ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿಂಹಳೀಯರ ಸದ್ದಡಗಿಸಿ 41 ರನ್ ಗಳ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ(India national cricket team), ಮಿಂಚಿದ ಕುಲದೀಪ್ ಯಾದವ್, ಫೈನಲ್ ಗೆ ಲಗ್ಗೆ ಇಟ್ಟ ಭಾರತ

On: September 12, 2023 5:45 PM
Follow Us:
INDIA CRICKET TEAM WIN
---Advertisement---

SUDDIKSHANA KANNADA NEWS/ DAVANAGERE/ DATE:12-09-2023

ಕೊಲಂಬೊ: ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ India national cricket team 41 ರನ್ ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಏಷ್ಯಾ ಕಪ್ ನಲ್ಲಿ ಫೈನಲ್ ಗೆ ಭಾರತ ಲಗ್ಗೆ ಇಟ್ಟಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವೆ ಫೈನಲ್ ಗೆ ಸೆಣಸಾಟ ನಡೆಯಲಿದೆ.

ರವೀಂದ್ರ ಜಡೇಜಾ ಹಾಗೂ ಜಸ್ಮಿತ್ ಬೂಮ್ರಾ ತಲಾ 2, ಮೊಹಮ್ಮದ್ ಸಿರಾಜ್ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು. ಶ್ರೀಲಂಕಾ ತಂಡವು ಕೇವಲ 172 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಈ ಸುದ್ದಿಯನ್ನೂ ಓದಿ:

ಕೇಂದ್ರೀಯ ಬ್ಯಾಂಕ್ ಗೆ ತಲೆನೋವು ತಂದ ಚಿಲ್ಲರೆ ಹಣದುಬ್ಬರ ಇಳಿಕೆ: ರಿಯಲ್ ಎಸ್ಟೇಟ್ (Real estate) ಮೇಲೆ ಪರಿಣಾಮ ಬೀರುವುದು ಹೇಗೆ…?

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಆರಂಭಿಕ ಆಟಗಾರ ರೋಹಿತ್ ಶರ್ಮಾ (53) ಅರ್ಧಶತಕ, ಕೆ. ಎಲ್. ರಾಹುಲ್ 39, ಇಶಾನ್ ಕಿಶನ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 49.1 ಓವರ್ ಗಳಲ್ಲಿ 213 ರನ್ ಗಳಿಸಿತ್ತು.

214 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಆರಂಭಿಕ ಆಘಾತ ಅನುಭವಿಸಿತು. 99 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಧನಂಜಯ ಡಿಸಿಲ್ವಾ 41 ಹಾಗೂ ದುನಿತ್ ವೆಲ್ಲಲಾಗೆ 42 ರನ್ ಗಳಿಸಿ ಪ್ರತಿರೋಧ ತೋರಿದರು. ಆದ್ರೆ, ಭಾರತ ಬೌಲರ್ ಗಳ ಕರಾರುವಕ್ ದಾಳಿಗೆ ಶ್ರೀಲಂಕಾ ಮಣಿಯಿತು. ಭಾರತ ತಂಡವು ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದ ಜೊತೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.

ಇನ್ನು 150 ವಿಕೆಟ್ ಪಡೆದ ಕುಲದೀಪ್ ಯಾದವ್ ಮಿಂಚಿದರು. ಪಾಕಿಸ್ತಾನದ ವಿರುದ್ಧ ಕರಾರುವಕ್ ದಾಳಿ ನಡೆಸಿ ಪಾಕ್ ಬ್ಯಾಟ್ಸಮನ್ ಗಳಿಗೆ ಸಿಂಹಸ್ವಪ್ನವಾಗಿದ್ದ ಕುಲದೀಪ್ ಯಾದವ್ ಅವರು, ಇಂದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಭಾರತ ಸಾಧಾರಣ ಮೊತ್ತ ಗಳಿಸಿದರೂ ಶ್ರೀಲಂಕಾ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ವಿಶ್ವಕಪ್ ಗೆ ಮುನ್ನ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವು ಭರ್ಜರಿ ಜಯ ದಾಖಲಿಸುವ ಮೂಲಕ ಬಲಿಷ್ಠ ತಂಡ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಆರಂಭದಲ್ಲಿ ಭಾರತ ತಂಡವು ರನ್ ಗಳಿಸಲು ತಿಣುಕಾಡಿದರೂ ರೋಹಿತ್ ಶರ್ಮಾ ಆಸರೆಯಾದರು. ಆದ್ರೆ, ಶ್ರೀಲಂಕಾದ ದುನಿತ್ ವೆಲೆಲ್ಲಾಗೆ 5 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆದ್ರೆ, ಭಾರತ ತಂಡವು ಫೀಲ್ಡಿಂಗ್, ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸಿಂಹಳೀಯರನ್ನು ಅವರ ನೆಲದಲ್ಲಿ ಮಣ್ಣು ಮುಕ್ಕಿಸಿತು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment