ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ತೈಲ ನಿಗಮ ನಿಯಮಿತ (IOCL) ಸಿಹಿ ಸುದ್ದಿ ನೀಡಿದೆ. ಹರಿಯಾಣದ ಪಾಣಿಪತ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಹಾಗೂ ದೆಹಲಿ ಘಟಕಗಳಲ್ಲಿ ಖಾಲಿ ಇರುವ ಒಟ್ಟು 637 ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್/ಅಟೆಂಡೆಂಟ್ ಆಪರೇಟರ್): 272 ಹುದ್ದೆಗಳು
ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್): 321 ಹುದ್ದೆಗಳು
ಡೇಟಾ ಎಂಟ್ರಿ ಆಪರೇಟರ್ ಹಾಗೂ ಇತರ ಹುದ್ದೆಗಳು: 44 ಹುದ್ದೆಗಳು
ವಿದ್ಯಾರ್ಹತೆ:
ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ 10ನೇ ತರಗತಿ ಜೊತೆಗೆ ಐಟಿಐ (ITI), ಡಿಪ್ಲೊಮಾ ಅಥವಾ ಪದವಿ (B.Sc/B.A/B.Com) ಹೊಂದಿರಬೇಕು. 12ನೇ ತರಗತಿ ಪಾಸಾದವರು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
31-01-2026 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷಗಳು. (SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ).
ಆಯ್ಕೆ ವಿಧಾನ:
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ, ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಮೊದಲು ಅಧಿಕೃತ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಲ್ಲಿ (NATS/NAPS) ನೋಂದಾಯಿಸಿಕೊಳ್ಳಬೇಕು. ನಂತರ ಐಒಸಿಎಲ್ ವೆಬ್‌ಸೈಟ್‌ನಲ್ಲಿ ನೀಡಲಾದ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 07-02-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2026 (ಸಂಜೆ 5 ಗಂಟೆಯವರೆಗೆ)
ದಾಖಲೆ ಪರಿಶೀಲನೆ ಪಟ್ಟಿ ಪ್ರಕಟಣೆ: 26-02-2026
Official Website: iocl.com





Leave a comment