SUDDIKSHANA KANNADA NEWS/ DAVANAGERE/ DATE_08-07_2025
ಬೆಂಗಳೂರು, ವೈಟ್‌ಫೀಲ್ಡ್: ಸಾಧಾರಣ ಗ್ಯಾಸ್ಟ್ರಿಕ್ ಅಂದುಕೊಂಡು ಹೊಟ್ಟೆ ನೋವನ್ನು ನಿರ್ಲಕ್ಷ್ಯ ಮಾಡಿದರೆ, ಅದು ದೊಡ್ಡ ಗಂಭೀರ ಸಮಸ್ಯೆಗೆ ದಾರಿ ಮಾಡಿಕೊಡಬಹುದು,” ಎಂಬ ಎಚ್ಚರಿಕೆಯನ್ನು ಮೆಡಿಕವರ್ ಆಸ್ಪತ್ರೆಯ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಶೇಕ್ ಜಾವೀದ್ ಹುಸೇನ್ ನೀಡಿದ್ದಾರೆ.
34 ವರ್ಷದ ರೋಗಿ ರಮೇಶ್ ಬಾಬು, ಹಲವಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಪ್ರಾರಂಭದಲ್ಲಿ ಅವರು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ಮನೆಮದ್ದು ಹಾಗೂ ಟ್ಯಾಬ್ಲೆಟ್ ಸೇವಿಸುತ್ತಿದ್ದರು. ಆದರೆ ನೋವು ನಿಲ್ಲದೇ ಮುಂದುವರಿದ ಹಿನ್ನಲೆಯಲ್ಲಿ ಅವರು ಮೆಡಿಕವರ್ ಆಸ್ಪತ್ರೆಯಲ್ಲಿ ಡಾ. ಶೇಕ್ ಜಾವೀದ್ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದಿದ್ದಾರೆ.
ವೈದ್ಯಕೀಯ ಪರಿಶೀಲನೆ ನಂತರ, ಲೋಕೇಶ್ ಅವರ ಹೃದಯದ ಸಮೀಪ 12 x 10 ಸೆಂ.ಮೀ ಗಾತ್ರದ ಪ್ಯಾಂಕ್ರಿಯಾಟಿಕ್ ಟ್ಯೂಮರ್ ಇರುವುದು ಪತ್ತೆಯಾಯಿತು. ಸಾಮಾನ್ಯವಾಗಿ ಟ್ಯೂಮರ್ ಗಾತ್ರ 2 ಸೆಂ.ಮೀ ಇರುತ್ತದೆ. ಆದರೆ ಈ ಪ್ರಕರಣದಲ್ಲಿ ಅದು ತುಂಬಾ ದೊಡ್ಡದಾಗಿದ್ದು, ತೀವ್ರವಾದ ನೋವಿಗೆ ಕಾರಣವಾಗಿತ್ತು.
ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ತಪಾಸಣೆಯ ನಂತರ, ತಕ್ಷಣವೇ ರೋಬೋಟಿಕ್ ಡಿಸ್ಟಲ್ ಪ್ಯಾಂಕ್ರಿಯಾಟೆಕ್ಟಮಿ ಶಸ್ತ್ರಚಿಕಿತ್ಸೆಗೆ ತೀರ್ಮಾನಿಸಲಾಯಿತು. ಸುಮಾರು 6 ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ಟ್ಯೂಮರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು.
“ಹೊಟ್ಟೆನೋವನ್ನು ನಿರ್ಲಕ್ಷ್ಯ ಮಾಡಬಾರದು. ಇದು ಕೆಲವೊಮ್ಮೆ ಜೀವಕ್ಕೆ ಅಪಾಯವಾಗುವಂತಹ ಗಂಭೀರ ಶಾರೀರಿಕ ಸಮಸ್ಯೆಗಳ ಸಂಕೇತವಾಗಿರಬಹುದು,” ಎಂದು ಡಾ. ಶೇಕ್ ಜಾವೀದ್ ಹುಸೇನ್ ಎಚ್ಚರಿಸಿದ್ದಾರೆ.