SUDDIKSHANA KANNADA NEWS/ DAVANAGERE/ DATE-27-04-2025
ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ಉಗ್ರರ ದಾಳಿ ನೋಡಿ ಭಾರತೀಯರ ರಕ್ತ ಕುದಿಯುತ್ತಿದೆ. ಯಾವುದೇ ಕಾರಣಕ್ಕೂ ಉಗ್ರರನ್ನು ಬಿಡುವ ಪ್ರಶ್ನೆಯೇ ಇಲ್ಲ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಹೋರಾಟ ಶುರು ಮಾಡಿದ್ದೇವೆ. 140 ಕೋಟಿ ಜನರ ಗುರಿ ಈಡೇರಿಸುತ್ತೇವೆ. ದೃಢ, ಇಚ್ಚಾಶಕ್ತಿಯಿಂದ ಉಗ್ರವಾದಕ್ಕೆ ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಜಗತ್ತಿನ ರಾಷ್ಟ್ರಗಳು ಭಾರತದ ಪರ ನಿಂತಿವೆ. ಉಗ್ರರ ಪೈಶಾಚಿಕ ಕೃತ್ಯಕ್ಕೆ ವಿಶ್ವವೇ ಖಂಡನೆ ವ್ಯಕ್ತಪಡಿಸಿದೆ. ಭಾರತದ ಅಭಿವೃದ್ಧಿಯನ್ನು ವಿರೋಧಿ ರಾಷ್ಟ್ರಗಳು ಸಹಿಸುತ್ತಿಲ್ಲ. ದಾಳಿಕೋರರಿಗೆ ತಕ್ಕ ಉತ್ತರ ಕೊಡುತ್ತೇವೆ. ಭಾರತದ ಅಭಿವೃದ್ಧಿ ಕಂಡು ಹೊಟ್ಟೆ ಉರಿ ಬಂದಿದೆ. ಯಾವುದೇ ಕಾರಣಕ್ಕೂ ಬಿಡಲ್ಲ. ಬಲಿಯಾದ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡುವವರೆಗೆ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಶಾಲೆ ಕಾಲೇಜು ನಿರ್ಮಾಣ ಅಭೂತಪೂರ್ವವಾಗಿ ನಡೆಯುತ್ತಿದೆ. ಅಭಿವೃದ್ಧಿ ಪರ್ವ ಶುರುವಾಗಿತ್ತು. ಇದನ್ನು ಸಹಿಸದೇ ಈ ಕೃತ್ಯ ಎಸಗಲಾಗಿದೆ. ಜಮ್ಮು ಕಾಶ್ಮೀರ ಅಭಿವೃದ್ಧಿ
ನಾಗಾಲೋಟದಲ್ಲಿ ಮುಂದುವರಿಯಿತ್ತು. ಇದನ್ನು ಸಹಿಸದೇ ಕುಕೃತ್ಯ ಎಸಗಲಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.