Home ಕ್ರೈಂ ನ್ಯೂಸ್ ಪೆಟ್ರೋಲ್ ಬಂಕ್ ಸೀಲ್ ಮಾಡಲು ತೆರಳಿದ್ದ ಇಂಡಿಯನ್ ಆಯಿಲ್ ಅಧಿಕಾರಿಯ ಭೀಕರ ಕೊಲೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪೆಟ್ರೋಲ್ ಬಂಕ್ ಸೀಲ್ ಮಾಡಲು ತೆರಳಿದ್ದ ಇಂಡಿಯನ್ ಆಯಿಲ್ ಅಧಿಕಾರಿಯ ಭೀಕರ ಕೊಲೆ!

Share
ಪೆಟ್ರೋಲ್
Share

ಹಿಂಗೋಲಿ (ಮಹಾರಾಷ್ಟ್ರ): ಕರ್ತವ್ಯ ನಿರತ ಅಧಿಕಾರಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಚೋಂಧಿಯಲ್ಲಿ ನಡೆದಿದೆ. ತಾಂತ್ರಿಕ ಕಾರಣಗಳಿಂದ ಮುಚ್ಚಲ್ಪಟ್ಟಿದ್ದ ಪೆಟ್ರೋಲ್ ಬಂಕ್ ಸೀಲ್ ಮಾಡಲು ತೆರಳಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಸೇಲ್ಸ್ ಮ್ಯಾನೇಜರ್ ಮಹೇಶ್ ಶೇಳ್ಕೆ ಅವರನ್ನು ಬಂಕ್ ಮಾಲೀಕನ ಮಗ 7 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಘಟನೆಯ ಹಿನ್ನೆಲೆ:

ಹಿಂಗೋಲಿ ಜಿಲ್ಲೆಯ ಚೋಂಧಿಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಕಳೆದ ಮೂರು ತಿಂಗಳುಗಳಿಂದ ತಾಂತ್ರಿಕ ತೊಂದರೆಗಳಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಮಂಗಳವಾರ ಸಂಜೆ ಸೇಲ್ಸ್ ಮ್ಯಾನೇಜರ್ ಮಹೇಶ್ ಶೇಳ್ಕೆ ಮತ್ತು ಅವರ ತಂಡ ಬಂಕ್ ಸೀಲ್ ಮಾಡಲು ತೆರಳಿದ್ದರು. ಈ ವೇಳೆ ಪೆಟ್ರೋಲ್ ಬಂಕ್ ಮಾಲೀಕ ಸಾಹೇಬ್ರಾವ್ ಪಾಂಡವ್‌ವೀರ್ ಕುಟುಂಬಸ್ಥರು ಬಂಕ್ ಮರುಆರಂಭಿಸಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಅಧಿಕಾರಿಗಳು ಇದಕ್ಕೆ ನಿರಾಕರಿಸಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು.

ವಾಗ್ವಾದ ವಿಕೋಪಕ್ಕೆ ತಿರುಗಿ, ಮಾಲೀಕನ ಮಗ ಉಮೇಶ್ ಪಾಂಡವ್‌ವೀರ್ ಎಂಬಾತ ಮಹೇಶ್ ಶೇಳ್ಕೆ ಅವರ ಹೊಟ್ಟೆ, ಬೆನ್ನು ಹಾಗೂ ಮುಖದ ಭಾಗಕ್ಕೆ 7 ಬಾರಿ ಮಾರಕಾಸ್ತ್ರದಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹೇಶ್ ಸ್ಥಳದಲ್ಲೇ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸೆದ ಬಳಿಕ ಆರೋಪಿ ಹಾಗೂ ಆತನ ಸಹಚರರು ಎರಡು ಕಾರುಗಳಲ್ಲಿ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸ್ ತನಿಖೆ ಮತ್ತು ಆಕ್ರೋಶ:

ಕುರುಂದಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಇಂಡಿಯನ್ ಆಯಿಲ್ ಅಧ್ಯಕ್ಷ ಅರವಿಂದ್ ಸಿಂಗ್ ಸಾಹ್ನಿ, ಕರ್ತವ್ಯ ನಿರತ ಅಧಿಕಾರಿಯ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles