SUDDIKSHANA KANNADA NEWS/ DAVANAGERE/ DATE:12-09-2023
ನವದೆಹಲಿ: ದೀನ ದಯಾಳ್ ಸ್ಪರ್ಶ್ ಯೋಜನೆ. ಆರನೇ ತರಗತಿಯಿಂದ 9ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ. ಭಾರತೀಯ ಅಂಚೆ (India Post) ಇಲಾಖೆಯು ಈ ವಿದ್ಯಾರ್ಥಿಗಳಿಗೆ ಖುಷಿಯ ಸುದ್ದಿ ಕೊಟ್ಟಿದೆ.
6 ರಿಂದ 9 ನೇ ತರಗತಿಯವರೆಗೆ ಓದುತ್ತಿರುವ ಸ್ಟೂಡೆಂಟ್ಸ್ ಗಳಿಗೆ ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆದಿದೆ.
ಈ ಸುದ್ದಿಯನ್ನೂ ಓದಿ:
M. P. Renukacharya: ಎಂ. ಪಿ. ರೇಣುಕಾಚಾರ್ಯ ಉರುಳಿಸುತ್ತಿದ್ದಾರೆ ದಾಳ… ದಾವಣಗೆರೆ ಬಿಜೆಪಿಯಲ್ಲಿ ಶುರುವಾಗಿದೆ ತಳಮಳ… ಬಂಡಾಯದ ಬೇಗೆಯಲ್ಲಿ ಬೇಯುತಿದೆ ಬಿಜೆಪಿ…!
2022-23 ಶೈಕ್ಷಣಿಕ ವರ್ಷದಲ್ಲಿ ಶೇ.60 ಅಂಕಗಳನ್ನು ಹೊಂದಿರುವ ಮತ್ತು ಅಂಚೆ ಚೀಟಿಗಳ ಸಂಗ್ರಹದ ಠೇವಣಿ ಖಾತೆ ಫಿಲಾಟೆಲಿಕ್ ಕ್ಲಬ್ನ ಸದಸ್ಯರು ಮತ್ತು ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಮುಂದುವರಿಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ವಾರ್ಷಿಕ ರೂ. 6 ಸಾವಿರಗಳ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ (ಲಿಖಿತ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆ ಚೀಟಿಗಳ ಸಂಗ್ರಹ ಯೋಜನೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬೇಕು.
ಸ್ಪರ್ಶ್ (ಸ್ಕಾಲರ್ಶಿಪ್ ಫಾರ್ ಪ್ರಮೋಷನ್ ಆಫ್ ಆಟಿಟ್ಯೂಡ್ ಅಂಡ್ ರಿಸರ್ಚ್ ಇನ್ ಸ್ಟ್ಯಾಂಪ್ ಹಾಬಿ) ಸ್ಟ್ಯಾಂ ಪ್ ಗಳಲ್ಲಿ ಅಭಿರುಚಿ ಮತ್ತು ಸಂಶೋಧನೆ ಹವ್ಯಾಸವಾಗಿ ಉತ್ತೇಜಿಸಲು ವಿದ್ಯಾರ್ಥಿ ವೇತನ ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸಲು
ಮತ್ತು ಪೂರಕವಾಗಿ ಸಮರ್ಥನೀಯ ರೀತಿಯಲ್ಲಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸುವುದು ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ.
ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲೆವೆಲ್-1 ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ (ಲಿಖಿತ)ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಪೋಸ್ಟಿಂಗ್ ಮಾಡಲು ಸೆಪ್ಟೆಂಬರ್, 15 ಕೊನೆಯ ದಿನವಾಗಿದೆ. ಕರ್ನಾಟಕದ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಸ್ಕಾಲರ್ಶಿಪ್ ಯೋಜನೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ www.indiapost.gov.in ಮತ್ತು www.karnatakapost.gov.in ನ್ನು ಮಾಹಿತಿ ಪಡೆಯಬಹುದಾಗಿದೆ ಅಂಚೆ ಕಚೇರಿಯ ಅಧೀಕ್ಷಕರು ತಿಳಿಸಿದ್ದಾರೆ.