SUDDIKSHANA KANNADA NEWS/ DAVANAGERE/DATE:02_09_2025
ದಾವಣಗೆರೆ: ಹಿಂದೂಗಳನ್ನು ಒದ್ದು ಒಳಗೆ ಹಾಕಲು ಇದೇನೂ ಪಾಕಿಸ್ತಾನನಾ? ಬಾಂಗ್ಲಾದೇಶನಾ? ತಾಲಿಬಾನ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ದುರಂಹಕಾರ ಬಿಡಬೇಕು. ಒದ್ದು ಒಳಗೆ ಹಾಕಲು ಪ್ರಾಣಿಗಳು ಪ್ರತಿಭಟಿಸುತ್ತವೆ. ನಾಯಿಗಳನ್ನೂ ಒದ್ದು ಒಳಗೆ ಹಾಕಲು ಆಗಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಬೆಂಕಿಯುಗುಳಿದ್ದಾರೆ.
Read also this story: ಮಸೀದಿ ಪಕ್ಕದಲ್ಲೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ, ತಣ್ಣಗಿರದಿದ್ರೆ ಒಳಗೆ ಹಾಕಿಸ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗರಂ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹಿಂದೂಗಳನ್ನು ಬದ್ಧ ವೈರಿಗಳಂತೆ ಕಾಣುತ್ತಿದ್ದಾರೆ. ಮುಸ್ಲಿಂ ಹಬ್ಬದ ದಿನವೇ ಗಣಪತಿ ಮಾಡಬೇಕಾ? ಮುಸ್ಲಿಂರು ಇರುವ ಜಾಗದಲ್ಲಿಯೇ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟಬೇಕಾ? ಅನ್ನೋ ರೀತಿಯಲ್ಲಿ ಮಾತನಾಡುವ ಮೂಲಕ ಹಿಂದೂ ಹಬ್ಬಗಳಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಒದ್ದು ಒಳಗೆ ಹಾಕಿಸ್ತೇನೆ ಎಂದು ಹೇಳುವ ಜಿಲ್ಲಾ ಸಚಿವರ ಕೈಯಲ್ಲಿ ಕೋಲು ಇರುತ್ತಾ. ಇವರು ಹೇಳಿದಂಗೆ ಪೊಲೀಸರು ಕೇಳ್ತಾರಾ? ಪೊಲೀಸರು ಸಚಿವರ ಅಣತಿಯಂತೆ ಕೆಲಸ ಮಾಡುತ್ತಾರಾ? ಅವರ ಮನೆಯಾಳುಗಳಾಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಶಾಂತಿ ಕಾಪಾಡಲು ಸಚಿವರು ಏನಾದರೂ ಹೇಳಲಿ. ಬಿಜೆಪಿಯವರದ್ದಾದರೆ ರಾಜಕೀಯ ಅಂತೆ. ಇವ್ರು ಮಾಡುವುದು ಏನು ಹಾಗಿದ್ದರೆ. ಅಲ್ಪಸಂಖ್ಯಾತರ ಪರವಾಗಿ ಮಾತನಾಡುವುದು ರಾಜಕೀಯ ಅಲ್ಲವಾ ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ: ಶಾಮನೂರು ಮನೆತನದವರ ಮನೆ ಬಾಗಿಲು ಕಾಯುವ “ಪೊಮೆರೇನಿಯನ್ ನಾಯಿ” ದಾವಣಗೆರೆ ಎಸ್ಪಿ: ಶಾಸಕ ಬಿ. ಪಿ. ಹರೀಶ್ ಕೆಂಡಾಮಂಡಲ!
ಹಿಂದೂಗಳು ಮಾಡಿದರೆ ರಾಜಕೀಯ. ಒದ್ದು ಪಾಕಿಸ್ತಾನದಲ್ಲಿ ಹಿಂದೂಗಳು ಅನುಭವಿಸುತ್ತಿರುವ ನೋವು ಅಲ್ಲಿ ಹುಟ್ಟಿದ್ದರೆ ಮಲ್ಲಿಕಾರ್ಜುನ್ ಅವರಿಗೆ ಗೊತ್ತಾಗುತ್ತಿತ್ತು. ಭಾರತದಲ್ಲಿ ಶಾಂತಿ ಇದೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಿದ್ದೇವೆ. ನಮ್ಮ ಹಬ್ಬ ಶಾಂತಿಯುತವಾಗಿ ಮಾಡುತ್ತೇವೆ. ಮಲ್ಲಿಕಾರ್ಜುನ್ ಅವರು ಅಧಿಕಾರದ ಭ್ರಷ್ಟಾಚಾರದ ಹಣದ ಅಮಲಿನಲ್ಲಿ ತೇಲುತ್ತಿದ್ದಾರೆ. ಅಧಿಕಾರದ ಮದ ಮಲ್ಲಿಕಾರ್ಜುನ್ ಅವರಿಗೆ ಒಳ್ಳೆಯದಲ್ಲ ಎಂದು ಬಿ. ಪಿ. ಹರೀಶ್ ವಾಗ್ದಾಳಿ ನಡೆಸಿದರು.