ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಯಾರ್ರೀ ಅದು, ಸಿದ್ದರಾಮೋತ್ಸವ ಅಲ್ಲ ಅದು, ನನ್ನ ಹುಟ್ಟುಹಬ್ಬ: ದಾವಣಗೆರೆ(DAVANAGERE)ಗೆ ಕೊಡುಗೆ ಕೊಡುವ ಬಗ್ಗೆ ಸಿಎಂ ಹೇಳಿದ್ದೇನು…?

On: June 5, 2023 9:30 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE: 05-06-2023

 

ದಾವಣಗೆರೆ(DAVANAGERE): ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮಯ್ಯ(SIDDARAMAI)ರ 75 ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ಸು ತಂದುಕೊಟ್ಟಿತ್ತು. ಸಿದ್ದರಾಮಯ್ಯ(SIDDARAMAI) ರ ಜನಪ್ರಿಯತೆ ಮತ್ತಷ್ಟು ಉತ್ತುಂಗಕ್ಕೆ ಏರಲು ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಜನಪ್ರವಾಹ ಕಂಡು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ(RAHUL GANDHI), ಕೆಪಿಸಿಸಿ (KPCC) ಅಧ್ಯಕ್ಷ ಡಿ. ಕೆ. ಶಿವಕುಮಾರ್ (D. K. SHIVAKUMAR) ಸೇರಿದಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಪುಳಕಿತರಾಗಿದ್ದರು. ಅಲ್ಲಿಂದಲೇ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿತ್ತು. ಡಿ. ಕೆ. ಶಿವಕುಮಾರ್ (D. K. SHIVAKUMAR) ಭಾಷಣ ಆರಂಭಿಸುತ್ತಿದ್ದಂತೆ ಸಿದ್ದರಾಮಯ್ಯ(SIDDARAMAI) ರ ಹೆಸರು ಹೇಳುತ್ತಿದ್ದಂತೆ ಜನರ ಕೇಕೆ, ಚಪ್ಪಾಳೆ, ಶಿಳ್ಳೆ ಹಾಗೂ ಕರತಾಡನಕ್ಕೆ ಬೆರಗಾಗಿದ್ದರು.

ಈ ಕಾರಣಕ್ಕೆ ದಾವಣಗೆರೆ (DAVANAGERE) ಪ್ರತಿಬಾರಿಯೂ ರಾಜಕಾರಣಿಗಳಿಗೆ ಅದೃಷ್ಟದ ತಾಣ ಎಂದೇ ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು ಮಹಾಸಂಗಮಕ್ಕೆ ದಾವಣಗೆರೆ(DAVANAGERE)ಗೆ ಬಂದು ಹೋದರೂ ಸಿದ್ದರಾಮೋತ್ಸವಕ್ಕೆ ಸೇರಿದಷ್ಟು ಜನರು ಸೇರಿರಲಿಲ್ಲ. ಹಾಗಾಗಿ, ಸಿದ್ದರಾಮಯ್ಯ(SIDDARAMAI)ರಿಗೆ ಮತ್ತೊಮ್ಮೆ ಅದೃಷ್ಟ ತಂದುಕೊಟ್ಟ ನೆಲ. ಅಹಿಂದ ಸಮಾವೇಶ ನಡೆಸಿದಾಗಲೂ ಸಿದ್ದರಾಮಯ್ಯ(SIDDARAMAI)ರ ಪರವಾಗಿ ಜನರ ಕೇಕೆ, ಶಿಳ್ಳೆ, ಸಿಕ್ಕ ಸ್ಪಂದನೆ ಹೆಚ್ಚೇ.

ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ(SIDDARAMAI)ರು ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ್ದರು. ಬೇರೆ ಜಿಲ್ಲೆಗಳಿಗೆ ಹೋಗಿ ಎಲ್ಲಿಯೂ ಸಭೆ ನಡೆಸಿಲ್ಲ. ಆದ್ರೆ, ದಾವಣಗೆರೆಗೆ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಆಗಮಿಸಿದ್ದರು. ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಇಲ್ಲಿ ನಡೆದದ್ದು ಸಿದ್ದರಾಮೋತ್ಸವ ಅಲ್ಲ, ನನ್ನ ಹುಟ್ಟುಹಬ್ಬ ಆಚರಣೆ. 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ನಡೆಸಲಾಗಿತ್ತು. ಕರ್ನಾಟಕದ ಮಧ್ಯಭಾಗ ದಾವಣಗೆರೆಯಲ್ಲಿ ಜನುಮದಿನದ ಆಚರಣೆ ನಡೆದಿತ್ತು. ಕಾಕತಾಳೀಯ ಎಂಬಂತೆ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದಾವಣಗೆರೆಗೆ ಬಂದಿದ್ದೇನೆ. ಬೇರೆ ಜಿಲ್ಲೆಗಳಿಗೆ ಹೋಗಿಲ್ಲ ಎಂದರು.

ದಾವಣಗೆರೆ ವಿಶೇಷ ಕೊಡುಗೆ ನೀಡುವ ಕುರಿತಂತೆ ಆಮೇಲೆ ಮಾತನಾಡುತ್ತೇನೆ, ಈಗಲೇ ಹೇಳಲು ಆಗದು ಎಂದು ಸಿದ್ದರಾಮಯ್ಯ(SIDDARAMAI)ರು ನಡೆದರೆ, ಪಕ್ಕದಲ್ಲಿದ್ದ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರು ಕೊಡುಗೆ ಸಿಕ್ಕೇ ಸಿಗುತ್ತೆ, ಕಾದು ನೋಡಿ. ಈಗಲೇ ಘೋಷಣೆ ಮಾಡಲು ಆಗದು ಎಂದು ಹೇಳಿದರು.

ಇದೇ ವೇಳೆ ಕೆಲ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕ ಬಸವಂತಪ್ಪ
ಮತ್ತಿತರರು ಇದ್ದರು.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment