ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭರ್ಜರಿ ಜಯ ಗಳಿಸಿದ ಭಾರತ ಸೆಮಿಫೈನಲ್ ಗೆ ಎಂಟ್ರಿ: ಸಿಂಹಳೀಯರ ಬಗ್ಗು ಬಡಿದ ಟೀಂ ಇಂಡಿಯಾ, 302 ರನ್ ಗಳ ವಿಶ್ವದಾಖಲೆ ಜಯ ಸಾಧಿಸಿದ ರೋಹಿತ್ ಪಡೆ…!

On: November 2, 2023 3:40 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-11-2023

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. 302 ರನ್ ಗಳ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ ಸತತ ಏಳು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. 55 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು 302 ರನ್ ಗಳ ವಿಜಯ ಸಾಧಿಸಿತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತವು ಮತ್ತೊಂದು ಅತ್ಯುತ್ತಮ ಪ್ರದರ್ಶನ ನೀಡಿತು. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ ಪಡೆಯು ಶ್ರೀಲಂಕಾವನ್ನು ಹೀನಾಯವಾಗಿ ಸೆದೆಬಡಿಯಿತು.

ಶ್ರೀಲಂಕಾವನ್ನು 302 ರನ್‌ಗಳಿಂದ ಸೋತು ಸುಣ್ಣವಾಯಿತು. ಕೆಡವಿತು. ಈ ಫಲಿತಾಂಶದೊಂದಿಗೆ, ಭಾರತವು ಅನೇಕ ಪಂದ್ಯಗಳಲ್ಲಿ ಏಳನೇ ಜಯವಾಗಿದೆ, ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ರಾಷ್ಟ್ರವಾಯಿತು.

ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಭಾರತ ಬೃಹತ್ ಮೊತ್ತ ಪೇರಿಸಿತು. ಟಾಸ್ ಗೆದ್ದ ಶ್ರೀಲಂಕಾ ತಂಡವು ಭಾರತಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆರಂಭದಲ್ಲಿಯೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಭರ್ಜರಿ ಜೊತೆಯಾಟದ ನೆರವಿನಿಂದ ಆರಂಭಿಕ ಆಘಾತದಿಂದ ಪಾರಾಯಿತು.

8 ವಿಕೆಟ್ ಕಳೆದುಕೊಂಡು ಭಾರತ ತಂಡವು 357 ರನ್ ಗಳ ಬೃಹತ್ ಮೊತ್ತ ಪೇರಿಸಿತು. ರೋಹಿತ್ ಶರ್ಮಾ ಅವರು ದಿಲ್ಶನ್ ಮಧುಶಂಕ ಅವರ ಮೊದಲ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕೊಹ್ಲಿ ಮತ್ತು ಗಿಲ್ ತಮ್ಮ ಅರ್ಧಶತಕಗಳನ್ನು ದಾಖಲಿಸಿದರಲ್ಲದೇ, 189 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಮಧುಶಂಕ ಅವರು ಸ್ಟ್ಯಾಂಡ್ ಅನ್ನು ಮುರಿದರು. ಕೆ. ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಹೆಚ್ಚು ರನ್ ಪೇರಿಸಲು ಸಾಧ್ಯವಾಗಲಿಲ್ಲ. ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ರವೀಂದ್ರ ಜಡೇಜಾ ಅವರು ಬಿರುಸಿನ
ಆಟಕ್ಕೆ ಮುಂದಾದರು.

ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 82 ರನ್ ಸಿಡಿಸಿದರು. ಅಯ್ಯರ್ ಹಾಗೂ ರವೀಂದ್ರ ಜಡೇಜಾರ ಬಿರುಸಿನ ಆಟದಿಂದಾಗಿ 350ರ ಗಡಿಯನ್ನು ಭಾರತ ದಾಟಿತು.

ಇನ್ನು 358 ರನ್ ಗಳ ಬೃಹತ್ ಬೆನ್ನಟ್ಟಿದ ಶ್ರೀಲಂಕಾ ಯಾವ ಹಂತದಲ್ಲಿಯೂ ಪ್ರತಿರೋಧ ತೋರಲೇ ಇಲ್ಲ. ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಎಸೆತದಲ್ಲಿಯೇ ವಿಕೆಟ್ ಸಿಕ್ಕಿತು. 22 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡು ಸೋಲು ಖಚಿತವಾಗಿತ್ತು. ಯಾವ ಹಂತದಲ್ಲಿಯೂ ಪ್ರತಿರೋಧವೇ ಬರಲಿಲ್ಲ. ಮೊಹಮದ್ ಶಮಿ ಐದು ವಿಕೆಟ್ ಪಡೆದು ಮಿಂಚಿದರೆ, ಸಿರಾಜ್ ಅಹಮದ್ ಮೂರು ವಿಕೆಟ್ ಪಡೆದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೀನಾಯವಾಗಿ ಶ್ರೀಲಂಕಾ ತಂಡ ಸೋತ ಇತಿಹಾಸ ಬರೆದರೆ, ಭಾರತ ಐತಿಹಾಸಿಕ, ದಾಖಲೆ ವಿಜಯ ಸಾಧಿಸಿತು. ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment