ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BCCI-PCB ನಡುವಿನ ಒಪ್ಪಂದ: ಭಾರತದ ಎಲ್ಲಾ ಪಂದ್ಯಗಳು ದುಬೈಲಿ ಫಿಕ್ಸ್!

On: November 28, 2024 11:35 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:28-11-2024

ನವದೆಹಲಿ: Champions Trophy 2025ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲ್ಲಿದ್ದು 2 ಗುಂಪುಗಳಾಗಿ ವಿಭಜಿಸಲಾಗಿದೆ, ಮೊದಲ ಸುತ್ತಿನ ಪಂದ್ಯಗಳು ಆಯಾ ಗುಂಪಿನ ತಂಡಗಳ ಜೊತೆ ನಡೆಯಲಿದ್ದು ಭಾರತ ಮತ್ತು ಪಾಕಿಸ್ತಾನ 2 ತಂಡಗಳು ಒಂದೇ ಗುಂಪಿನಲ್ಲಿದ್ದು ಮೊದಲ ಸುತ್ತಿನಲ್ಲಿಯೇ ಮುಖಾಮುಖಿಯಾಗಲಿವೆ.

2025ರ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಚರ್ಚೆಗಳು ಜೋರಾಗಿದ್ದು, ಒಂದೆಡೆ (PCB) ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವುದಿಲ್ಲ ಎಂದರೆ ಮತ್ತೊಂದೆಡೆ ಭಾರತ ತಂಡವು ಸಹ ನಾವು ಪಾಕಿಸ್ತಾನಕ್ಕೆ ಆಡಲು ಬರುವುದಿಲ್ಲ ಎಂದು ಹೇಳಿದೆ. ಹೀಗಾಗಿಯೇ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಎಲ್ಲಿ ನಡೆಸಬೇಕು ಎಂಬ ಪ್ರೆಶ್ನೆ ಹುಟ್ಟಿಕೊಂಡಿದೆ. ಈ ಪ್ರೆಶ್ನೆಗೆ ಈಗ ಪಾಕ್ ಮಾಜಿ ಆಟಗಾರ ರಶೀದ್ ಲತೀಫ್ ಉತ್ತರ ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಪ್ರಕಾರ Champion Trophy 2025 ಅನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಲಿದೆ, ಭಾರತ ಮತ್ತು ಪಾಕಿಸ್ತಾನ ಉಭಯ ತಂಡಗಳ ನಡುವೆ ಈಗಾಗಲೇ ಒಪ್ಪಂದವಾಗಿದೆ ಎಂದು ಹೇಳಿದರು.

ಈ ಒಪ್ಪಂದದ ಪ್ರಕಾರ ಚಾಂಪಿಯನ್ ಟ್ರೋಫಿ ಈ ಬಾರಿ ಪಾಕಿಸ್ತಾನದಲ್ಲೇ ನಡೆಯಲಿದ್ದು ಭಾರತದ ಪಂದ್ಯಗಳನ್ನು ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಖಾಸಗಿ ಚಾನಲ್ ಮೂಲಕ ಬಹಿರಂಗ ಪಡೆಸಿದ್ದಾರೆ.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂಚಿಸಿದೆ. ಇದರಿಂದ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಿಂದ ಕೈ ತಪ್ಪದಂತೆ ನೋಡಿಕೊಂಡಿದೆ, ಹೀಗಾಗಿ ಭಾರತ ತಂಡವು ಪಾಕ್ ಗೆ ಬಂದು ಆಡುವುದಿಲ್ಲ, ಬದಲಾಗಿ ದುಬೈಗೆ ತೆರಳಿ ಟೂರ್ನಿಯನ್ನು ಆಡಲಿದ್ದಾರೆ, ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲೆ ಆಡಲಿದೆ ಎಂದು ತಿಳಿಸಿದರು.

ಹಾಗೆಯೇ ಒಪ್ಪಂದದ ಪ್ರಕಾರ ಭಾರತ ಸೆಮಿಫೈನಲ್ ಅಥವಾ ಫೈನಲ್ ಪ್ರವೇಶಿಸಿದರೆ ಅ ಪಂದ್ಯಗಳನ್ನು ದುಬೈನಲ್ಲೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಫೆಬ್ರುವರಿ 19ರಿಂದ ಚಾಂಪಿಯನ್ ಟ್ರೋಫಿ2025 ಆರಂಭಗೊಳ್ಳಲಿದ್ದು ಮೊದಲ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ ಇನ್ನೂ ಫೈನಲ್ ಪಂದ್ಯವು ಮಾರ್ಚ್ 9ರಂದು ನಡೆಯಲಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment