SUDDIKSHANA KANNADA NEWS/ DAVANAGERE/DATE:28_08_2025
ದಾವಣಗೆರೆ: ಎಲ್ಲೆಡೆ ಗಣಪ ಹಬ್ಬದ ಸಂಭ್ರಮ ಮನೆ ಮಾಡಿದೆ. ಗಲ್ಲಿ, ಗಲ್ಲಿಯಲ್ಲೂ, ಓಣಿ ಓಣಿಯಲ್ಲಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪುಣಾಣಿಗಳಿಂದ ಹಿಡಿದು ಯುವಕರು, ಹಿರಿಯರು ಗಣೇಶ ಮೂರ್ತಿ ಕೂರಿಸಿದ್ದಾರೆ. ಕೆಲವರು ಈಗಾಗಲೇ ಗಣೇಶ ಮೂರ್ತಿ ವಿಸರ್ಜಿಸಿದ್ದರೆ ಮತ್ತೆ ಕೆಲವೆಡೆ ಗಣೇಶ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.
READ ALSO THIS STORY: ಮುಖವಾಡ ಧರಿಸಿದ ವ್ಯಕ್ತಿ, ತಲೆಬುರುಡೆ, ಸಾಮೂಹಿಕ ಸಮಾಧಿ, ಸಂಚು: ಧರ್ಮಸ್ಥಳದ ಪಿತೂರಿ ಬಗ್ಗೆ ಎಲ್ಲೂ ಇಲ್ಲದ ಇಂಟ್ರೆಸ್ಟಿಂಗ್ ಮಾಹಿತಿ!
ಆದ್ರೆ, ದಾವಣಗೆರೆ ತಾಲೂಕಿನ ಮಳಲ್ಕೆರೆ ಗ್ರಾಮದವರ ಸೌಹಾರ್ದತೆಗೆ ಸಾಕ್ಷಿ ಇದು. ಇಡೀ ಗ್ರಾಮಕ್ಕೆ ಏಕತೆಯ ಸೌಹಾರ್ದ ಎಂಬ ಧ್ಯೇಯ ವಾಕ್ಯದಡಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಯಾವುದೇ ಡಿಜೆ ಅಬ್ಬರ ಇಲ್ಲದೇ ಸರಳ ರೀತಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿ ಇಡೀ ಗ್ರಾಮಸ್ಥರು ಮಾದರಿಯಾಗಿದ್ದಾರೆ. ಗ್ರಾಮದ ಹಿರಿಯರು, ಯುವಕರು, ಮಹಿಳೆಯರಿಗೆ ಸಿಹಿಪ್ರಸಾದ ಹಂಚಿ ಶಾಂತಿ ಒಗ್ಗಟ್ಟು ಏಕತೆ ಸಾರಿದ್ದಾರೆ.
ಸಿಹಿ ಪ್ರಸಾದ ವ್ಯವಸ್ಥೆ ಮಾಡಿದ ಅಪರ ಜಿಲ್ಲಾಧಿಕಾರಿ ವಿಜಯ ಕುಮಾರ್ ಪುತ್ರ ವಿನಯ್ ಕುಮಾರ್ ದಂಪತಿಗಳಿಗೆ, ವಿಗ್ರಹ ದಾನಿ ಮಲ್ಲೇಶ್ ರವರಿಗೆ ಗ್ರಾಮದ ಹಿರಿಯರು ಗೌರವಿಸಿದರು.
ಐದು ದಿನಗಳ ಕಾಲ ವಿವಿಧ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮದ ಆಂಜನೇಯ ದೇವಸ್ಥಾನ ಪಕ್ಕದ ರಂಗಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಎಸ್. ಎಂ. ಗೌಡ್ರು,
ಮುರುಗೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್ ಹೆಚ್ ಪ್ರಕಾಶ್, ಆಂಜನೇಯ ದೇವಸ್ಥಾನದ ಧರ್ಮದರ್ಶಿಗಳು ಆಂಜನೇಯ ಸಮುದಾಯ ಭವನದ ಕಾರ್ಯದರ್ಶಿಗಳಾದ ಟಿಜಿ ಉಮಾಪತಿ, ಮಳಲ್ಕೆರೆ ಬಿಎಸ್ಎನ್ ಎಲ್ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ಕುಮಾರ್, ಶಿಕ್ಷಕ ಗುರುಮೂರ್ತಿ, ಹಿರಿಯ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪುರಂದರ ಲೋಕಿಕೆರೆ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ ಮಲ್ಲೇಶ್, ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಸೇರಿದಂತೆ
ಗ್ರಾಮದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು ಈ ಒಂದು ಏಕತೆಯ ಸೌಹಾರ್ದ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.