ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಥಿಯೋಪಿಯಾದಲ್ಲಿ ಭಾರೀ ಭೂಕುಸಿತ: 157 ಮಂದಿ ಮೃತ್ಯು

On: July 23, 2024 5:42 PM
Follow Us:
---Advertisement---

ಅಡಿಸ್ : ಭಾರೀ ಮಳೆಯಿಂದ ಹಾನಿಗೊಳಗಾದ ಇಥಿಯೋಪಿಯಾದ ಭಾಗದಲ್ಲಿ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ಈ ಅವಘಡದಲ್ಲಿ 157 ಮಂದಿ ಮೃತಪಟ್ಟಿದ್ದಾರೆ.

ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಸಾವನ್ನಪ್ಪಿದವರ ಪೈಕಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಕೂಡ ಸೇರಿದ್ದಾರೆ. ಮಣ್ಣಿನಡಿ ಸಿಲುಕಿದವನ್ನು ಹಲವರು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ತಡರಾತ್ರಿ ಈ ಭೂಕುಸಿತದಲ್ಲಿ 55 ಮಂದಿ ಸಾವನ್ನಪ್ಪಿದ್ದರು. ಇಂದು ಮೃತಪಟ್ಟವರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ಇನ್ನೂ ಮಣ್ಣಿನ ಅಡಿಯಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆಯಿದೆ. ಆದರೆ ಮಣ್ಣಿನಡಿ ಸಿಲುಕಿದವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ನಾಪತ್ತೆಯಾದವರ ಪತ್ತೆಗಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಇತರರನ್ನು ರಕ್ಷಿಸಲು ಪ್ರಯತ್ನಿಸುವಾಗ ಮಣ್ಣಿನಿಂದ ಆವೃತವಾದ ಗುಂಪಿನಲ್ಲಿ ಅನೇಕ ಜನರು ಪತ್ತೆಯಾಗಿಲ್ಲ. ನಾಪತ್ತೆಯಾದವರಿಗಾಗಿ ನಾವು ಇನ್ನೂ ಹುಡುಕಾಟ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪೊಲೀಸರ ಪ್ರಕಾರ ಒಂದು ಭೂಕುಸಿತ ಸಂಭವಿಸಿದ ಬಳಿಕ ಮತ್ತೊಂದು ಭೂಕುಸಿತವೂ ಸಂಭವಿಸಿದೆ.

Join WhatsApp

Join Now

Join Telegram

Join Now

Leave a Comment