SUDDIKSHANA KANNADA NEWS/ DAVANAGERE/ DATE:23-07-2023
ದಾವಣಗೆರೆ: ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣನ ಮೂರ್ತಿ ಕಿತ್ತು ಪಕ್ಕಕ್ಕಿಟ್ಟು ನಿಧಿಗಾಗಿ ಶೋಧ ನಡೆಸಿ ಹಾಗೂ ದರೋಡೆಗೆ ಹೊಂಚು ಹಾಕುತ್ತಿದ್ದ ಆರು ಆರೋಪಿಗಳನ್ನು ಜಗಳೂರು ಪೊಲೀಸರು (Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಗಳೂರು ನಗರದ ಪಿ. ಕಲ್ಲೇಶಿ (48), ದಾವಣಗೆರೆಯ ಆಜಾದ್ ನಗರ ವಾಸಿ ದಿವಾನ್ ಸಾಬ್ ಜಾವೀದ್, ಹುಬ್ಬಳ್ಳಿಯ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲೇಶಿ (30), ಹನುಮಂತ ಸೋಪಾನಿ ಪವಾರ್ (33), ಅಮೀರ್ ಖಾನ್ ಪಠಾಣ್ (30) ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್ ನ ಮುರ್ತಾಜಾಸಾಬ್ ಅಲಿಯಾಸ್ ಗೋಲಂದಾಜ್ (38) ಬಂಧಿತ ಆರೋಪಿಗಳು. ಬಂಧಿತರಿಂದ ಬಿಳಿ ಬಣ್ಣದ ಸ್ವಿಪ್ಟ್ ಡಿಸೈರ್ ಕಾರ್. ಕಟ್ಟಿಗೆ ಹಿಡಿಕೆ ಇರುವ ಒಂದು ಕಬ್ಬಿಣದ ಸುತ್ತಿಗೆ,, ಒಂದು ಜೊತೆ ಹ್ಯಾಂಡ್ ಗ್ಲೌಸ್, 1 ಕಟ್ಟಿಂಗ್ ಪ್ಲೇಯರ್, 2 ಕಬ್ಬಿಣದ ಪ್ಲಾಟ್ ಚಿಸೆಲ್‌ಗಳು, ಒಂದು ಸುರ್‌ಸುರ್‌ಬತ್ತಿ, ಮಾಸಲುಬಣ್ಣದ ಪ್ಲಾಸ್ಟಿಕ್ ಹಗ್ಗ, ಒಂದು ಗುಟಕಾ ಕಂಪನಿಯ ಖಾಲಿಬ್ಯಾಗ್, 2 ಪಾಕೆಟ್ ಖಾರದ ಪುಡಿ, 3 ಮೊಬೈಲ್‌ಗಳು, 2 ಸಾವಿರ ರೂಪಾಯಿ ನಗದು, ಟಾರ್ಚ್, ರೇಡಿಯಂ ಕಟ್ಟರ್ ಚಾಕು ವಶಕ್ಕೆ ಪಡೆಯಲಾಗಿದೆ.
ಶನಿವಾರ ರಾತ್ರಿ ಜಗಳೂರು ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಪಿಎಸ್‌ಐ ಎಸ್. ಡಿ. ಸಾಗರ್ ಮತ್ತು ಸಿಬ್ಬಂದಿಯವರು ಲಿಂಗಣ್ಣಹಳ್ಳಿ ರಸ್ತೆಯಲ್ಲಿ ಜನವಸತಿ ಇಲ್ಲದ ಸ್ಥಳದಲ್ಲಿ ಕಾರು ನಿಲ್ಲಿಸಿ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರು ಕಾರಿನ ಮುಂದೆ ನಿಂತಿದ್ದರು. ಅನುಮಾನಗೊಂಡು ಶನಿವಾರ ಬೆಳಗ್ಗಿನ ಜಾವ 3.30ರ ಸುಮಾರಿನಲ್ಲಿ ಅನುಮಾನಗೊಂಡ ಪಿಎಸ್‌ಐ ಮತ್ತು ಸಿಬ್ಬಂದಿಯವರು ಆ ಕಾರಿನ ಬಳಿಗೆ ಹೋಗುತ್ತಿದ್ದಂತೆ ಕಾರಿನ ಮುಂದೆ
ನಿಂತಿದ್ದ ಇಬ್ಬರು ಪೊಲೀಸ್ (Police) ಜೀಪ್ ನೋಡಿ ಓಡಿಹೋಗಲು ಪ್ರಯತ್ನಿಸಿದರು.
