ಬೇಕಾಗುವ ಸಾಮಾಗ್ರಿಗಳು
ಹಲಸಿನಕಾಯಿ – ಅರ್ಧ
ಬಾಸುಮತಿ ರೈಸ್ – 2 ಕಪ್
ಕರಿಮೆಣಸು – 1 ಟೀ ಸ್ಪೂನ್
ಏಲಕ್ಕಿ – 6
ಲವಂಗ – 7
ಬಿರಿಯಾನಿ ಎಲೆ – 1
ಜೀರಿಗೆ – 2 ಟೀ ಸ್ಪೂನ್
ಸೋಂಪು – 1 ಟೀ ಸ್ಪೂನ್
ಅನಾನಸ್ ಹೂ – 1
ಚಕ್ಕೆ – 1 ಇಂಚು
ದನಿಯಾ – 1 ಟೀ ಸ್ಪೂನ್
ಬೆಳ್ಳುಳ್ಳಿ ಎಸಳು – 7-8
ಶುಂಠಿ – ಅರ್ಧ ಇಂಚು
ಎಣ್ಣೆ – ಅಗತ್ಯವಿದ್ದಷ್ಟು
ಈರುಳ್ಳಿ – 3
ಹಸಿಮೆಣಸಿಕಾಯಿ – 4
ಟೊಮೆಟೋ – 1
ಪುದೀನಾ – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ಮೊಸರು – ಅರ್ಧ ಕಪ್
ಹಾಲು – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆಹಣ್ಣಿನ ರಸ – ಅರ್ಧ
ಮಾಡುವ ವಿಧಾನ
ಮೊದಲಿಗೆ ಸ್ಟೌವ್ ಮೇಲೆ ಚಿಕ್ಕ ಬಾಣಲಿ ಇಟ್ಟು 1 ಟೀ ಸ್ಪೂನ್ ಕರಿಮೆಣಸು, 4 ಏಲಕ್ಕಿ, 5 ಲವಂಗ, 1 ಬಿರಿಯಾನಿ ಎಲೆ, 1 ಟೀ ಸ್ಪೂನ್ ಜೀರಿಗೆ, 1 ಟೀ ಸ್ಪೂನ್ ಸೋಂಪು, ಅನಾನಸ್ ಹೂ 1, ಚಕ್ಕೆ ಅರ್ಧ ಇಂಚು, 1 ಟೀ ಸ್ಪೂನ್ ದನಿಯಾ ಹಾಕಿ ಎಲ್ಲವನ್ನು ಲೋ ಫ್ಲೇಮ್ ನಲ್ಲಿ ಫ್ರೈ ಮಾಡಿಕೊಳ್ಳಬೇಕು. ಇದನ್ನು ತಣ್ಣಗಾಗಲು 5 ನಿಮಿಷ ಬಿಡಬೇಕು.
ರೋಸ್ಟ್ ಮಾಡಿರುವ ಮಸಾಲೆಗಳನ್ನು ಮಿಕ್ಸಿ ಜಾರಿಗೆ ಹಾಕಿ, 7-8 ಬೆಳ್ಳುಳ್ಳಿ ಎಸಳು, ಶುಂಠಿ ಅರ್ಧ ಇಂಚು ಹಾಕಿ ಎಲ್ಲವನ್ನೂ ಪೇಸ್ಟ್ ಮಾಡಿಕೊಳ್ಳಬೇಕು.
ಹಲಸಿನಕಾಯಿ ಪೀಸ್ ಗಳನ್ನು ಕಟ್ ಮಾಡಿದ ನಂತರ ಮಜ್ಜಿಗೆಯಲ್ಲಿ ನೆನೆಸಿಟ್ಟರೆ ಸಾಫ್ಟ್ ಆಗುತ್ತದೆ. ಸ್ಟೌವ್ ಮೇಲೆ ಬಾಣಲಿ ಇಟ್ಟು 3 ಟೀ ಸ್ಪೂನ್ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಹಲಸಿನಕಾಯಿ ಪೀಸ್ ಗಳನ್ನು ಹಾಕಿ ಸ್ವಲ್ಪ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಫ್ರೈ ಮಾಡಿ ತೆಗಿದಿಟ್ಟುಕೊಳ್ಳಬೇಕು.
