್ ಕುಮಾರ್, ನೇಮಿರಾಜ್ , ಚಂದ್ರಪ್ರಭು
ಸೇರಿದಂತೆ ಜೈನ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
Jain Samaja Protest, Jain Samaja Angry, Jain Samaja Protest In Davanagere