SUDDIKSHANA KANNADA NEWS/ DAVANAGERE/ DATE:10-04-2023
ದಾವಣಗೆರೆ: ದಾವಣಗೆರೆ (DAVANAGERE) ಉತ್ತರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ (INDIPENDENT)ಅಭ್ಯರ್ಥಿಯಾಗಿ ಬ್ರಾಹ್ಮಣ ಸಮುದಾಯದ ಎಂ. ಜಿ. ಶ್ರೀಕಾಂತ್ (M. G. SHRIKANTH) ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದಲ್ಲಿ ಸುಮಾರು ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ, ಪರಿಸರ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಪಿ. ಬಿ. ರಸ್ತೆ ಅಗಲೀಕರಣ, ಗಿಡ ನೆಡುವುದು, ಕಸ ಸಮಸ್ಯೆ, ಸುಗಮ ಸಂಚಾರ, ರಕ್ತದಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ನೋಟಾ ಮತ ಹಾಕುವವರು ದಯವಿಟ್ಟು ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ನನ್ನ ಪ್ರೊಫೈಲ್ ಸಾಮಾಜಿಕ ಜಾಲತಾಣಗಳಲ್ಲಿ ಸಿಗಲಿದೆ. ಎಲ್ಲಾ ವರ್ಗದ ಜನರು ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ಆಸೆ, ಆಮೀಷಗಳಿಗೆ ಒಳಗಾಗದೇ ನಿಮ್ಮ ಅಮೂಲ್ಯ ಮತ ಮಾರಾಟ ಮಾಡಬೇಡಿ. ಜನರ ಕಷ್ಟಗಳಿಗೆ, ಸರ್ಕಾರದ ಸೌಲಭ್ಯಗಳನ್ನು ಸಾಮಾಜಿಕವಾಗಿ ತಲುಪಿಸಲು, ನಗರದ ಅಭಿವೃದ್ಧಿ ಜೊತೆಗೆ ಸಾಮಾಜಿಕ ಸೇವೆ ಮಾಡಲು ಅವಕಾಶ ಈ ಚುನಾವಣೆಯಲ್ಲಿ ನೀಡಿ. ನನ್ನ ಬಳಿ ಹಣ ಇಲ್ಲ. ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಮತಯಾಚನೆ ಮಾಡುತ್ತೇನೆ. ನನ್ನ ಅನೇಕ ಸ್ನೇಹಿತರು, ಹಿತೈಷಿಗಳು, ಸಮುದಾಯದ ಅನೇಕರು ಸಹ ತಮ್ಮ ಕೈಯಲ್ಲಾದ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅಂಥ ಸಮಸ್ಯೆಗಳನ್ನು ಅತೀ ಶೀಘ್ರವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಜನರಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಸಿಗುವ ಶಾಸಕನಾಗುವ ಹಂಬಲ ಇದೆ. ನಗರದ ಪಾಲಿಕೆ ಸದಸ್ಯರ ಸಹಕಾರದೊಂದಿಗೆ ವಾರ್ಡ್ (WARD)ನಲ್ಲಿ ಕುಂದುಕೊರತೆ ಸಭೆ, ಜನಸ್ಪಂದನ ಸಭೆ, ಜನರು ನೇರವಾಗಿ ಭೇಟಿ ಮಾಡುವಂತೆ ಶಾಸಕರ ಕಚೇರಿ (OFFICE) , ನಗರದ ಅಭಿವೃದ್ಧಿ, ಶಿಕ್ಷಣ (EDUCATION) ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಯಾವುದೇ ಸಮಸ್ಯೆ ಇರಲಿ, ಪರಿಶೀಲಿಸಿ ಪ್ರಾಮಾಣಿಕವಾಗಿ ಪರಿಹರಿಸುವ ಕೆಲಸ ಮಾಡುತ್ತೇನೆ. ಯಾರು ಗೆದ್ದು ಏನು ಮಾಡಿದ್ದಾರೆ ಯಾರು ಹೇಗೆ? ದಾವಣಗೆರೆ ರಾಜಕೀಯ ಹೇಗೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು.
ಹೊಸದಾಗಿ ಮತದಾನ ಮಾಡುವ ಯುವಕ, ಯುವತಿಯರು ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ತನಗೆ ಮತ ನೀಡಿ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಉದಯಕುಮಾರ್ ನಾವಲಗಿ, ನಿರಂಜನ್, ಶರತ್ ಮತ್ತಿತರರು ಹಾಜರಿದ್ದರು.