ಈ ಸುದ್ದಿಯನ್ನೂ ಓದಿ:
BIG BREAKING STORY, EYE VIRAS: ಸಾವಿರಾರು ಮಕ್ಕಳಿಗೆ ತಗುಲಿದೆ ಕಣ್ಣು ಬೇನೆ ( ಐ ವೈರಸ್): ಪೋಷಕರಿಗೆ ಮಕ್ಕಳ ತಜ್ಞ ವೈದ್ಯರು ಹೇಳಿದ್ದೇನು…? ತಂದೆ ತಾಯಿ ಓದಲೇಬೇಕಾದ ಸ್ಟೋರಿ
ಅವರನ್ನು ಸಿಬ್ಬಂದಿಯವರು ಬೆನ್ನುಹತ್ತಿ ಹಿಡಿದಿದ್ದು, ಪಿಎಸ್‌ಐ ಮತ್ತು ಜೀಪ್ ಚಾಲಕ ಕಾರಿನ ಬಳಿ ನಿಂತು ಕಾರಿನ ಡೋರ್ ತೆಗೆಯದಂತೆ ನೋಡಿಕೊಂಡಿದ್ದಾರೆ. ನಂತರ ಬೆನ್ನಟ್ಟಿ ಹಿಡಿದುಕೊಂಡು ಬಂದ ವ್ಯಕ್ತಿಗಳನ್ನು ಮತ್ತು ಕಾರಿನಲ್ಲಿದ್ದ
ವ್ಯಕ್ತಿಗಳನ್ನು ವಿಚಾರಿಸಿದಾಗ ದರೋಡೆಗೆ ಹೊಂಚು ಹಾಕಿದ್ದು ಬೆಳಕಿಗೆ ಬಂದಿದೆ. ಒಬ್ಬ ಮಾತ್ರ ಸ್ಥಳೀಯನಿದ್ದು, ಉಳಿದ ಐವರು ಬೇರೆ ಜಿಲ್ಲೆಯವರು. ದರೋಡೆ ಮಾಡಲು ಹೊಂಚು ಹಾಕಿರುವಂತೆ ಕಂಡುಬಂದಿದ್ದರಿಂದ ಠಾಣೆಗೆ ಕರೆತಂದು ಪಿಎಸ್‌ಐ ಸಾಗರ್ ರವರು ಕೊಟ್ಟ ದೂರಿನನ್ವಯ ಪಿಐ ಎಂ. ಶ್ರೀನಿವಾಸ್ ರಾವ್‌ರವರು ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೆಚ್ಚುವರಿ ಪೊಲೀಸ್ (Police) ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಎ.ಎಸ್.ಪಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದು, ಆರೋಪಿತರು ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧ ನಡೆಸಿ ದರೋಡೆ ಮಾಡಲು ಬಂದಿದ್ದರು. ಬಿದರಕೆರೆ – ಸಂತೆ ಮುದ್ದಾಪುರ ಗ್ರಾಮಗಳ ಮಧ್ಯೆ ಬರುವ ಬೇಡಿ ಆಂಜನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ
ಬಸವಣ್ಣನಮೂರ್ತಿಯನ್ನು ಕಿತ್ತು ಪಕ್ಕದಲ್ಲಿಟ್ಟು ನಿಧಿಗಾಗಿ ಶೋಧ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಜಗಳೂರು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಭರತೇಶ್ ಎಂಬ ವ್ಯಕ್ತಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು, ಆತನ ಪತ್ತೆಗೆ ಶೋಧ ಮುಂದುವರಿದಿದೆ. ಬಂಧಿತ ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಮ ಬೇಧಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿಐ ನಿವಾಸರಾವ್ ಎಂ, ಪಿಎಸ್ ಐ ಎಸ್. ಡಿ. ಸಾಗರ್, ಸಿಬ್ಬಂದಿ ವರ್ಗದವರಾದ ನಾಗಭೂಷಣ, ಪಂಪಾನಾಯ್ಕ, ಬಸವಂತಪ್ಪ, ಮಾರೆಪ್ಪ, ಬಸವರಾಜ, ಜೀಪ್ ಚಾಲಕರಾದ ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ, ಗಿರೀಶ್ ಅವರನ್ನು ಎಸ್ಪಿ ಡಾ. ಕೆ. ಅರುಣ್ ಅವರು ಅಭಿನಂದಿಸಿದ್ದಾರೆ.
Davanagere Police, Police News, Davanagere Police Midnight Operation, Police Arrest, Police News, Police News Updates, Police Suddi