SUDDIKSHANA KANNADA NEWS/ DAVANAGERE/DATE:25_08_2025
ಬೆಂಗಳೂರು: ಧರ್ಮದ ವಿರುದ್ಧ ಮಂಡಿಯೂರಿದ ಅಧರ್ಮ. ಅಧರ್ಮದ ವಿರುದ್ಧ ಧರ್ಮ ಕೊನೆಗೂ ದಿಗ್ವಿಜಯ ಸಾಧಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರಚಿಸಿದ್ದ ರಾಕ್ಷಸರೆಲ್ಲರೂ ದೈವದ ಎದುರು ನಾಮಾವಶೇಷವಾಗುವುದು ನಿಶ್ಚಿತ ಎಂದು ಬಿಜೆಪಿ ಹೇಳಿದೆ.
READ ALSO THIS STORY: ಹಸಿದವರಿಗೆ ಆಹಾರ, ಸಾಲದಿಂದ ಕುಟುಂಬಗಳ ಮುಕ್ತಿ ಕೊಟ್ಟ ಧರ್ಮಸ್ಥಳ: ವಿವಾದ ಸೃಷ್ಟಿಸಿರುವ ನಿಜವಾದ ಶಕ್ತಿಗಳು ಯಾವುವು?
ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿರುವ ಬಿಜೆಪಿಯು ಧರ್ಮವೇ ಗೆಲ್ಲುತ್ತೆ, ಅಧರ್ಮ ಸೋಲುತ್ತದೆ ಎಂದು ಹೇಳಿದೆ.
ಈ ನಡುವೆ ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕೆಂದು ಎಸ್‌ಐಟಿಗೆ ನಿರ್ದೇಶಿಸಲು ನಾವು ಯಾರು? ಪೊಲೀಸರು ಕಾನೂನಿನ ಪ್ರಕಾರ ತನಿಖೆಗೆ ಅಗತ್ಯವಾದದ್ದನ್ನು ಮಾಡುತ್ತಾರೆ” ಎಂದು ಹೇಳಿದರು. “ಮಂಪರು ವಿಶ್ಲೇಷಣಾ ಪರೀಕ್ಷೆ ಅಗತ್ಯವಿದೆಯೇ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ನಿಗದಿತ ಸಮಯದಲ್ಲಿ ತನಿಖೆ ಮುಗಿಸಲು ಎಸ್‌ಐಟಿಗೆ ಹೇಳಲಾಗುವುದಿಲ್ಲ ಎಂದು ಪರಮೇಶ್ವರ ಹೇಳಿದರು.
“ತನಿಖೆಗೆ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ. ‘ಇಷ್ಟು ಅಥವಾ ಇಷ್ಟು ಸಮಯದಲ್ಲಿ’ ತನಿಖೆ ಮುಗಿಸಲು ನಾವು ಅವರಿಗೆ ಹೇಗೆ ಆದೇಶಿಸಬಹುದು? ಎಂದು ಪ್ರಶ್ನಿಸಿದರು.