ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರಕರಣವೊಂದರಲ್ಲಿ, ತನ್ನ ಪತ್ನಿ ನಾಪತ್ತೆಯಾಗಲು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳೇ ಕಾರಣ ಎಂದು ಕಥೆ ಕಟ್ಟಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.
ಪಂಜಾಬ್ ಮೂಲದ ಗುರಿಂದರ್ ಸಿಂಗ್ ಗಿಲ್ (28) ಬಂಧಿತ ಆರೋಪಿ. ಈತನ ಪತ್ನಿ ಜಾಸ್ಮಿನ್ ಗಿಲ್ (30) ಕೊಲೆಯಾದ ದುರ್ದೈವಿ. ಇವರು ಭಾರತೀಯ ಮೂಲದ ನರ್ಸ್ ಆಗಿದ್ದು, ದಂಪತಿಗೆ 8 ತಿಂಗಳ ಕಂದಮ್ಮನಿದೆ.
ಪ್ರಕರಣದ ಹಿನ್ನೆಲೆ:
ಜಾಸ್ಮಿನ್ ಗಿಲ್ ಅವರು ಸೆಪ್ಟೆಂಬರ್ 30 ರಂದು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅಕ್ಟೋಬರ್ 4 ರಂದು ಅವರ ಸೋದರಸಂಬಂಧಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ, ತಮ್ಮ ಮನೆಯಿಂದ ಮೇಲ್ ಸಂಗ್ರಹಿಸುತ್ತಿದ್ದಾಗ ICE ಅಧಿಕಾರಿಗಳು ತನ್ನ ಪತ್ನಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಪತಿ ಗುರಿಂದರ್ ಸುಳ್ಳು ಕಥೆ ಹೇಳಿದ್ದನು.
ಆದರೆ, ಪೊಲೀಸರು ವಲಸೆ ಇಲಾಖೆಯನ್ನು ಸಂಪರ್ಕಿಸಿ ಪರಿಶೀಲಿಸಿದಾಗ, ಅಂತಹ ಯಾವುದೇ ಕಾರ್ಯಾಚರಣೆ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು.
ಸುಟ್ಟುಹಾಕಿದ ಮೃತದೇಹ ಪತ್ತೆ:
ದಂಪತಿಗಳ ನಡುವೆ ವಿಚ್ಛೇದನ ಹಾಗೂ ಮಗುವಿನ ವಶಕ್ಕೆ ಪಡೆದುಕೊಳ್ಳುವ ವಿಚಾರವಾಗಿ ಕಾನೂನು ಸಮರ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗುರಿಂದರ್ ನೀಡಿದ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.
ಅಕ್ಟೋಬರ್ 14 ರಂದು ಆರೋಪಿ ಗುರಿಂದರ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ದು, ಜಾಮೀನುರಹಿತ ಬಂಧನದಲ್ಲಿರಿಸಿದ್ದಾರೆ. ಮೃತ ಜಾಸ್ಮಿನ್ ಅವರ ಅಂತಿಮ ವಿಧಿವಿಧಾನಗಳಿಗಾಗಿ ಹಾಗೂ ಅವರ 8 ತಿಂಗಳ ಮಗುವಿನ ಭವಿಷ್ಯಕ್ಕಾಗಿ GoFundMe ಮೂಲಕ ನಿಧಿ ಸಂಗ್ರಹಿಸಲಾಗುತ್ತಿದ್ದು, ಈಗಾಗಲೇ $21,000 ಗೂ ಅಧಿಕ ಹಣ ಸಂಗ್ರಹವಾಗಿದೆ.





Leave a comment