SUDDIKSHANA KANNADA NEWS/ DAVANAGERE/ DATE-20-05-2025
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮೀ ವಿದೇಶದಲ್ಲಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಿಂದ ಆಚರಿಸಿದರು. ಕೈಕೈ ಹಿಡಿದು ಡ್ಯಾನ್ಸ್ ಮಾಡಿ ಖುಷಿ ಪಟ್ಟರು. ಕೆಲ ವರ್ಷಗಳ ಬಳಿಕ ದರ್ಶನ್ ಮತ್ತು ವಿಜಯಲಕ್ಷ್ಮೀ ಒಟ್ಟಾಗಿ ತುಂಬಾನೇ ಖುಷಿಯಿಂದ ಸೆಲಬ್ರೆಟ್ ಮಾಡಿದರು. ಇದನ್ನು ನೋಡಿದ ಪವಿತ್ರಾ ಗೌಡ ಕಣ್ಣು ಕೆಂಪಾಗಿಸಿತಲ್ಲದೇ, ಕೋರ್ಟ್ ಗೆ ಬಿಳಿ ಸೀರೆ ಉಟ್ಟು ಬಂದು ತುಂಬಾನೇ ಕುತೂಹಲ ಮೂಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಬಿಳಿ ಸೀರೆ ಉಟ್ಟು ಬಂದಿದ್ದಲ್ಲದೇ, ಮುಖದಲ್ಲಿ ನಗು ಇರಲಿಲ್ಲ. ನೋವು ಕಾಡುತಿತ್ತು.
ಸ್ಯಾಂಡಲ್ವುಡ್ ನಟಿ, ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಅವರು ಕೋರ್ಟ್ ಗೆ ದರ್ಶನ್ ಬರುವುದಕ್ಕಿಂತ ಮುಂಚೆ ಹಾಜರಾಗಿದ್ದರು. ನ್ಯಾಯಾಲಯದ ಮುಂದೆ ಹಾಜರಾಗಲು 17 ಆರೋಪಿಗಳಿಗೂ ನೋಟಿಸ್ ನೀಡಿದ ಬೆನ್ನಲ್ಲಿಯೇ ನಟಿ ಕೋರ್ಟ್ಗೆ ಬಂದಿದ್ದಾರೆ.
ಪವಿತ್ರಾ ಗೌಡ ಬಿಳುಪಿನ ಸೀರೆ ಹಾಗೂ ಅಚ್ಚ ಬಿಳುಪಿನ ಬ್ಲೌಸ್ ಧರಿಸಿಕೊಂಡು ಬಂದಿದ್ದಲ್ಲದೇ, ಅಚ್ಚರಿಗೂ ಕಾರಣವಾಯಿತು. ನಟಿ ಕೂದಲು ಕೂಡಾ ಕಟ್ಟಿರಲಿಲ್ಲ. ಕೂದಲು ಬಿಟ್ಟುಕೊಂಡು ಬಿಳಿಸೀರೆ ತೊಟ್ಟು ಗಂಡನನ್ನು ಕಳೆದುಕೊಂಡ ವಿಧವೆ ಯಾವ ರೀತಿಯಲ್ಲಿ ಇರುತ್ತಾರೆಯೋ ಆ ರೀತಿ ಬಂದಿದ್ದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.
ಯಾವಾಗಲೂ ಕಲರ್ ಫುಲ್ ಆಗಿರುತ್ತಿದ್ದ, ನಗುನಗುತ್ತಾ ರೀಲ್ಸ್, ಫೋಟೋ, ಮೇಕಪ್ ಮಾಡಿಕೊಂಡು ಮಿರಮಿರ ಮಿಂಚುತ್ತಿದ್ದ ಪವಿತ್ರಾ ಗೌಡ ಈ ಸೀರೆಯಲ್ಲಿ ಬಂದಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.
ಇನ್ನೊಂದು ವಿಚಾರ ಎಂದರೆ ನಟಿ ಈ ಹಿಂದೆ ಬರುವಾಗ ಕೂದಲು ಪೋನಿಟೇಲ್ ಮಾಡಿದ್ದರು. ಇದೀಗ ನಟಿ ಈ ಬಾರಿ ಬರುವಾಗ ಬಿಳಿ ಸೀರೆ ಉಟ್ಟು ಕೂದಲು ಬಿಚ್ಚಿಟ್ಟು ಬಂದಿದ್ದು ಉದ್ದೇಶಪೂರ್ವಕ ನಡೆಯೇ? ಹಿಡನ್ ಮೆಸೇಜ್ ಕೊಡೋಕೆ ಉದ್ದೇಶಿಸಿದ್ರಾ ಪವಿತ್ರಾ ಗೌಡ? ಎಂದು ನೆರೆದಿದ್ದವರು ಮಾತನಾಡಿಕೊಳ್ಳುತ್ತಿದ್ದರು.
ಮೇ 20ರಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಪೇಜ್ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆನೀನಿನ್ನು ನನ್ನ ಪಾಲಿಗಿಲ್ಲ ಎನ್ನುವ ಮೆಸೇಜ್ ಕೊಟ್ಟರಾ ಪವಿತ್ರಾ ಗೌಡ? ಈ ಫೊಟೋ ನೋಡಿದರೆ ಅದೇ ಭಾವನೆ ಮೂಡಿಸುವಂತೆ ಇದೆ. ಕಂಪ್ಲೀಟ್ ಬಿಳಿ ಸೀರೆ ಉಟ್ಟು ಬಂದ ಉದ್ದೇಶ ಏನು? ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧಕ್ಕೆ ಅಂತ್ಯ ಹಾಡಲಾಯಿತಾ? ಇನ್ನು ಮುಂದೆ ನನ್ನ ತಂಟೆಗೆ ಬರಬೇಡ ಎಂದು ದರ್ಶನ್ ಗೆ ಎಚ್ಚರಿಕೆ ನೀಡಿದರಾ? ಪ್ರಿಯತಮನ ನೆನಪಿನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರಾ ಎಂದು ವಿಶ್ಲೇಷಿಸಲಾಗುತ್ತಿದೆ.