Home ದಾವಣಗೆರೆ ಇರಾನ್‌ನಲ್ಲಿ ಮರ್ಯಾದೆ ಹತ್ಯೆ ದುರಂತ: ಪ್ರೇಮಿಯಿಂದ ಗರ್ಭಿಣಿಯಾಗಿದ್ದ 19 ವರ್ಷದ ಯುವತಿಗೆ ವಿಷ ನೀಡಿ, ಹಲ್ಲೆ ನಡೆಸಿ ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಹೆತ್ತವರು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಇರಾನ್‌ನಲ್ಲಿ ಮರ್ಯಾದೆ ಹತ್ಯೆ ದುರಂತ: ಪ್ರೇಮಿಯಿಂದ ಗರ್ಭಿಣಿಯಾಗಿದ್ದ 19 ವರ್ಷದ ಯುವತಿಗೆ ವಿಷ ನೀಡಿ, ಹಲ್ಲೆ ನಡೆಸಿ ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಹೆತ್ತವರು!

Share
ಇರಾನ್‌
Share

ಸನಂದಜ್ (ಇರಾನ್): ಇರಾನ್‌ನಲ್ಲಿ ‘ಮರ್ಯಾದೆ ಹತ್ಯೆ’ಯ ಮತ್ತೊಂದು ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಪ್ರೇಮಿಯಿಂದ ಎರಡು ತಿಂಗಳ ಗರ್ಭಿಣಿಯಾಗಿದ್ದ 19 ವರ್ಷದ ಹೆಲಿಯಾ ಫತ್ತಾಹಿ ಎಂಬ ಯುವತಿಯನ್ನು ಸ್ವತಃ ಆಕೆಯ ಪೋಷಕರೇ ವಿಷ ನೀಡಿ ಹಲ್ಲೆ ಹಾಗೂ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಇರಾನ್‌ನ ಸನಂದಜ್ ನಗರದಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಯುವತಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಆಕ್ರೋಶಗೊಂಡ ಪೋಷಕರು ವೋರಿಯಾ ಫತ್ತಾಹ ಮತ್ತು ಲೈಲಾ ವೀಸ್, ತಮ್ಮ ಮಗಳ ಮೇಲೆಯೇ ಹಲ್ಲೆ ನಡೆಸಿ ಸುಮಾರು 30 ಅಪಸ್ಮಾರದ ಮಾತ್ರೆಗಳನ್ನು (anticonvulsant pills) ಬಲವಂತವಾಗಿ ನುಂಗಿಸಿದ್ದಾರೆ.

ಮಾತ್ರೆ ನುಂಗಿದರೂ ಮಗಳು ಬದುಕಿರುವುದನ್ನು ಕಂಡು, ಕೊನೆಗೆ ದಿಂಬಿನಿಂದ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ವಿಚಾರಣೆ ವೇಳೆ ಪೋಷಕರು ತಾವು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಯುವತಿ ಯುವಕನೊಂದಿಗೆ ಸಂಬಂಧ ಹೊಂದಿದ್ದು ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯವನ್ನು ಕುಟುಂಬದ ಬಳಿ ಬಹಿರಂಗಪಡಿಸಿದ್ದಳು. ಇದರಿಂದ ಆಕ್ರೋಶಗೊಂಡ ಪೋಷಕರು ಮೊದಲು ನ್ಯಾಯಾಲಯಕ್ಕೆ ದೂರು ನೀಡಲು ಹೋಗಿ, ಬಳಿಕ ಮನೆಗೆ ಬಂದು ಈ ಕೃತ್ಯ ಎಸಗಿದ್ದಾರೆ.

ಮಹಿಳೆಯರ ಸುರಕ್ಷತೆಯ ಪ್ರಶ್ನೆ: ಇರಾನ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಕಠಿಣ ಕಾನೂನುಗಳಿಲ್ಲದಿರುವುದು ಹಾಗೂ ಮರ್ಯಾದೆ ಹತ್ಯೆ ಮಾಡುವವರಿಗೆ ಸೌಮ್ಯ ಶಿಕ್ಷೆ ನೀಡುವುದು ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಮಾನವ ಹಕ್ಕುಗಳ ಸಂಘಟನೆಗಳಾದ ಹೆಂಗಾವ್ ಮತ್ತು ಹಾನಾ ತೀವ್ರ ಕಳವಳ ವ್ಯಕ್ತಪಡಿಸಿವೆ.

ಇರಾನ್‌ನಲ್ಲಿ ಹೆಚ್ಚುತ್ತಿರುವ ದೌರ್ಜನ್ಯಗಳು: ಕೇವಲ ಒಂದು ವಾರದಲ್ಲಿ ಇರಾನ್‌ನಲ್ಲಿ ಮೂವರು ಯುವತಿಯರು ಹತ್ಯೆಯಾಗಿದ್ದಾರೆ. ಇರಾನ್‌ನಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ನಿರಂತರ ದಬ್ಬಾಳಿಕೆ ಮುಂದುವರಿದಿದೆ.

Share

Recent Posts

Recent Comments

No comments to show.
Related Articles