ಬಿರಿಯಾನಿಗೆ ಆಗುವ ಅಗಲವಾದ ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು, ಇದಕ್ಕೆ 5 ಟೀ ಸ್ಪೂನ್ ಎಣ್ಣೆ ಹಾಕಬೇಕು. 2 ಏಲಕ್ಕಿ, 1 ಟೀ ಸ್ಪೂನ್ ಜೀರಿಗೆ, ಚಕ್ಕೆ-ಲವಂಗ ಸ್ವಲ್ಪ ಹಾಕಿ ಫ್ರೈ ಮಾಡಬೇಕು. ನಂತರ ಇದಕ್ಕೆ 3 ಸಣ್ಣದಾಗಿ ಉದ್ದಕ್ಕೆ ಹಚ್ಚಿರುವ ಈರುಳ್ಳಿ, 4 ಉದ್ದಕ್ಕೆ ಕಟ್ ಮಾಡಿರುವ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಬೇಕು.
ಈರುಳ್ಳಿ ಹಸಿವಾಸನೆ ಹೋಗಿ ಮೆತ್ತಗೆ ಬೆಂದ ಮೇಲೆ 1 ಸಣ್ಣದಾಗಿ ಹಚ್ಚಿರುವ ಟೊಮೆಟೋ, ಕೊತ್ತಂಬರಿಸೊಪ್ಪು ಸ್ವಲ್ಪ, ಪುದೀನಾ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, 1 ಟೀ ಸ್ಪೂನ್ ಅಚ್ಚಖಾರದಪುಡಿ ಹಾಕಿ ಎಣ್ಣೆ ಬಿಡುವವರೆಗೂ ಬೇಯಿಸಿಕೊಳ್ಳಬೇಕು. ನಂತರ ಇದಕ್ಕೆ ಫ್ರೈ ಮಾಡಿದ್ದ ಹಲಸಿನಕಾಯಿಯನ್ನು ಹಾಕಿ ಅರ್ಧ ಕಪ್ ಗಟ್ಟಿಯಾದ ಮೊಸರು, ಕಾಲು ಕಪ್ ಹಾಲು, ಅರ್ಧ ನಿಂಬೆಹಣ್ಣಿನ ರಸ, ಸ್ವಲ್ಪ ನೀರು ಹಾಕಿ ಕೆಲ ಕಾಲ ಬೇಯಿಸಿಕೊಳ್ಳಬೇಕು.
ನಂತರ ಇದಕ್ಕೆ 1 ಗಂಟೆ ಕಾಲ ನೆನೆಸಿದ್ದ 2 ಕಪ್ ಬಾಸುಮತಿ ರೈಸ್ ಹಾಕಿ ಒಂದು ಬಾರಿ ಮಿಕ್ಸ್ ಮಾಡಿ, 4 ಗ್ಲಾಸ್ ನೀರಾಕಿ ತಟ್ಟೆ ಮುಚ್ಚಿ ಬೇಯಿಸಿಕೊಳ್ಳಬೇಕು. ಬಿರಿಯಾನಿ 80% ಬೆಂದ ಮೇಲೆ ಸ್ಟೌವ್ ಸ್ಲಿಮ್ ನಲ್ಲಿ ಇಟ್ಟು ಬಿರಿಯಾನಿ ರೈಸ್ ಬೇಯಲು ಬಿಡಬೇಕು. 5 ನಿಮಿಷದ ನಂತರ ಸ್ಟೌವ್ ಆಫ್ ಮಾಡಿ ಕೆಲ ಕಾಲ ಬಿಟ್ಟು ನಂತರ ತಟ್ಟೆ ತೆಗೆದು ಒಂದು ಬಾರಿ ಮಿಕ್ಸ್ ಮಾಡಿದರೆ ಹಲಸಿನಕಾಯಿ ಬಿರಿಯಾನಿ ಸವಿಯುವುದಕ್ಕೆ ರೆಡಿ ಆಗುತ್ತದೆ.