SUDDIKSHANA KANNADA NEWS/ DAVANAGERE/ DATE:24-02-2025
ದುಬೈ: ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಭಾರತ ಸುಲಭ ಗೆಲುವು ದಾಖಲಿಸಿತು.
ಪಾಕಿಸ್ತಾನ ನೀಡಿದ 242 ರನ್ ಗಳ ಬೆನ್ನತ್ತಿದ ಭಾರತ ತಂಡವು ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ 42.3 ಓವರ್ ಗಳಲ್ಲಿಯೇ ಗುರಿ ತಲುಪಿತು. ವಿರಾಟ್ ಕೊಹ್ಲಿ ಶತಕ ಬಾರಿಸುವ ಜೊತೆಗೆ 14 ಸಾವಿರ ರನ್ ಪೂರೈಸಿದ ಕೀರ್ತಿಗೆ ಪಾತ್ರರಾದರು. ಶತಕಕ್ಕೆ ನಾಲ್ಕು ರನ್ ಬೇಕಿದ್ದಾಗ ಬೌಂಡರಿ ಬಾರಿಸಿ ಸಂಭ್ರಮಿಸಿದರು. ಶ್ರೇಯಸ್ ಅಯ್ಯರ್ 56, ಶುಭಮನ್ ಗಿಲ್ 46 ರನ್ ಬಾರಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡವು ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಸ್ವಲ್ಪ ಚೇತರಿಸಿಕೊಂಡರೂ ಮಧ್ಯಮ ಕ್ರಮಾಂಕದ ಆಟಗಾರರು ಕೈಕೊಟ್ಟರು. 49.4 ಓವರ್ ಗಳಲ್ಲಿ 241 ರನ್ ಗಳಿಗೆ ಆಲ್ ಔಟ್ ಆಯಿತು. ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ಫೀಲ್ಡರ್ ಕ್ಯಾಚ್ ಗಳನ್ನು ಕೈ ಚೆಲ್ಲಿದರು. ಭಾರತವು ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಪಾಕಿಸ್ತಾನವನ್ನು ಬಗ್ಗು ಬಡಿಯಿತು.
ಪಾಕಿಸ್ತಾನದ ಸೌತ್ ಶಕೀಲ್ 62 ಒಬ್ಬರೇ ಅರ್ಧಶತಕ ಗಳಿಸಿದ್ರು. ಉಳಿದಂತೆ ಬ್ಯಾಟ್ಸ್ ಮನ್ ಗಳು ಫೇಲ್ ಆದ್ರು. ಟೀಂ ಇಂಡಿಯಾ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯ 2, ಹರ್ಷಿತಾ ರಾಣಾ ಒಂದು ವಿಕೆಟ್ ಪಡೆದರು.