SUDDIKSHANA KANNADA NEWS/ DAVANAGERE/DATE:18_08_2025
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿರುವ ಮುಸುಕುಧಾರಿ ಆರೋಪಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ಎಸ್ಐಟಿ ತನಿಖೆ ನಿಲ್ಲಿಸುವುದು ಸರ್ಕಾರವಲ್ಲ, ಎಸ್ ಐಟಿ ಮಾತ್ರ ಎಂದು
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾವು ಸತ್ಯ ಹೊರಗೆ ತಂದೇ ತರುತ್ತೇವೆ. ತನಿಖೆ ಮುಗಿದ ಬಳಿಕ ಸತ್ಯ ಹೊರ ಬರುತ್ತದೆ. ಅಲ್ಲಿಯವರೆಗೆ ಕಾಯೋಣ. ಬೇರೆ ಬೇರೆ ವ್ಯಾಖ್ಯಾನ ಮಾಡುವುದು ಬೇಡ ಎಂದು ಹೇಳಿದ್ದಾರೆ.
READ ALSO THIS STORY: ಧರ್ಮಸ್ಥಳ ಕೇಸ್ ಗೆ ಟ್ವಿಸ್ಟ್, ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು: ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿ!
ಮುಸುಕುಧಾರಿ ತೋರಿಸಿದ ಜಾಗದಲ್ಲಿ ನಾವು ಅಗೆಯುತ್ತಿದ್ದೇವೆ. ಇನ್ನೂ ಕೆಲ ಜಾಗ ತೋರಿಸಿದರೆ ಅಲ್ಲಿಯೂ ಅಗೆಯುತ್ತೇವೆ. ಇನ್ನು ಎಸ್ ಐ ಟಿ ಮಧ್ಯಂತರ ವರದಿ ಬಂದಿಲ್ಲ. ಅಪರಿಚಿತ ತೋರಿಸಿದ ಜಾಗಗಳಲ್ಲಿ ಅಗೆಯಲಾಗಿದೆ. ಇನ್ನು
ಎಷ್ಟು ಕಡೆ ಅಗೆಯಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ. ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಸರ್ಕಾರ ನಿರ್ಧಾರ ಮಾಡಲ್ಲ. ಎಸ್ ಐ ಟಿ ಮಾತ್ರ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣವನ್ನು ಇಡೀ ದೇಶವೇ ಗಮನಿಸುತ್ತಿದೆ. ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಹೋಗಿ ಓರ್ವ ದೂರು ಕೊಟ್ಟಿದ್ದ. ನನಗೆ ನಿರಂತರ ಜೀವ ಬೆದರಿಕೆಯೊಡ್ಡಲಾಗುತ್ತಿದೆ. ನಾನು ಶವಗಳನ್ನು ಹೂತು
ಹಾಕಿದ್ದೇನೆ ಎಂದು ದೂರು ನೀಡಿದ್ದ. ಈ ಬಗ್ಗೆ ತನಿಖೆ ನಡೆಸುವಂತೆ ಅಪರಿಚಿತ ಕೋರಿದ್ದ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಕೋರಿದ್ದ. ಆಗ ಪೊಲೀಸರು ಜಡ್ಜ್ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು
ತನಿಖೆಗೆ ಸೂಚಿಸಿದ್ದರು. ಆ ಬಳಿಕ ನಾನು ಮತ್ತು ಸಿಎಂ ಚರ್ಚಿಸಿ ಎಸ್ ಐಟಿ ರಚನೆ ಮಾಡಿದ್ದೆವು. ಉತ್ಖನನ ನಡೆಸಿದ ಪೈಕಿ 2 ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆ. ಕೆಲವು ಕಡೆ ಮೂಳೆಗಳು ಸಿಕ್ಕಿವೆ. ಎಫ್ ಎಸ್ ಎಲ್ ರಿಪೋರ್ಟ್ ಬಂದ ಬಳಿಕ ಮತ್ತಷ್ಟು ವೇಗವಾಗಿ ತನಿಖೆ ನಡೆಯುತ್ತದೆ ಎಂದು ತಿಳಿಸಿದರು.
ಮೂಳೆ, ಬುರುಡೆ ಪತ್ತೆಯಾಗಿದ್ದು, ಎಫ್ ಎಸ್ ಎಲ್ ವರದಿಗೆ ಕಳುಹಿಸಲಾಗಿದೆ. ಇನ್ನೂ ಸಂಪೂರ್ಣ ತನಿಖೆ ಮುಗಿದಿಲ್ಲ. ಎಸ್ ಐಟಿ ರಚಿಸುವಂತೆ ಮಹಿಳಾ ಆಯೋಗವು ಪತ್ರ ಬರೆದಿತ್ತು. ಅತ್ಯಾಚಾರ ಹಾಗೂ ನಿಗೂಢ ನಾಪತ್ತೆ ಪ್ರಕರಣಗಳ
ಕುರಿತಂತೆ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಚರ್ಚಿಸಿದ್ದೇವೆ. ಸತ್ಯ ಹೊರಬರುವವರೆಗೆ ಕಾಯೋಣ ಎಂದು ಪರಮೇಶ್ವರ್ ಹೇಳಿದರು.